twitter
    For Quick Alerts
    ALLOW NOTIFICATIONS  
    For Daily Alerts

    ಪುಸ್ತಕವಾಗಿ ಬರಲಿದೆ ಸೋನು ಸೂದ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಅನುಭವಗಳು

    |

    ಕೊರೊನಾ ಲಾಕ್ ಡೌನ್ ನಂತರ ವಲಸೆ ಕಾರ್ಮಿಕರ ಕಷ್ಟಕ್ಕೆ ನೆರವಾದ ನಟ ಸೋನು ಸೂದ್, ಈ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ಲಕ್ಷಾಂತರ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸಿದ ತನ್ನ ಅನುಭವ ಜನರಿಗೆ ತಲುಪಿಸುವ ಉದ್ದೇಶದಿಂದ ಪುಸ್ತಕ ಬರೆಯುತ್ತಿದ್ದಾರೆ.

    ಈಗಾಗಲೆ ಸೋನು ಸೂದ್ ಪುಸ್ತಕ ಬರೆಯಲು ಶುರು ಮಾಡಿದ್ದಾರೆ. ವರ್ಷಾಂತ್ಯದಲ್ಲಿ ಪುಸ್ತಕ ಹೊರಬರುವ ಸಾಧ್ಯತೆ ಇದೆ. ಪೆಂಗ್ವಿನ್ ರ್ಯಾಂಡಮ್ ಹೌಸ್ ಸಂಸ್ಥೆಯು ಪುಸ್ತಕವನ್ನು ಹೊರತರುತ್ತಿದೆ. ಪುಸ್ತಕ ಬರೆಯುವ ಬಗ್ಗೆ ಮಾತನಾಡಿರುವ ಸೋನು ಸೂದ್ " ಕಳೆದ ಮೂರೂವರೆ ತಿಂಗಳಿಂದ ನನಗೆ ಜೀವನವನ್ನು ಬದಲಾಯಿಸಿದ ಅನುಭವವಾಗಿದೆ. ವಲಸಿಗರೊಂದಿಗೆ ದಿನಕ್ಕೆ 16ರಿಂದ 18 ಗಂಟೆಗಳ ಕಾಲ ಜೊತೆ ಇದ್ದು ಅವರ ನೋವನ್ನು ಹಂಚಿಕೊಳ್ಳುವುದು ಮತ್ತು ಅವರು ಮನೆಗೆ ಹಿಂದಿರುಗಲು ಪ್ರಯಾಣ ಪ್ರಾರಂಬಿಸಿದಾಗ ನಾನು ಅವರನ್ನು ನೋಡಲು ಹೋದಾಗ, ನನ್ನ ಹೃದಯವು ಸಂತೋಷ ಮತ್ತು ನೆಮ್ಮದಿಯಿಂದ ತುಂಬಿರುತ್ತೆ" ಎಂದಿದ್ದಾರೆ.

    ಮತ್ತೆ ಬಡವರ ಕಷ್ಟಕ್ಕೆ ನೆರವಾದ ಸೋನು ಸೂದ್: ವಲಸೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವುಮತ್ತೆ ಬಡವರ ಕಷ್ಟಕ್ಕೆ ನೆರವಾದ ಸೋನು ಸೂದ್: ವಲಸೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವು

    ಅವರ ಮುಖದಲ್ಲಿ ನಗುವನ್ನು ನೋಡಿ, ಅವರ ಕಣ್ಣುಗಳಲ್ಲಿನ ಸಂತೋಷದ ಕಣ್ಣೀರು ನನ್ನ ಜೀವನದ ಅತ್ಯಂತ ವಿಶೇಷ ಅನುಭವವಾಗಿದೆ. ಕೊನೆಯ ವಲಸಿಗನನ್ನು ತನ್ನ ಹಳ್ಳಿಗೆ ತಲುಪುವವರೆಗೂ, ಅವರ ಪ್ರೀತಿಪಾತ್ರರನ್ನು ಮರಳಿ ಸೇರುವವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ" ಎಂದು ಹೇಳಿದ್ದಾರೆ.

    Actor Sonu Sood To Write A Book On His Experience Of Lock Down

    "ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ನನ್ನನ್ನು ನೇಮಿಸಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸಿಸುತ್ತೇನೆ. ನನ್ನ ಒಂದು ಭಾಗ ಯುಪಿ, ಬಿಹಾರ, ಜಾರ್ಖಂಡ್ ಅಸ್ಸಾಂ ಅತ್ತರಾಖಂಡ್ ಮತ್ತು ಇತರ ರಾಜ್ಯಗಳ ಹಳ್ಳಿಗಳಲ್ಲಿ ವಾಸಿಸುತ್ತಿದೆ ಎಂದು ಭಾವಿಸುತ್ತೇನೆ. ಅಲ್ಲಿ ನಾನೀಗ ಹೊಸ ಸ್ನೇಹಿತರನ್ನು ಕಂಡುಕೊಂಡಿದ್ದೀನಿ. ಈ ಎಲ್ಲಾ ಅನುಭವವನ್ನು ನನ್ನ ಆತ್ಮದಲ್ಲಿ ಶಾಶ್ವತವಾಗಿ ಹುದುಗಿಡುವ ಕಥೆಗಳನ್ನು ಪುಸ್ತಕದಲ್ಲಿ ಇರಿಸಲು ನಿರ್ಧರಿಸಿದ್ದೇನೆ" ಎಂದು ಸೋನು ಸೂದ್ ತಿಳಿಸಿದ್ದಾರೆ.

    English summary
    Actor Sonu Sood to write a book on his experience of lock down.
    Friday, July 17, 2020, 10:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X