For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನಕ್ಕೆ ಹಾರಲು ಮುಂದಾದ ಸಲ್ಮಾನ್ ಖಾನ್

  By Rajendra
  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಪಾಕಿಸ್ತಾನಕ್ಕೆ ಹಾರಲು ಮುಂದಾಗಿದ್ದಾರೆ. ಅವರು ಹಾರುತ್ತಿರುವುದು ಸದುದ್ದೇಶಕ್ಕೇ ಹೊರತು ದುರುದ್ದೇಶಕ್ಕಲ್ಲ. ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ಏಕ್ತಾ ಟೈಗರ್' ಚಿತ್ರದ ಪ್ರೊಮೋಗೆ ಪಾಕಿಸ್ತಾನ ನಿಷೇಧ ಹೇರಿದೆ.

  ಈ ಹಿನ್ನೆಲೆಯಲ್ಲಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಸಲ್ಲು ಜೊತೆ ಚಿತ್ರದ ನಿರ್ದೇಶಕ ಕಬೀರ್ ಖಾನ್ ಕೂಡ ಪಾಕಿಸ್ತಾನಿ ವಿಮಾನ ಹತ್ತಲಿದ್ದಾರೆ. ಇಷ್ಟಕ್ಕೂ 'ಏಕ್ತಾ ಟೈಗರ್' ಚಿತ್ರದ ಪ್ರೊಮೋಗಳ ಮೇಲೆ ಪಾಕ್ ನಿಷೇಧ ಹೇರಲು ಕಾರಣ ಏನು ಎಂದು ನೋಡೋಣ.

  ಎರಡು ಗುಪ್ತಚರ ಇಲಾಖೆಗಳ ಸುತ್ತ ಏಕ್ತಾ ಟೈಗರ್ ಚಿತ್ರದ ಕತೆ ಸುತ್ತುತ್ತದೆ. ಅವು ಭಾರತದ RAW (Research and Analysis Wing) ಹಾಗೂ ಪಾಕಿಸ್ತಾನದ ISI (Inter-Services Intelligence). ಅದರಲ್ಲೂ ಪಾಕಿಸ್ತಾನದ ಐಎಸ್ಐ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪಾಕ್ ಭಾವಿಸಿದೆ.

  ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ನಿಯಂತ್ರಣ ಪ್ರಾಧಿಕಾರ ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಅದರ ಪ್ರಕಾರ, ಯಾವುದೇ ಸ್ಯಾಟಲೈಟ್ ಚಾನಲ್ ಗಳು ಹಾಗೂ ಕೇಬಲ್ ಟಿವಿ ನೆಟ್ ವರ್ಕ್ ಗಳು ಈ ಚಿತ್ರದ ಪ್ರೊಮೋಗಳನ್ನು ಪ್ರಸಾರ ಮಾಡಬಾರದು ಎಂದು ನಿಷೇಧಾಜ್ಞೆ ಜಾರಿ ಮಾಡಿದೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕಬೀರ್ ಖಾನ್, "ಇದುವರೆಗೂ ನಾನಾಗಲಿ ಸಲ್ಮಾನ್ ಖಾನ್ ಆಗಲಿ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಈಗ ಯಾಕಾಗಬಾರದು. ನಮ್ಮ ಚಿತ್ರ ನಿಮ್ಮ ದೇಶದ ವಿರುದ್ಧ ಅಲ್ಲ ಎಂಬುದನ್ನು ಅವರಿಗೆ ತಿಳಿಸಲು ಹೋಗುತ್ತಿದ್ದೇವೆ" ಎಂದಿದ್ದಾರೆ.

  ಕೇವಲ ಪ್ರೊಮೋಗಳನ್ನು ನೋಡಿ ಈ ಚಿತ್ರ ಪಾಕ್ ವಿರುದ್ಧ ಎಂದು ಭಾವಿಸುವುದು ತಪ್ಪು. ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿದರೆ ತಾನೆ ಸತ್ಯ ಸಂಗತಿ ಏನು ಎಂಬುದು ಗೊತ್ತಾಗುವುದು. ಚಿತ್ರ ಬಿಡುಗಡೆಯಾದ ಮೇಲೆ ಸತ್ಯ ಸಂಗತಿಗಳು ಗೊತ್ತಾಗುತ್ತವೆ ಎಂದಿದ್ದಾರೆ ಕಬೀರ್ ಖಾನ್.

  ಯಶ್ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸೊಹೈಲ್ ಸೇನ್ ಸಂಗೀತ ನಿರ್ದೇಶಿಸಿದ್ದಾರೆ. ಚಿತ್ರದ ನಾಯಕಿ ಕತ್ರಿನಾ ಕೈಫ್. ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಭಾರತದ ಕ್ಷಿಪಣಿ ತಂತ್ರಜ್ಞಾನವನ್ನು ಪಾಕ್ ಗೆ ರಹಸ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಸಿಗುತ್ತದೆ. ಇದನ್ನು ತನಿಖೆ ಮಾಡಲು ಸರ್ಕಾರ ಸೀಕ್ರೆಟ್ ಏಜೆಂಟ್ ಟೈಗರ್ (ಸಲ್ಮಾನ್ ಖಾನ್) ಕಳುಹಿಸುತ್ತದೆ.

  ಆದರೆ ತನಿಖೆಯ ಜೊತೆಜೊತೆಗೆ ಟೈಗರ್ ಪ್ರೊಫೆಸರ್ ಮಗಳ (ಕತ್ರಿನಾ ಕೈಫ್) ಪ್ರೀತಿಯ ಬಲೆಗೆ ಬೀಳುತ್ತಾನೆ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಕತೆ ಸಾಗುತ್ತದೆ. ರೊಮ್ಯಾಂಟಿಕ್ ಥ್ರಿಲ್ಲರ್ ಆದ ಈ ಚಿತ್ರದ ಬಗ್ಗೆ ಪಾಕ್ ಸದ್ಯಕ್ಕೆ ಗರಂ ಆಗಿದೆ. (ಏಜೆನ್ಸೀಸ್)

  English summary
  Bollywood actor Salman Khan is ready to visit Pakistan following the ban on the Ek Tha Tiger promo in the contry. The actor will be accompanied by director Kabir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X