»   » ಸಚಿನ್ ರನ್ನ ಐಶ್ವರ್ಯ ಅಪ್ಪಿಕೊಂಡಿದ್ದಕ್ಕೆ ಮುಖ ಗಂಟಿಕ್ಕಿದ್ರಾ ಅಭಿಶೇಕ್.?

ಸಚಿನ್ ರನ್ನ ಐಶ್ವರ್ಯ ಅಪ್ಪಿಕೊಂಡಿದ್ದಕ್ಕೆ ಮುಖ ಗಂಟಿಕ್ಕಿದ್ರಾ ಅಭಿಶೇಕ್.?

Posted By: ಫಿಲ್ಮಿಬೀಟ್ ಪ್ರತಿನಿಧಿ
Subscribe to Filmibeat Kannada

ಅಷ್ಟು ಸುಲಭವಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬ ವಿವಾದಗಳಿಗೆ ಸಿಲುಕುವುದಿಲ್ಲ. ಅದರಲ್ಲೂ, ಅಮಿತಾಬ್ ಪುತ್ರ ಅಭಿಶೇಕ್ ಬಚ್ಚನ್ ಅಂತೂ ಈ ಕಾಂಟ್ರವರ್ಸಿ, ಗಾಸಿಪ್ ಗಳಿಂದ ಮಾರುದ್ದ ದೂರ.

ಎಲ್ಲೇ ಹೋಗಲಿ... ವಿನಯ ಹಾಗೂ ತಾಳ್ಮೆಯಿಂದ ವರ್ತಿಸುವ ಅಭಿಶೇಕ್ ಬಚ್ಚನ್ ಮೊನ್ನೆ ಮಾತ್ರ ಮುಖವನ್ನ ಊದಿಸಿಕೊಂಡಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ರವರನ್ನ ಪತ್ನಿ ಐಶ್ವರ್ಯ ಅಪ್ಪಿಕೊಂಡ ಮೇಲಂತೂ ಅಭಿಶೇಕ್ ಮುಖ ಗಡಿಗೆ ಆಗ್ಹೋಯ್ತು. ಬೇಕಾದರೆ ನೀವೇ ನೋಡಿ...

ಅಷ್ಟಕ್ಕೂ ಏನಾಯ್ತು.?

ಇತ್ತೀಚೆಗಷ್ಟೇ ಮುಂಬೈನಲ್ಲಿ 'ಸಚಿನ್ : ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿತ್ತು. ಬಾಲಿವುಡ್ ನಟರು, ಕ್ರಿಕೆಟ್ ತಾರೆಯರು ಹಾಗೂ ಖ್ಯಾತನಾಮರು ಭಾಗವಹಿಸಿದ್ದ ಪ್ರೀಮಿಯರ್ ಶೋನಲ್ಲಿ ಅಮಿತಾಬ್ ಬಚ್ಚನ್ ಮತ್ತು ಕುಟುಂಬ ಕೂಡ ಪಾಲ್ಗೊಂಡಿತ್ತು. ['ಸಚಿನ್ ಎ ಬಿಲಿಯನ್ ಡ್ರೀಮ್ಸ್' ನೋಡಿ ಬಾಲಿವುಡ್ ಮತ್ತು ಕ್ರಿಕೆಟರ್‌ಗಳು ಹೇಳಿದ್ದೇನು?]

ಮಗ-ಸೊಸೆ ಜೊತೆಗೆ ಹಾಜರ್ ಆದ ಅಮಿತಾಬ್

ಸ್ವತಃ ಸಚಿನ್ ತೆಂಡುಲ್ಕರ್ ಅಭಿಮಾನಿಯಾಗಿ ಮಗ ಅಭಿಶೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್ ಜೊತೆ ಅಮಿತಾಬ್ ಬಚ್ಚನ್ 'ಸಚಿನ್ : ಎ ಬಿಲಿಯನ್ ಡ್ರೀಮ್ಸ್' ಪ್ರೀಮಿಯರ್ ಶೋಗೆ ಹಾಜರಾದರು.

ಸಚಿನ್ ರನ್ನ ಅಪ್ಪಿಕೊಂಡ ಐಶ್ವರ್ಯ

ಪ್ರೀಮಿಯರ್ ಶೋಗೆ ಹಾಜರ್ ಆಗುತ್ತಿದ್ದಂತೆಯೇ, ಸಚಿನ್ ರವರನ್ನ ಐಶ್ವರ್ಯ ರೈ ಬಚ್ಚನ್ ಅಪ್ಪಿಕೊಂಡರು. ಆಗ ಅಭಿಶೇಕ್ ಬಚ್ಚನ್ ರವರ ರಿಯಾಕ್ಷನ್ ಹೇಗಿತ್ತು ಅಂತ ನೀವೇ ಈ ವಿಡಿಯೋದಲ್ಲಿ ನೋಡಿ.... ಲಿಂಕ್ ಕ್ಲಿಕ್ ಮಾಡಿ...

ಅಪ್ ಸೆಟ್ ಆದ್ರಾ ಅಭಿಶೇಕ್.?

ಅಲ್ಲಿಯವರೆಗೂ ನಗುತ್ತಿದ್ದ ಅಭಿಶೇಕ್ ಬಚ್ಚನ್... ಸಚಿನ್ ರನ್ನ ಐಶ್ವರ್ಯ ಅಪ್ಪಿಕೊಂಡ್ಮೇಲೆ ಮುಖವನ್ನ ಗಂಟಿಕ್ಕಿದ್ರು. ಹೀಗಾಗಿ ಅಭಿಶೇಕ್ ಅಪ್ ಸೆಟ್ ಆಗಿದ್ದಾರೆ ಎಂದು ಬಿಟೌನ್ ಮೂಲೆ ಮೂಲೆಯಲ್ಲೂ ಗುಲ್ಲೋ ಗುಲ್ಲು.

English summary
Abhishek Bachchan Gets UPSET When His Wife Aishwarya Rai Bachchan Hugs Sachin Tendulkar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada