For Quick Alerts
  ALLOW NOTIFICATIONS  
  For Daily Alerts

  ತಮಿಳು ರಿಮೇಕ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್-ಶಾಲಿನಿ ಪಾಂಡೆ?

  |

  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು 'ಅರ್ಜುನ್ ರೆಡ್ಡಿ' ಖ್ಯಾತಿಯ ಶಾಲಿನಿ ಪಾಂಡೆ ಹೊಸ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ಸದ್ದು ಮಾಡಿದೆ. ತಮಿಳಿನ ಓ ಮೈ ಕಡವಲೇ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಜೂನಿಯರ್ ಬಚ್ಚನ್ ಮತ್ತು ಶಾಲಿನಿ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

  ಈ ಸುದ್ದಿ ಬರಿ ವದಂತಿ ಎನ್ನುವ ವಿಚಾರ ಹೊರಬಿದ್ದಿದೆ. ಈ ಚಿತ್ರದ ಅಧಿಕೃತ ವಕ್ತಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಹಿಂದಿ ರಿಮೇಕ್ ಇನ್ನು ಸ್ಕ್ರಿಪ್ಟ್ ಕೆಲಸದಲ್ಲಿದೆ. ಇದುವರೆಗೂ ಯಾವ ಕಲಾವಿದರು ಆಯ್ಕೆಯಾಗಿಲ್ಲ ಎಂದು ಹೇಳಿದ್ದಾರೆ.

  ಶಸ್ತ್ರಚಿಕಿತ್ಸೆ ಬಳಿಕ ಮೊದಲ ಫೋಟೋ ಹಂಚಿಕೊಂಡ ನಟ ಅಭಿಷೇಕ್ ಬಚ್ಚನ್ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಫೋಟೋ ಹಂಚಿಕೊಂಡ ನಟ ಅಭಿಷೇಕ್ ಬಚ್ಚನ್

  ಅಶ್ವಥ್ ಮಾರಿಮುತ್ತು ನಿರ್ದೇಶನ ಓ ಮೈ ಕಡವಲೇ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿರುವುದು ನಿಜ. ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಶಾಲಿನಿ ಪಾಂಡೆ ಜೊತೆ ಮಾತುಕತೆ ಆಗಿದೆ ಎನ್ನುವುದು ಸುಳ್ಳು. ಸದ್ಯಕ್ಕೆ ಕಲಾವಿದರು ಆಯ್ಕೆ ಪ್ರಕ್ರಿಯೆ ನಡೆದಿಲ್ಲ ಎಂದು ವರದಿಯಾಗಿದೆ.

  ಅಭಿಷೇಕ್ ಬಚ್ಚನ್ ಕೊನೆಯದಾಗಿ 'ದಿ ಬಿಗ್ ಬುಲ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಇನ್ನು ಚಿತ್ರಾಂಗದಾ ಸಿಂಗ್ ಜೊತೆಯಲ್ಲಿ 'ಬಾಬ್ ಬಿಸ್ವಾಸ್' ಚಿತ್ರದಲ್ಲೂ ಅಭಿನಯಿಸಿದ್ದು, ಬಿಡುಗಡೆಯಾಗಬೇಕಿದೆ. ಇನ್ನು ಶೂಟಿಂಗ್ ವೇಳೆ ಬಲಗೈಗೆ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪೆಟ್ಟು ತೀವ್ರವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

  ಚಿತ್ರೀಕರಣ ವೇಳೆ ಅಭಿಷೇಕ್‌ಗೆ ಪೆಟ್ಟು, ಆಸ್ಪತ್ರೆಗೆ ಧಾವಿಸಿದ ಅಮಿತಾಭ್ ಚಿತ್ರೀಕರಣ ವೇಳೆ ಅಭಿಷೇಕ್‌ಗೆ ಪೆಟ್ಟು, ಆಸ್ಪತ್ರೆಗೆ ಧಾವಿಸಿದ ಅಮಿತಾಭ್

  ಇನ್ನು ರಣ್ವೀರ್ ಸಿಂಗ್ ಅಭಿನಯದ 'ಜಯೇಶ್ ಭಾಯ್ ಜೋರ್ದಾರ್' ಚಿತ್ರದಲ್ಲಿ ಶಾಲಿನಿ ಪಾಂಡೆ ನಟಿಸಿದ್ದು, ಈ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ, ಇದು ಶಾಲಿನಿಗೆ ಚೊಚ್ಚಲ ಹಿಂದಿ ಸಿನಿಮಾ. ಈ ಚಿತ್ರದ ನಂತರ 'ಮಹಾರಾಜ' ಎನ್ನುವ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.

  'ಓಹ್ ಮೈ ಕಡವಲೇ' ಸಿನಿಮಾದ ಬಗ್ಗೆ ಹೇಳುವುದಾದರೆ, 2020ರಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಅಶೋಕ್ ಸೆಲ್ವಾನ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿದ ಅಶ್ವಥ್ ಮರಿಮುತ್ತು ಈಗ ಹಿಂದಿ ಅವತರಣಿಕೆಯನ್ನೂ ನಿರ್ದೇಶಿಸಲಿದ್ದಾರೆ.

  English summary
  Bollywood actor Abhishek Bachchan and Shalini Pandey Approached For Oh My Kadavule Remake?.
  Thursday, August 26, 2021, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X