»   » ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?

ಸನ್ನಿ ಜೊತೆ ನನಗೆ ಕೆಲಸ ಮಾಡಲು ಇಷ್ಟ ಎಂದವರಾರು?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರ ಜೊತೆ ಕೆಲಸ ಮಾಡಲು ನಾನು ಸಿದ್ದ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.

ಈ ಮೊದಲು ಸನ್ನಿ ಅವರು ನಟ ಅಮೀರ್ ಖಾನ್ ಅವರ ಜೊತೆ ಸಿನಿಮಾ ಮಾಡಲು ನನಗೆ ಇಷ್ಟ ಇದೆ ಎಂದು ಯಾವುದೋ ಸಂದರ್ಶನದಲ್ಲಿ ನುಡಿದಿದ್ದಾಗ ಈ ನಟ ಒಪ್ಪಿಕೊಂಡಿರಲಿಲ್ಲ. ಇದೀಗ ಇತ್ತೀಚೆಗೆ ನಡೆದ ಸಿ.ಎನ್ ಎನ್ - ಐ.ಬಿ.ಎನ್ ಟಿವಿ ಸಂದರ್ಶನವೊಂದರಲ್ಲಿ ಪ್ರಶ್ನೆಗಳಿಗೆ ಸನ್ನಿ ಅವರು ಉತ್ತರ ನೀಡಿದ ವೈಖರಿ ನೋಡಿ ಸ್ವತಃ ಅಮೀರ್ ಅವರೇ ತಾವು ಸನ್ನಿ ಜೊತೆ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ.[ಚಿತ್ರಗಳು: 27 ತರಹೇವಾರಿ ಬಿಕಿನಿಯಲ್ಲಿ ಸನ್ನಿಯ ಸೊಗಸು]

Aamir Khan Says He Would Love To Work With Sunny Leone

ಅಂದಹಾಗೆ ಸನ್ನಿ ಅವರು ಸಂದರ್ಶನದಲ್ಲಿ, ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ವರಸೆ ನೋಡಿ ಇಡೀ ಬಾಲಿವುಡ್ ದಂಡೇ ಮೆಚ್ಚಿಕೊಂಡಿತ್ತು. ಸಂದರ್ಶನದಲ್ಲಿ ಸನ್ನಿ ಲಿಯೋನ್ ಅವರು 'ಅಮೀರ್ ಖಾನ್ ಅವರು ನನ್ನ ಜೊತೆ ನಟಿಸಲು ಒಪ್ಪದೇ ಇದ್ದರೂ ನಾನು ಅವರ ಅಭಿಮಾನಿಯಾಗಿದ್ದೇನೆ. ಅವರ ಚಿತ್ರಗಳನ್ನು ತಪ್ಪದೇ ನೋಡುತ್ತೇನೆ' ಎಂದು ಹೇಳಿದ್ದರು.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

ಸಂದರ್ಶಕರ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಿರುವ ನಟಿ ಸನ್ನಿ ಲಿಯೋನ್ ಅವರು ಬಾಲಿವುಡ್ ಖ್ಯಾತ ತಾರೆಯರಾದ ಅನುಷ್ಕಾ ಶರ್ಮಾ, ಆಲಿಯಾ ಭಟ್, ರಿಷಿ ಕಪೂರ್, ವಿದ್ಯಾ ಬಾಲನ್ ಸೇರಿದಂತೆ ಹಲವು ನಟ-ನಟಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ ಅಮೀರ್ ಅವರು ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಆದರೆ ಇದೀಗ ಸನ್ನಿ ಸಂದರ್ಶನ ವೀಕ್ಷಿಸಿ ನಟ ಅಮೀರ್ ಖಾನ್ ಅವರು 'ನಟಿ ಸನ್ನಿ ಲಿಯೋನ್ ಅವರು ಸಂದರ್ಶನದಲ್ಲಿ ಅತ್ಯಂತ ಗೌರವಯುತವಾದ ಉತ್ತರ ನೀಡಿದ್ದಾರೆ. ಆ ಸ್ಥಳದಲ್ಲಿ ನಾನಿದ್ದರೂ ಸಂದರ್ಶಕನಿಗೆ ಅಂತಹದೇ ಉತ್ತರ ನೀಡುತ್ತಿದ್ದೆ'. ಸನ್ನಿ ಅವರೇ ನಿಮ್ಮೊಂದಿಗೆ ನಟಿಸಲು ನನಗೆ ಖುಷಿ ಇದೆ. ನಿಮ್ಮ 'ಹಿಂದಿನ' ವೃತ್ತಿಯ ಬಗ್ಗೆ ನನಗೆ ಏನೂ ಸಮಸ್ಯೆ ಇಲ್ಲ' ಎಂದು ಫೇಸ್ ಬುಕ್ಕಿನಲ್ಲಿ ಪೋಸ್ಟ್ ಹಾಕಿದ್ದಾರೆ.

http://www.scoopwhoop.com/sunny-leone-bhupendra-chaubey-full-interview/I think Sunny conducted herself with a lot of...

Posted by Aamir Khan on Tuesday, January 19, 2016
English summary
Aamir Khan and Sunny Leone, share a special bond of friendship and their respect & admiration towards each other is truly remarkable. Sunny, handled herself really well during the interview with Bhupendra Chaubey, at The Hot Seat show in CNN-IBN.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada