For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ, ನಿರ್ದೇಶಕ ಲಲಿತ್ ಬೇಲ್ ಕೋವಿಡ್‌ಗೆ ಬಲಿ

  |

  ಹಿಂದಿ ಸಿನಿಮಾದ ಹಿರಿಯ ನಿರ್ದೇಶಕ, ನಟ ಲಲಿತ್ ಬೇಲ್ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ವಾರ ಲಲಿತ್‌ಗೆ ಕೊರೊನಾ ಇರುವುದು ಗೊತ್ತಾಗಿತ್ತು, ಅವರು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

  ಲಲಿತ್ ಬೇಲ್ ಅವರಿಗೆ ಹೃದಯ ಸಮಸ್ಯೆ ಇತ್ತು. ಕೋವಿಡ್‌ನಿಂದಾಗಿ ಶ್ವಾಸಕೋಶದ ಇನ್‌ಫೆಕ್ಶನ್‌ ಉಂಟಾಗಿ ಏಪ್ರಿಲ್ 23 ರಂದು ಅವರು ನಿಧನ ಹೊಂದಿದ್ದಾರೆ ಎಂದು ಲಲಿತ್ ಬೇಲ್ ಪುತ್ರ ಕಾನು ಬೇಲ್ ಹೇಳಿದ್ದಾರೆ.

  ಲಲಿತ್ ಬೇಲ್ ಸಾವಿನ ಸುದ್ದಿ ಕೇಳಿ ಬಾಲಿವಡ್‌ನ ಹಲವು ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ನಿರ್ದೇಶಕ ಅದಿಲ್ ಹಸನ್, ನಟ ರಣ್ವೀರ್ ಶೌರಿ, ನುಕುಲ್ ಮೆಹ್ತಾ ಸೇರಿ ಇನ್ನೂ ಹಲವು ಬಾಲಿವುಡ್ ಖ್ಯಾತನಾಮರು ಲಲಿತ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ.

  ದೂರದರ್ಶನಕ್ಕಾಗಿ ಹಲವಾರು ಕಿರುಚಿತ್ರಗಳನ್ನು ಧಾರಾವಾಹಿಗಳನ್ನು ಲಲಿತ್ ನಿರ್ದೇಶನ ಮಾಡಿದ್ದರು. 'ಮಹಾಸಂಗ್ರಾಮ್', 'ಅಫ್ಸಾನೆ', 'ವೇದ ವ್ಯಾಸ್‌ ಕಿ ಪೋತಿ', 'ಕಾನಾಬಾದೋಶ್' ಇನ್ನೂ ಹಲವು ಧಾರಾವಾಹಿ, ಟೆಲಿಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದರು.

  ನಟನಾಗಿಯೂ ಗುರುತಿಸಿಕೊಂಡಿದ್ದ ಲಲಿತ್, 'ತಿತ್ಲಿ', 'ಮುಕ್ತಿ ಭವನ್', 'ಜಡ್ಜ್‌ಮೆಂಟಲ್ ಹೈ ಕ್ಯಾ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ ವೆಬ್ ಸರಣಿ 'ಮೇಡ್ ಇನ್ ಹೆವೆನ್' ಅಲ್ಲಿ ಸಹ ನಟಿಸಿದ್ದಾರೆ.

  ಬಾಲಿವುಡ್‌ನಲ್ಲಿ ಇತ್ತೀಚೆಗೆ ಹಲವು ಮಂದಿ ಹಿರಿಯ ನಟ, ನಟಿ, ತಂತ್ರಜ್ಞರು ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ. ನಿನ್ನೆಯಷ್ಟೆ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾದಿಂದ ನಿಧನ ಹೊಂದಿದ್ದಾರೆ. ಅಮಿತ್ ಮಿಸ್ತ್ರಿ, ಕನ್ನಡದ ಪೋಸ್ಟರ್ ವಿನ್ಯಾಸಕ ಮಸ್ತಾನ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಸುಮಿತ್ರ ಭಾವೆ, ಕನ್ನಡದ ಯುವ ನಟ, ನಿರ್ಮಾಪಕ ಅರ್ಜುನ್ ಮಂಜುನಾಥ್ ಇನ್ನೂ ಕೆಲವರು ಕೇವಲ ಒಂದು ವಾರದ ಅಂತರದಲ್ಲಿ ಬಲಿಯಾಗಿದ್ದಾರೆ.

  English summary
  Senior actor and director Lalit Behl passed away on April 23 due to COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X