For Quick Alerts
  ALLOW NOTIFICATIONS  
  For Daily Alerts

  ಐಶೂ, ಆರಾಧ್ಯಾಗಾಗಿ ಬಾಡಿಗೆ ಮನೆ ಮಾಡಿದ ಅಭಿಷೇಕ್

  |

  ಅಭಿಷೇಕ್ ಬಚ್ಚನ್ ಸಾಕಷ್ಟು ಬದಲಾಗುತ್ತಿದ್ದಾರೆ. ಛೋಟಾ ಬಚ್ಚನ್ ಈಗ ಬಾಲಿವುಡ್ 'ಮಿ ಪರ್ಫೆಕ್ಟ್' ಖ್ಯಾತಿಯ ಅಮೀರ್ ಖಾನ್ ದಾರಿಯಲ್ಲಿ ಸಾಗುತ್ತಿರುವ ಸೂಚನೆ ಕಂಡುಬರುತ್ತಿದೆ. ಹೆಂಡತಿ ಐಶ್ವರ್ಯಾ ಬಚ್ಚನ್ ಹಾಗೂ ಮಗಳು ಆರಾಧ್ಯಾಳಿಗಾಗಿ ಅಭಿಷೇಕ್ ಬಚ್ಚನ್ ಸದ್ಯದಲ್ಲೇ ಬಾಡಿಗೆ ಮನೆ ಮಾಡಲಿದ್ದಾರೆ. ಮುಂಬೈನಲ್ಲಿ ಎಂದುಕೊಳ್ಳಬೇಡಿ, ಬಾಡಿಗೆ ಮನೆ ಮಾಡಲಿರುವುದು ದೂರದ ಶಿಕಾಗೋದಲ್ಲಿ.

  'ಧೂಮ್-3' ಚಿತ್ರದಲ್ಲಿ ನಟಿಸುತ್ತಿರುವ ಅಭಿಷೇಕ್ ಬಚ್ಚನ್, ತಮ್ಮ ಸಹನಟ ಅಮೀರ್ ಖಾನ್ ಅವರನ್ನು ಅನುಸರಿಸುತ್ತಿದ್ದಾರೆ. ಅಮೀರ್ ಖಾನ್ ಇತ್ತೀಚಿಗೆ ತನ್ನ ಹೆಂಡತಿ ಕಿರಣ್ ರಾವ್ ಹಾಗೂ ಮಗ ಆಜಾದ್ ರಾವ್ ಖಾನ್ ಅವರಿಗಾಗಿ ತಾವೀಗ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಸ್ಥಳ ಶಿಕಾಗೋದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಹೊರದೇಶದಲ್ಲಿ ಚಿತ್ರೀಕರಣದಲ್ಲಿದ್ದರೂ, ತಮ್ಮ ಕುಟುಂಬದ ಜೊತೆಯೇ ಇರುವ ಐಡಿಯಾ ಅಮೀರ್ ಅವರದು.

  ಅಮೀರ್ ಖಾನ್ ಅವರ ಈ ಐಡಿಯಾ, ಅಭಿಷೇಕ್ ಬಚ್ಚನ್ ಅವರಿಗೆ ಸಖತ್ ಇಷ್ಟವಾಗಿದೆ. ಅಷ್ಟೇ ಅಲ್ಲ, ತಾವೂ ಇದೇ ರೀತಿ ಮಾಡಲು ನಿರ್ಧರಿಸಿರುವ ಜ್ಯೂನಿಯರ್ ಬಚ್ಚನ್, ಹೆಂಡತಿ ಐಶೂ ಹಾಗು ಮಗು ಆರಾಧ್ಯಾರಿಗಾಗಿ ಬಾಡಿಗೆ ಮನೆ ಹುಡುಕಾಟದಲ್ಲಿ ತೊಡಗಿದ್ದಾರಂತೆ. ಅದು ಸಿಕ್ಕ ತಕ್ಷಣ ಐಶೂ, ತಮ್ಮ ಮಗಳು ಆರಾಧ್ಯಾ ಜೊತೆ ಪತಿ ಅಭಿಷೇಕ್ ಅವರನ್ನು ಜೊತೆಯಾಗಲಿದ್ದಾರೆ.

  ಅಷ್ಟೇ ಅಲ್ಲ, ಮಗ-ಸೊಸೆ ಹಾಗೂ ಮೊಮ್ಮಗು ಆರಾಧ್ಯಾರನ್ನು ಬಿಟ್ಟಿರಲಾರದ ತಾತ ಅಮಿತಾಬ್ ಬಚ್ಚನ್ ಹಾಗೂ ಅಜ್ಜಿ ಜಯಾ ಬಚ್ಚನ್ ಕೂಡ ಸದ್ಯದಲ್ಲೇ ಶಿಕಾಗೋ ಬಾಡಿಗೆ ಮನೆ ಸೇರಿಕೊಳ್ಳಲಿದ್ದಾರೆ. ಅಂತೂ ಮೊಮ್ಮಗು ಆರಾಧ್ಯಾ ಈಗ ಬಚ್ಚನ್ ಪರಿವಾರ ಮೊದಲಿನಂತೆ ಚಿತ್ರೀಕರಣದಲ್ಲೂ ಬೇರೆಯಾಗಿರಲು ಬಿಡುತ್ತಿಲ್ಲ. ಹಾಗಂತ ಆರಾಧ್ಯಾಳನ್ನು 'ಫೆವಿಕಾಲ್' ಎನ್ನಬೇಡಿ!

  ಅಂದಹಾಗೆ, ಇದೆಲ್ಲಕ್ಕೆ ಕಾರಣವಾಗಿರುವ 'ಧೂಮ್-3' ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದಾರೆ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್ ಹಾಗೂ ಉದಯ್ ಚೋಪ್ರಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯಕ್ಕೆ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಈ ಚಿತ್ರ, 2013 ರಲ್ಲಿ ತೆರೆಗೆ ಬರಲಿದೆ. ಒಟ್ಟಿನಲ್ಲಿ ಚಿತ್ರೀಕರಣದ ವೇಳೆಯಲ್ಲೂ ಅಮೀರ್, ಅಭಿಗೆ ಕುಟುಂಬದ ಸಾಥ್ ಅಗತ್ಯವಾಗಿದೆ. (ಏಜೆನ್ಸೀಸ್)

  English summary
  Abhishek Bachchan has decided to rent a house so that his wife Aishwarya Rai and daughter Aaradhya Bachchan could fly down to Chicago and stay at the apartment for months, until the shooting is over. Abhishek Bachchan is highly inspired by his Dhoom 3 co-star Aamir Khan's this classic idea.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X