For Quick Alerts
  ALLOW NOTIFICATIONS  
  For Daily Alerts

  ಆಮಿರ್ ಖಾನ್ ಅರಸಿ ಬಂದ ಹಾಲಿವುಡ್ ಸ್ಟಾರ್ ನಿರ್ದೇಶಕರು, ಜೊತೆಗೆ ಧನುಶ್!

  |

  ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ 'ಅವೇಂಜರ್ಸ್' ಸಿನಿಮಾ ಸರಣಿ ಗೊತ್ತಿದರಿವು ಸಿನಿಮಾ ಪ್ರೇಮಿಗಳು ಬಹಳ ಕಡಿಮೆ. ವಿಶ್ವದ ಜನಪ್ರಿಯ ಸಿನಿಮಾ ಸರಣಿಗಳಲ್ಲಿ ಒಂದದು.

  'ಅವೇಂಜರ್ಸ್‌' ಸರಣಿಯ ನಾಲ್ಕು ಸಿನಿಮಾಗಳು ಈವರೆಗೆ ತೆರೆ ಕಂಡಿವೆ. ನಾಲ್ಕೂ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ನಿರ್ಮಿಸಿವೆ. ಈ ನಾಲ್ಕು ಸಿನಿಮಾಗಳಲ್ಲಿ ಎರಡು ಸಿನಿಮಾವನ್ನು ನಿರ್ದೇಶನ ಮಾಡಿದ್ದು ರೂಸ್ಸೋ ಸಹೋದರರು.

  ಅವೇಂಜರ್ಸ್‌ ಮಾತ್ರವೇ ಅಲ್ಲದೆ ಹಲವು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರೂಸ್ಸೊ ಸಹೋದರರು ಇದೀಗ ಭಾರತಕ್ಕೆ ಬಂದಿದ್ದಾರೆ. ನೇರವಾಗಿ ಆಮಿರ್ ಖಾನ್‌ ನಿವಾಸಕ್ಕೆ ತೆರಳಿ ಅಪ್ಪಟ ಗುಜರಾತಿ ಭೋಜನ ಸವಿದಿದ್ದಾರೆ!

  ರೋಸ್ಸೋ ಸಹೋದರರು ಆಮಿರ್ ಖಾನ್ ಮನೆಗೆ

  ರೋಸ್ಸೋ ಸಹೋದರರು ಆಮಿರ್ ಖಾನ್ ಮನೆಗೆ

  ಹಾಲಿವುಡ್‌ನ ಜನಪ್ರಿಯ ನಿರ್ದೇಶಕರಾದ ರೂಸ್ಸೋ ಸಹೋದರರು ಇಂದು ಆಮಿರ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದರು. ಜೊತೆಗೆ ತಮಿಳಿನ ಸ್ಟಾರ್ ನಟ ಧನುಶ್ ಸಹ ಇದ್ದರು. ಮನೆಗೆ ಬಂದ ಹಾಲಿವುಡ್‌ ಅತಿಥಿಗಳಿಗಾಗಿ ಆಮಿರ್ ಖಾನ್ ವಿಶೇಷವಾಗಿ ಗುಜರಾತಿ ಖಾದ್ಯಗಳನ್ನು ಮಾಡಿಸಿ ಅತಿಥಿ ಸತ್ಕಾರ ಮಾಡಿದ್ದಾರೆ. ತಮಿಳುನಾಡಿನ ಧನುಶ್ ಸಹ ಗುಜರಾತಿ ಭೋಜನ ತಿಂದು ಖುಷಿ ಪಟ್ಟಿದ್ದಾರೆ.

  'ದಿ ಗ್ರೇ ಮ್ಯಾನ್' ಸಿನಿಮಾದ ಪ್ರಚಾರ

  'ದಿ ಗ್ರೇ ಮ್ಯಾನ್' ಸಿನಿಮಾದ ಪ್ರಚಾರ

  ರೂಸ್ಸೋ ಸಹೋದರರು 'ದಿ ಗ್ರೇ ಮ್ಯಾನ್' ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಹಾಲಿವುಡ್‌ ಸ್ಟಾರ್‌ಗಳೊಟ್ಟಿಗೆ ಧನುಶ್ ಸಹ ನಟಿಸಿದ್ದು, ಸಿನಿಮಾದ ಪ್ರಚಾರಕ್ಕಾಗಿ ರೂಸ್ಸೋ ಸಹೋದರರು ಭಾರತಕ್ಕೆ ಬಂದಿದ್ದಾರೆ. ನಿನ್ನೆ (ಜುಲೈ 20) ನೆಟ್‌ಫ್ಲಿಕ್ಸ್‌ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮಕ್ಕೆ ರೂಸ್ಸೋ ಸಹೋದರರು ಆಮಿರ್ ಖಾನ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ತಮ್ಮ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದ ಕಾರಣ ಆಮಿರ್ ಖಾನ್ ಆ ಇವೆಂಟ್‌ಗೆ ಹಾಜರಾಗಲಾಗಿರಲಿಲ್ಲ.

  ಕ್ಷಮೆ ಕೇಳಿ ಸುಮ್ಮನಾಗಲಿಲ್ಲ ಆಮಿರ್ ಖಾನ್

  ಕ್ಷಮೆ ಕೇಳಿ ಸುಮ್ಮನಾಗಲಿಲ್ಲ ಆಮಿರ್ ಖಾನ್

  ಹಾಗೆಂದು ಕ್ಷಮೆ ಕೇಳಿ ಸುಮ್ಮನಾಗದ ಆಮಿರ್ ಖಾನ್ ರೂಸ್ಸೋ ಸಹೋದರರನ್ನು ಹಾಗೂ ಧನುಶ್ ಅನ್ನು ಒಟ್ಟಿಗೆ ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದಾರೆ. ಇವರು ಮೂವರು ಮಾತ್ರವೇ ಅಲ್ಲದೆ, ಭಾರತಕ್ಕೆ ಬಂದಿರುವ ಒಟ್ಟಾರೆ 'ದಿ ಗ್ರೇ ಮ್ಯಾನ್' ತಂಡವನ್ನು ಮನೆಗೆ ಆಹ್ವಾನಿಸಿ ಭೋಜನ ಕೂಟ ಆಯೋಜಿಸಿದ್ದಾರೆ. ಹಲವು ಸಮಯ ಭಾರತೀಯ ಸಿನಿಮಾ ಹಾಗೂ ಹಾಲಿವುಡ್‌ ಬಗ್ಗೆ ಮಾತುಕತೆ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಮಿರ್ ಖಾನ್‌ರ ವಿಚ್ಛೇಧಿತ ಪತ್ನಿ ಕಿರಣ್ ರಾವ್ ಸಹ ಜೊತೆಗೇ ಇದ್ದರು.

  'ದಿ ಗ್ರೇ ಮ್ಯಾನ್' ಸಿನಿಮಾ ಬಿಡುಗಡೆ ಆಗಲಿದೆ

  'ದಿ ಗ್ರೇ ಮ್ಯಾನ್' ಸಿನಿಮಾ ಬಿಡುಗಡೆ ಆಗಲಿದೆ

  ಇನ್ನು 'ದಿ ಗ್ರೇ ಮ್ಯಾನ್' ಸಿನಿಮಾ ಜುಲೈ 22 ರಂದು ಅಂದರೆ ನಾಳೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್ಸ್, ರ್ಯಾನ್ ಗೋಲ್ಸಿಂಗ್ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟರಿದ್ದಾರೆ. ಇನ್ನು ಆಮಿರ್ ಖಾನ್ ನಟಿಸಿರುವ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಈ ಸಿನಿಮಾವು ಹಾಲಿವುಡ್‌ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Aamir Khan hosts dinner for Hollywood director Russo brothers. Tamil actor Dhanush also invited for dinner. Russo brothers were in India for The Gray Man movie promotion.
  Friday, July 22, 2022, 8:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X