»   » ಚೀನಾದಲ್ಲಿ 'ಪಿ.ಕೆ' ದಾಖಲೆ ಉಡೀಸ್: ಹೊಸ ಇತಿಹಾಸ ಸೃಷ್ಟಿಸಿದ 'ದಂಗಲ್'

ಚೀನಾದಲ್ಲಿ 'ಪಿ.ಕೆ' ದಾಖಲೆ ಉಡೀಸ್: ಹೊಸ ಇತಿಹಾಸ ಸೃಷ್ಟಿಸಿದ 'ದಂಗಲ್'

Posted By:
Subscribe to Filmibeat Kannada

ಚೀನಾ ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಚಿತ್ರಗಳು ಪರಾಕ್ರಮ ಮೆರೆಯುತ್ತಿದೆ. 2 ವರ್ಷಗಳ ಹಿಂದೆ ಚೀನಾದಲ್ಲಿ ಅಮೀರ್ ಖಾನ್ ಚಿತ್ರ ಮಾಡಿದ್ದ ದಾಖಲೆಯನ್ನ ಈಗ ಅಮೀರ್ ಖಾನ್ ಚಿತ್ರವೇ ಮುರಿದು ಹಾಕಿದೆ.

ಹೌದು, ಅಮೀರ್ ಖಾನ್ ಅಭಿನಯದ 'ಪಿ.ಕೆ' ಚಿತ್ರದ ದಾಖಲೆಯನ್ನ ಈಗ 'ದಂಗಲ್' ಚಿತ್ರ ಬ್ರೇಕ್ ಮಾಡಿದೆ. ಈ ಮೂಲಕ ಚೀನಾ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವೆಂದು 'ದಂಗಲ್' ಹೊಸ ಇತಿಹಾಸ ಸೃಷ್ಟಿಸಿದೆ.[ 'ಬಾಹುಬಲಿ'ಯ 1000 ಕೋಟಿ ದಾಖಲೆಯನ್ನ ಬೆನ್ನತ್ತಿ ಹೊರಟಿರುವ 'ದಂಗಲ್']

ಅಷ್ಟಕ್ಕೂ, 'ಪಿ.ಕೆ' ಚಿತ್ರ ಎಷ್ಟು ಗಳಿಸಿತ್ತು? ಈಗ 'ದಂಗಲ್' ಚಿತ್ರ ಎಷ್ಟು ಗಳಿಸಿದೆ? ಚೀನಾದಲ್ಲಿ ಯಾವ ಭಾರತೀಯ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಮುಂದೆ ಓದಿ......

ಚೀನಾದಲ್ಲಿ 'ದಂಗಲ್' ಪರಾಕ್ರಮ

ಚೀನಾದ 7000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿರುವ 'ದಂಗಲ್' ಚಿತ್ರಕ್ಕೆ ಚೈನೀಸ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಮೂಲಕ ಚೀನಾ ಬಾಕ್ಸ್ ಆಫೀಸ್ ನಲ್ಲಿ 'ದಂಗಲ್' ಭರ್ಜರಿ ಕಲೆಕ್ಷನ್ ಮಾಡಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನ ಮುರಿದು ಹೊಸ ದಾಖಲೆ ಬರೆದಿದೆ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!]

'ಪಿ.ಕೆ' ದಾಖಲೆ ಉಡೀಸ್ ಮಾಡಿದ 'ದಂಗಲ್'

ಎರಡು ವರ್ಷಗಳ ಹಿಂದೆ ಚೀನಾದಲ್ಲಿ 'ಪಿ.ಕೆ' ಮಾಡಿದ್ದ ದಾಖಲೆಯನ್ನ ಈಗ 'ದಂಗಲ್' ಚಿತ್ರ ಮುರಿದು ಹಾಕಿದೆ. 2015 ರಲ್ಲಿ' ಬಿಡುಗಡೆಯಾಗಿದ್ದ ಪಿ.ಕೆ' 100 ಕೋಟಿ ಕಲೆಕ್ಷನ್ ಮಾಡಿ, ಮೊದಲ ಭಾರತೀಯ ಚಿತ್ರವೆನಿಸಿಕೊಂಡಿತ್ತು. ಆದ್ರೀಗ ಈ ದಾಖಲೆಯನ್ನ 'ದಂಗಲ್' ಬ್ರೇಕ್ ಮಾಡಿ ತನ್ನ ಹೆಸರಿಗೆ ಬರೆದುಕೊಂಡಿದೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ]

5 ದಿನದಲ್ಲೇ 100 ಕೋಟಿ ಗಳಿಸಿದ 'ದಂಗಲ್'

'ಪಿ.ಕೆ', ಚೀನಾ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಲು 15 ದಿನ ಬೇಕಾಗಿತ್ತು. ಆದ್ರೆ, 'ದಂಗಲ್' ಕೇವಲ 5 ದಿನದಲ್ಲೇ ಈ ಸಾಧನೆ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್ ]

ಅಮೀರ್ ಖಾನ್ ಸಂತಸ

ಚೀನಾದಲ್ಲಿ 'ದಂಗಲ್' ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿಗೆ ಅಮೀರ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಚೀನಾ ವೆಬ್ ಸೈಟ್ ಗಳಲ್ಲಿ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯನ್ನ ಭಾಷಾಂತರ ಮಾಡಿ ಅಮೀರ್ ನೋಡಿದ್ದು, 'ದಂಗಲ್' ಚಿತ್ರತಂಡ ತುಂಬಾ ಖುಷಿಯಾಗಿದೆಯಂತೆ. ಈ ಮೂಲಕ ಚೀನಾ ಪ್ರೇಕ್ಷಕರಿಗೆ ಅಮೀರ್ ಖಾನ್ ಧನ್ಯವಾದಗಳನ್ನ ತಿಳಿಸಿದ್ದಾರೆ.[ಬಹಿರಂಗವಾಯ್ತು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಅಮೀರ್ ಹೊಸ ಲುಕ್?]

ನೈಜಕಥೆಯಾಧರಿತ 'ದಂಗಲ್'

ಅಂದ್ಹಾಗೆ, 'ದಂಗಲ್' ಚಿತ್ರ ಭಾರತದ ಮಾಜಿ ಕುಸ್ತಿಪಟು ಮಹಾವೀರ್ ಫೊಗತ್ ಅವರ ಜೀವನಾಧರಿತ ಸಿನಿಮಾ. ಕಳೆದ ವರ್ಷ ಡಿಸೆಂಬರ್ ನಲ್ಲಿ 'ದಂಗಲ್' ಭಾರತದಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಸುಮಾರು 385 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಈಗ ಚೀನಾದಲ್ಲಿ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.

ವರ್ಲ್ಡ್ ವೈಡ್ 867 ಕೋಟಿ

ಭಾರತದಲ್ಲಿ 'ದಂಗಲ್' ಕಲೆಕ್ಷನ್ 385 ಕೋಟಿ. ಒಟ್ಟಾರೆ ವರ್ಲ್ಡ್ ವೈಡ್ ಕಲೆಕ್ಷನ್ 867 ಕೋಟಿಯಾಗಿದೆ. ಹೀಗಾಗಿ, ಬಾಲಿವುಡ್ ಚಿತ್ರಗಳು ಪೈಕಿ ಅತಿ ಹೆಚ್ಚು ಗಳಿಸಿರುವ ಸಿನಿಮಾ ದಂಗಲ್ ಎನಿಸಿಕೊಂಡಿದ್ದು, ಭಾರತದ ಎರಡನೇ ಸಿನಿಮಾ ಆಗಿದೆ. 1000 ಕೋಟಿ ಗಳಿಸಿರುವ 'ಬಾಹುಬಲಿ-2' ಮೊದಲ ಚಿತ್ರವಾಗಿದೆ.

English summary
Bollywood Actor Aamir Khan's "Dangal" has Zoomed Past the Rs 100 Crore-Mark Within 5 Days of its Release in China, Breaking a Record Previously set by the Actor-producer's "PK".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada