For Quick Alerts
  ALLOW NOTIFICATIONS  
  For Daily Alerts

  ಮಧ್ಯರಾತ್ರಿ, ಸಲ್ಲು ಭಾಯ್ ಅತ್ತಿಗೆ ಮನೆಯಲ್ಲಿ 'ಈ' ನಟನಿಗೇನು ಕೆಲಸ?

  By ಸೋನು ಗೌಡ
  |

  ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಭಾಬಿ (ಅತ್ತಿಗೆ) ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರು ಬೇರೆ-ಬೇರೆಯಾಗಿ ವಾಸ್ತವ್ಯ ಹೂಡಿರೋದು ಎಲ್ಲರಿಗೂ ಗೊತ್ತೇ ಇದೆ.

  ಹಾಟ್ ಐಟಂ ಡ್ಯಾನ್ಸರ್ ಮಲೈಕಾ ಅರೋರಾ ತಮ್ಮ ಪುತ್ರನ ಜೊತೆ ಪ್ರತ್ಯೇಕವಾಗಿ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಆದ್ರೆ ಇತ್ತೀಚೆಗೆ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ನಡುವೆ ಏನೋ ನಡೆಯುತ್ತಿದೆ ಅಂತ ಬಿಟೌನ್ ನಲ್ಲಿ ಗುಸು-ಗುಸು ಕೇಳಿ ಬರುತ್ತಿದೆ.[ಮಲೈಕಾ ಅರೋರಾ ನೃತ್ಯಕ್ಕೆ ಮನಸೋತ ರಾಧಿಕಾ]

  ಇದಕ್ಕೆ ಪುಷ್ಠಿ ನೀಡುವಂತೆ, ಅರ್ಜುನ್ ಕಪೂರ್ ಅವರು ಮಲೈಕಾ ಅರೋರಾ ಅವರ ಫ್ಲ್ಯಾಟ್ ಗೆ ಮಧ್ಯರಾತ್ರಿ ಭೇಟಿ ನೀಡಿದ್ದಾರೆ. ಈ ಸುದ್ದಿ ಇದೀಗ ಇಡೀ ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ.

  Actor Arjun Kapoor was at Dancer Malaika Arora's house last night

  ಇತ್ತೀಚೆಗೆ ರಾತ್ರಿ 10.30ರ ಸುಮಾರಿಗೆ ಮಲೈಕಾ ಅರೋರಾ ಅವರ ಮನೆಗೆ ಎಂಟ್ರಿ ಕೊಟ್ಟ ಅರ್ಜುನ್ ಕಪೂರ್, ಮಧ್ಯರಾತ್ರಿ 1.30ರ ಹೊತ್ತಿಗೆ ಹೊರಬಂದಿದ್ದಾರೆ. ಇದು ಕೆಲವು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು, ಫ್ಲ್ಯಾಶ್ ಲೈಟ್ ಬೀಳುತ್ತಿದ್ದಂತೆ ಅರ್ಜುನ್ ಕಪೂರ್ ಮುಖ ಮುಚ್ಚಿಕೊಂಡು ಕಾರು ಹತ್ತಿದ್ದಾರೆ.[ಮಲೈಕಾ 'ಮೈ'ದೋರಿದ ಕಪ್ಪು ಬಿಳುಪು ಚೆಲುವು]

  ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ದೀಪಾವಳಿ ಹಬ್ಬ ಮುಗಿದ ನಂತರ ವಿಚಾರಣೆ ಮಾಡುವುದಾಗಿ ಕೋರ್ಟ್, ಕೇಸನ್ನು ಮುಂದಕ್ಕೆ ಹಾಕಿತ್ತು.

  ಇನ್ನು ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರ ಬಗ್ಗೆ ಈ ಮೊದಲು ಕೂಡ ಗಾಸಿಪ್ ಕ್ರಿಯೇಟ್ ಆಗಿತ್ತು. ಆವಾಗ ಖುದ್ದು ಬೋನಿ ಕಪೂರ್ ಅವರು ತಮ್ಮ ಮಗನನ್ನು ಕರೆದು ವಾರ್ನ್ ಮಾಡಿದ್ದರಂತೆ. ಇದೀಗ ಮತ್ತೆ ಇವರಿಬ್ಬರ ಕಳ್ಳಾಟಕ್ಕೆ ರೆಕ್ಕೆ-ಪುಕ್ಕ ಹುಟ್ಟಿಕೊಂಡಿದೆ.

  English summary
  Bollywood Actor Arjun Kapoor was spotted coming out of Actor Arbaaz Khan's wife Malaika Arora's building last night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X