»   » ಮಗಳು ಆರಾಧ್ಯಾ ಬಗ್ಗೆ ಅಪ್ಪ ಅಭಿಷೇಕ್ ಹೇಳಿದ್ದೇನು?

ಮಗಳು ಆರಾಧ್ಯಾ ಬಗ್ಗೆ ಅಪ್ಪ ಅಭಿಷೇಕ್ ಹೇಳಿದ್ದೇನು?

Posted By:
Subscribe to Filmibeat Kannada
ಬಾಲಿವುಡ್ ನಟ ಹಾಗೂ ಇತ್ತೀಚಿಗೆ 'ಅಪ್ಪ'ನ ಪಟ್ಟಕ್ಕೇರಿರುವ ಛೋಟಾ ಬಚ್ಚನ್ ಅಭಿಷೇಕ್, ತಮ್ಮ ಮಗಳು ಆರಾಧ್ಯಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಗಳು ಆರಾಧ್ಯಾ, ಸಂಪೂರ್ಣ ಕುಟುಂಬಕ್ಕೆ 'ಆಶೀರ್ವಾದ'ವಿದ್ದಂತೆ ಎಂದಿದ್ದಾರೆ. ತಾವೀಗ ಮನೆಗೆ ಬೇಗ ಬರಲು ಇದೂ ಒಂದು ಮಹಾನ್ ಕಾರಣ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಅಭಿಷೇಕ್ ಬಚ್ಚನ್.

ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಭಿಷೇಕ್, ಪಿತೃತ್ವ ಹಾಗೂ ತಮ್ಮ ಮಗಳು ಆರಾಧ್ಯಾ ಬಗ್ಗೆ "ನಾನೀಗ ಮನೆಗೆ ಬೇಗ ಸೇರಲು ಮಗಳು ಇನ್ನೊಂದು ಕಾರಣ. ಸದ್ಯ ನಾನೊಬ್ಬ ಸದ್ಗೃಹಸ್ಥನಾಗಿದ್ದು ನನ್ನ ಅಪ್ಪ-ಅಮ್ಮ ಹಾಗೂ ಹೆಂಡತಿ-ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ಇದೊಂದು ಅವಿಸ್ಮರಣೀಯ ಅನುಭವ.

ಬೇರೆ ಎಲ್ಲರಿಗೂ ಹೀಗೆ ಅನ್ನಿಸುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನನಗಂತೂ ಇದು ಸ್ವರ್ಗ ಸುಖ ಅನ್ನಿಸುತ್ತಿದೆ. ನಮ್ಮ ಪಾಲಿಗಂತೂ ಆರಾಧ್ಯಾ ಹುಟ್ಟಿದಾಗಿನಿಂದಲೂ ಇಡೀ ವಿಶ್ವವೇ ಆಶೀರ್ವಾದದ ಮಳೆ ಸುರಿಸುತ್ತಿದೆ. ಎಲ್ಲರ ಆಶೀರ್ವಾದ ಹಾಗೂ ಸದಾಶಯಕ್ಕೆ ನಾನು ಚಿರಋಣಿ. ಪ್ರತಿಯೊಬ್ಬರೂ ನಮ್ಮ ನೆಮ್ಮದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ" ಎಂದಿದ್ದಾರೆ.

ಮುಂದುವರಿದ ಅಭಿಷೇಕ್, "ಈ ಆರಾಧ್ಯಾ ಎನ್ನುವ ಹೆಸರು ಸಾಕಷ್ಟು ಜನರು ಸೂಚಿಸಿದ್ದೇ ಆಗಿದೆ. ಅಷ್ಟೇ ಅಲ್ಲ, ಬಹಳಷ್ಟು ಜನರು ಈ ಹೆಸರನ್ನು ಮೆಚ್ಚಿದ್ದಾರೆ. ಹೀಗಾಗಿಯೇ ನಮ್ಮ ಮಗಳಿಗೆ ಆರಾಧ್ಯಾ ಹೆಸರನ್ನು ಪಕ್ಕಾ ಮಾಡಿದ್ದೇವೆ. ನಮ್ಮ ಕುಟುಂಬದ ಪ್ರತಿಯೊಬ್ಬರೂ ಈ ಹೆಸರನ್ನು ಇಷ್ಟಪಟ್ಟಿದ್ದೇವೆ" ಎಂದು ಹೆಸರಿನ ಗುಟ್ಟು ಬಿಡಿಸಿಟ್ಟಿದ್ದಾರೆ.

ಇತ್ತೀಚಿಗಷ್ಟೇ ಆರಾಧ್ಯಾ ಅಜ್ಜಿ ಜಯಾ ಬಚ್ಚನ್ ತಮ್ಮ ಮೊಮ್ಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಮೊಮ್ಮಗಳನ್ನು 'ಸ್ಟ್ರಾಬೆರಿ' ಎಂದು ಕರೆಯುತ್ತಿರುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಆರಾಧ್ಯಾ ಅಪ್ಪ ಅಭಿಷೇಕ್ ಕೂಡ ಮಾತನಾಡಿದ್ದಾರೆ. ಬಚ್ಚನ್ ಕುಟುಂಬದಿಂದ ಒಬ್ಬಬ್ಬರಾಗಿ ಮಗುವಿನ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡತೊಡಗಿದ್ದಾರೆ. ಬಹಶಃ ಸದ್ಯದಲ್ಲಿ ಮಗು ಸಾರ್ವಜನಿಕ ದರ್ಶನಕ್ಕೆ ಲಭ್ಯವಾದರೂ ಆಶ್ಚರ್ಯವಿಲ್ಲ. (ಏಜೆನ್ಸೀಸ್)

English summary
Abhishek Bachchan Speaks about his Daughter Aradhya. The new Dad, Abhishek Bachchan says that his daughter Aaradhya is like a blessing to his family and this is the most wonderful phase of his life.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada