For Quick Alerts
  ALLOW NOTIFICATIONS  
  For Daily Alerts

  'ಟೈಗರ್'ಗಾಗಿ ಮತ್ತೆ ಒಂದಾಗುತ್ತಿದ್ದಾರೆ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್

  |

  ಬಾಲಿವುಡ್ ನ ಫೇಮಸ್ ಆನ್ ಸ್ಕ್ರೀನ್ ಜೋಡಿಯಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಜೋಡಿಯೂ ಒಂದು. ಇಬ್ಬರು ಒಟ್ಟಿಗೆ ನಟಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಜೋಡಿ ಕೊನೆಯದಾಗಿ ಭಾರತ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈಗ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

  ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ | Shivarajkumar | Filmibeat Kannada

  ಮೈನೆ ಪ್ಯಾರ್ ಕಿಯಾ, ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ಭಾರತ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಈಗ ಮನೀಶ್ ಶರ್ಮಾ ನಿರ್ದೇಶನದ ಟೈಗರ್-3 ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಟೈಗರ್ ಪ್ರಾಂಚೈಸಿಯ ಮೂರನೆ ಸರಣಿಯಲ್ಲಿಯೂ ಕತ್ರೀನಾ ನಾಯಕಿಯಾಗಿ ಮಿಂಚುತ್ತಿದ್ದಾರೆ.

  ವಿಶೇಷ ಫೋಟೋ ಶೇರ್ ಮಾಡಿ ಕತ್ರೀನಾಗೆ ಬರ್ತಡೇ ವಿಶ್ ಮಾಡಿದ ಸಲ್ಮಾನ್ ಖಾನ್ವಿಶೇಷ ಫೋಟೋ ಶೇರ್ ಮಾಡಿ ಕತ್ರೀನಾಗೆ ಬರ್ತಡೇ ವಿಶ್ ಮಾಡಿದ ಸಲ್ಮಾನ್ ಖಾನ್

  ಟೈಗರ್-3 ಸಿನಿಮಾಗಾಗಿ ಈಗಾಗಲೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಮನೀಶ್ ಶರ್ಮಾ ಮತ್ತು ಸಲ್ಮಾನ್ ಖಾನ್ ಇಬ್ಬರು ಸಿನಿಮಾದ ಬಗ್ಗೆ ಮಾತುಕತೆ ನಡೆದಿದ್ದು ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಟೈಗರ್ ಸರಣಿಯ ಮೂರನೆ ಸರಣಿಗೂ ಯಶ್ ರಾಜ್ ಬ್ಯಾನರ್ ಬಂಡವಾಳ ಹೂಡುತ್ತಿದೆ.

  ಟೈಗರ್ ಮೊದಲೆರಡು ಸರಣಿಯನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ತಾ ಟೈಗರ್ ಕಬೀರ್ ಖಾನ್ ಸಾರಥ್ಯದಲ್ಲಿ ಮೂಡಿ ಬಂದಿತ್ತು. ಆ ನಂತರ ಬಂದ ಟೈಗರ್ ಜಿಂದಾ ಹೈ ಅಲಿ ಅಬ್ಬಾಸ್ ಜಫರ್ ಆಕ್ಷನ್ ಕಟ್ ಹೇಳಿದ್ದರು. ಇದೀಗ ಟೈಗರ್ ಮೂರನೆ ಸರಣಿಗೆ ಮನೀಶ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಮೂರನೆ ಸರಣಿ ಹೇಗಿರಲಿದೆ ಎನ್ನುವ ಕುತೂಹಲ ಸಲ್ಮಾನ್ ಅಭಿಮಾನಿಗಳಲ್ಲಿ ಮೂಡಿದೆ.

  ನಿರ್ದೇಶಕರು ಬದಲಾದರೂ ನಾಯಕಿ ಮಾತ್ರ ಬದಲಾಗಲಿಲ್ಲ. ಟೈಗರ್ ಮೂರನೆ ಸರಣಿಯಲ್ಲಿಯೂ ಕತ್ರೀನಾ ಸಲ್ಮಾನ್ ಜೊತೆ ರೊಮ್ಯಾನ್ಸ ಮಾಡಲು ಸಿದ್ಧರಾಗಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಲ್ಮಾನ್ ಸದ್ಯ ರಾಧೆ ಮತ್ತು ಕಬಿ ಈದ್ ಕಬಿ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಟೈಗರ್ ಮೂರನೆ ಸರಣಿ ಪ್ರಾರಂಭಿಸಲಿದ್ದಾರೆ.

  English summary
  Bollywood Actor Salman Khan and Katrina Kaif are back to Tiger -3. Maneesh Sharma directed by this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X