»   » 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ನೋಡಿ ಬಾಲಿವುಡ್ ಮತ್ತು ಕ್ರಿಕೆಟರ್‌ಗಳು ಹೇಳಿದ್ದೇನು?

'ಸಚಿನ್ ಎ ಬಿಲಿಯನ್ ಡ್ರೀಮ್ಸ್' ನೋಡಿ ಬಾಲಿವುಡ್ ಮತ್ತು ಕ್ರಿಕೆಟರ್‌ಗಳು ಹೇಳಿದ್ದೇನು?

Posted By:
Subscribe to Filmibeat Kannada

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಯೋಪಿಕ್ ಸಿನಿಮಾ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ನಾಳೆ(ಮೇ 26) ವಿಶ್ವದಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರವನ್ನು ಈಗಾಗಲೇ ಸಚಿನ್ ತೆಂಡೂಲ್ಕರ್ ರವರು ಭಾರತೀಯ ಸೈನಿಕರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿ ತೋರಿಸಿದ್ದಾರೆ.[ಸಚಿನ್ ಬಯೋಪಿಕ್ ನೋಡಿ ಮೆಚ್ಚಿಕೊಂಡ ಭಾರತೀಯ ಯೋಧರು]

ಅಲ್ಲದೇ ನಿನ್ನೆ(ಮೇ 24) ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಭಾರತ ಕ್ರಿಕೆಟ್ ತಂಡದ ಹಲವು ಆಟಗಾರರು 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಪ್ರೀಮಿಯರ್ ಶೋ ನೋಡಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ವಿಶೇಷ ಅಂದ್ರೆ ಬಿಗ್ ಬಿ ಅಮಿತಾಬ್ ಬಚ್ಚನ್ ರವರು ಚಿತ್ರನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ರವರೇ ಅಭಿನಯಿಸಿರುವ ತಮ್ಮ ಆತ್ಮಕಥೆ ಕುರಿತ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ನೋಡಿ ಯಾವ್ಯಾವ ಸೆಲೆಬ್ರಿಟಿಗಳು, ಕ್ರಿಕೆಟರ್ ಗಳು ಏನು ಹೇಳಿದರು ತಿಳಿಯಲು ಮುಂದೆ ಓದಿ..

ಚಿತ್ರ ನೋಡಿ ಬಿಗ್ ಬಿ ಹೇಳಿದ್ದೇನು?

ನಟ ಅಮಿತಾಬ್ ಬಚ್ಚನ್ ರವರು ತಮ್ಮ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯ ರೈ ಬಚ್ಚನ್ ಜೊತೆ ನಿನ್ನೆ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಪ್ರೀಮಿಯರ್ ಶೋ ನೋಡಿದ್ದಾರೆ. ಸಿನಿಮಾ ನೋಡಿದ ಅಮಿತಾಬ್ ಬಚ್ಚನ್ ರವರು ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ, " 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಭಾವನಾತ್ಮಕವಾದ ಮತ್ತು ಹೆಮ್ಮೆಯ ಚಿತ್ರ. ಇದರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರವರ ಹೆಚ್ಚು ವೈಯಕ್ತಿಕ ಜೀವನವನ್ನು ತೆರೆಮೇಲೆ ತರಲಾಗಿದೆ. ಸಚಿನ್ ರವರ ಕ್ರಿಕೆಟ್ ಕ್ಷೇತ್ರದ ಒಳ ಮತ್ತು ಹೊರಗಿನ ಎರಡೂ ಜರ್ನಿಯನ್ನು ಬಹಿರಂಗಪಡಿಸಲಾಗಿದೆ" ಎಂದು ಸಚಿನ್ ರೊಂದಿಗಿನ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್ ರಿಂದ ಸಚಿನ್ ಗೆ ಅಭಿನಂದನೆ

"ಸಚಿನ್ ಕೇವಲ ಒಬ್ಬ ವ್ಯಕ್ತಿ ಅಲ್ಲ. ಅವರು ಒಂದು ಭಾವನೆ.. ಭಾರತದ ಭಾವನೆ! ಇವರ ಚಿತ್ರ ನೋಡಿದ ಮೇಲೆ ಇವರು ಪ್ರಪಂಚದ ಭಾವನೆ ಆಗುತ್ತಾರೆ.. ಅಭಿನಂದನೆಗಳು ಸಚಿನ್" ಎಂದು ಸಿನಿಮಾ ನೋಡಿದ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಸಚಿನ್ ಪ್ರತಿಯೊಬ್ಬರಿಗೂ ಸ್ಫೂರ್ತಿ

"ಸಚಿನ್ ಹೆಸರು ಕೇಳಿದರೇನೆ ಖುಷಿ ಆಗುತ್ತದೆ. ಈ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಚಿನ್ ಸ್ಫೂರ್ತಿ ಆಗುತ್ತಾರೆ. ಇವರ ಬಾಲ್ಯ ಮತ್ತು ಕ್ರಿಕೆಟ್ ಕ್ಷೇತ್ರದ ಏಳು-ಬೀಳಿನ ಸಿನಿಮಾ ತಯಾರಿಸಲು ಡಿಸೈಡ್ ಮಾಡಿದವರ ಬಗ್ಗೆ ಸಂತೋಷವಾಗುತ್ತದೆ. ಸಿನಿಮಾ ರೋಮಾಂಚನಕಾರಿಯಾಗಿ ಮೂಡಿಬಂದಿದೆ. ಸಚಿನ್ ಗಿಂತ ಅವರ ಕೆಲಸ ಹೆಚ್ಚು ಮಾತನಾಡುತ್ತದೆ" - ಶಾರುಖ್ ಖಾನ್, ಬಾಲಿವುಡ್ ನಟ

ಸಿನಿಮಾ ಅದ್ಭುತವಾಗಿದೆ

" ಸಚಿನ್ ರವರ ಚಿತ್ರ ನೋಡಿ ತುಂಬ ಖುಷಿ ಆಗಿದೆ. ಚಿತ್ರ ಅದ್ಭುತವಾಗಿದೆ" ಎಂದು ಕ್ರಿಕೆಟರ್ ಶಿಖರ್ ಧವನ್ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಸಚಿನ್ ರವರನ್ನು ಭೇಟಿ ಮಾಡುವುದು ಯಾವಾಗಲು ಸಂತಸದ ವಿಷಯ ಎಂದು ಅವರೊಂದಿಗಿನ ಸೆಲ್ಫಿ ಸಹಿತ ಸಾಮಾಜಿಕ ಜಾಲತಾಣದಲ್ಲಿ ಅಪ್‌ ಡೇಟ್ ಮಾಡಿದ್ದಾರೆ.

ಗ್ರೇಟ್ ಸ್ಟೋರಿ

"ಕೆಲವು ವಿವರಿಸಲಾಗದ ನೆನಪುಗಳು ಇಂದು ಮರುಕಳಿಸುತ್ತಿವೆ. 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಪ್ರಖ್ಯಾತ ವ್ಯಕ್ತಿಯ ಗ್ರೇಟ್ ಸ್ಟೋರಿ" - ಭುವನೇಶ್ವರ್ ಕುಮಾರ್, ಕ್ರಿಕೆಟರ್

ಶತಕೋಟಿ ಯುವಕರಿಗೆ ಸ್ಫೂರ್ತಿಯಾಗಲಿದೆ

"ನಿಮ್ಮ ಚಿತ್ರನೋಡುವ ಭಾಗ್ಯ ನನಗೆ ಸಿಕ್ಕಿತ್ತು. ನೀವು ಯಾವಾಗಲು ನನಗೆ ಸ್ಫೂರ್ತಿ. ನಿಮ್ಮ ಸಿನಿಮಾ ಈಗ ಶತಕೋಟಿ ಜನರಿಗೆ ಪ್ರೇರಣೆ ನೀಡಲಿದೆ ಸಚಿನ್ ಜಿ" -ಕೆ.ಎಲ್.ರಾಹುಲ್, ಕ್ರಿಕೆಟರ್

ಇತರೆ ಕ್ರಿಕೆಟಿಗರು ಮತ್ತು ಬಾಲಿವುಡ್ ನ ಇತರೆ ಯಾವ್ಯಾವ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಏನೇನು ಹೇಳಿದರು ನೋಡಲು ಕ್ಲಿಕ್ ಮಾಡಿ

English summary
Sachin Tendulkar starrer his biopic movie 'Sachin A Billion Dreams' premere show screened yesterday (May 24). Here is what movie watched Indian cricketers and bollywood celebrities said about 'Sachin – A Billion Dreams'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada