»   » ಎಲ್ಲರ ಕಿವಿ ಮೇಲೆ ಫ್ಲವರ್ ಇಟ್ಟ ಅಭಿ-ಐಶ್ ದಂಪತಿ.!

ಎಲ್ಲರ ಕಿವಿ ಮೇಲೆ ಫ್ಲವರ್ ಇಟ್ಟ ಅಭಿ-ಐಶ್ ದಂಪತಿ.!

Posted By:
Subscribe to Filmibeat Kannada

ನಿನ್ನೆ (ಏಪ್ರಿಲ್ 1) ಮೂರ್ಖರ ದಿನ. ಫೂಲ್ಸ್ ಡೇ ಪ್ರಯುಕ್ತ ನೀವೆಲ್ಲಾ ಎಷ್ಟರ ಮಟ್ಟಿಗೆ ಫೂಲಾಗಿರ್ತೀರೋ ಇಲ್ಲವೋ. ಆದ್ರೆ, ಅನೇಕ ಪತ್ರಿಕೆ ಮತ್ತು ಮಾಧ್ಯಮಗಳು ಮಾತ್ರ ಮೂರ್ಖರಾಗಿದ್ದು ನಿಜ. ಹಾಗೆ, ಹೋಲ್ ಸೇಲ್ ಆಗಿ 'ಅಭಿ-ಐಶ್' ಹೆಸರಲ್ಲಿ ಎಲ್ಲರನ್ನೂ ಬಕ್ರಾ ಮಾಡಿದ್ದು ಬಾಲಿವುಡ್ ನಿರ್ದೇಶಕ ಸಂಜಯ್ ಗುಪ್ತಾ.

ಐಶ್ವರ್ಯ ರೈ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ 'ಜಝ್ಬಾ' ನಿರ್ದೇಶಕ ಸಂಜಯ್ ಗುಪ್ತಾ ಟ್ವಿಟ್ಟರ್ ಅಕೌಂಟ್ ನಿಂದ ಮಾರ್ಚ್ 31 ರ ಮಧ್ಯರಾತ್ರಿ ಒಂದು ಟ್ವೀಟ್ ಹೊರಬಿದ್ದಿತ್ತು. ಅದೇನಂದ್ರೆ, ''ಇಂದು ನಡೆಯುವ ಶೂಟಿಂಗ್ ರೋಚಕವಾಗಿರಲಿದೆ. ಅಭಿಶೇಕ್ ಬಚ್ಚನ್ 'ಜಝ್ಬಾ' ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸುವ ದೃಶ್ಯದ ಚಿತ್ರೀಕರಣ ಇಂದು ನಡೆಯಲಿದೆ.'' ಅಂತ ಸಂಜಯ್ ಗುಪ್ತಾ ಟ್ವೀಟ್ ಮಾಡಿದ್ದರು.

ಇದನ್ನೇ ನಂಬಿದ್ದ ಅನೇಕ ಪತ್ರಿಕೆಗಳು ದೊಡ್ಡದಾಗಿ ಸುದ್ದಿ ಪ್ರಕಟಿಸಿತು. ಮಾಧ್ಯಮಗಳು ಕೂಡ ಬಿಗ್ ನ್ಯೂಸ್ ಮಾಡಿದ್ವು. ಯಾಕಂದ್ರೆ, ಐಶ್ವರ್ಯ ರೈ ಮತ್ತು ಅಭಿಶೇಕ್ ಬಚ್ಚನ್ ತೆರೆಮೇಲೆ ಒಂದಾಗುತ್ತಿರುವುದು 5 ವರ್ಷಗಳ ಬಳಿಕ. ಅದ್ರಲ್ಲೂ 'ಜಝ್ಬಾ' ಐಶ್ ಸೆಕೆಂಡ್ ಇನ್ನಿಂಗ್ಸ್ ಸಿನಿಮಾ ಆಗಿರುವುದರಿಂದ, ಚಿತ್ರದ ಪ್ರತಿಯೊಂದು ಸುದ್ದಿ ಕೂಡ ಹೆಡ್ ಲೈನ್ ಅಂಶ. ['ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ]

Abhishek Bachchan's cameo in 'Jazbaa' was a April Fool prank

ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಸಂಜಯ್ ಗುಪ್ತಾ ಟ್ವೀಟ್ ಮಾಡುವ ಎಲ್ಲರನ್ನೂ ಚಾಲಾಕಿಯಾಗಿ ಫೂಲ್ ಮಾಡಿದ್ದಾರೆ.

ಪಾಪ, ಐಶು-ಅಭಿಯನ್ನ ತೆರೆಮೇಲೆ ಒಟ್ಟಿಗೆ ನೋಡಬಹುದು ಅಂತ ಅದೆಷ್ಟು ಬಾಲಿವುಡ್ ಪ್ರಿಯರು ಆಸೆ ಪಟ್ಟಿದ್ರೋ, 'ಜೋಕ್' ಅಂತ ಹೇಳುವ ಮೂಲಕ ಅಭಿಮಾನಿಗಳ ಆಸೆಗೆ ಬಕೆಟ್ ತಣ್ಣೀರೆರಚಿದ್ದಾರೆ ಸಂಜಯ್ ಗುಪ್ತಾ.

ಐಶ್ವರ್ಯ ರೈ, ಇರ್ಫಾನ್ ಖಾನ್, ಶಬಾನಾ ಆಜ್ಮಿ, ಅನುಪಮ್ ಖೇರ್ ನಟಿಸುತ್ತಿರುವ 'ಜಝ್ಬಾ' ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಲಾಯರ್ ಪಾತ್ರದಲ್ಲಿ ಬಚ್ಚನ್ ಬಹು ಅಭಿನಯಿಸುತ್ತಿದ್ದಾರೆ. ಆಕ್ಟೋಬರ್ ಹೊತ್ತಿಗೆ ಸಿನಿಮಾ ತೆರೆಗೆ ಬರಲಿದೆ.

English summary
Earlier it was reported that Bollywood Actor Abhishek Bachchan to do a a cameo in Aishwarya Rai Bachchan starrer 'Jazbaa' as according to the director Sanjay Gupta's tweet. But now it is turned out to be a April Fool prank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada