For Quick Alerts
  ALLOW NOTIFICATIONS  
  For Daily Alerts

  ವಿದೇಶಿಗರ ಕೈಲಿ ನಟಿ ಐಶ್ವರ್ಯ ರೈ ನಕಲಿ ಪಾಸ್‌ಪೋರ್ಟ್! ಜೊತೆಗೆ ನಾಲ್ಕು ಕೋಟಿ ನಗದು!

  |

  ನಟಿ ಐಶ್ವರ್ಯಾ ರೈ, ಭಾರತದ ಖ್ಯಾತ ನಟಿಯರಲ್ಲೊಬ್ಬರು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಮೊದಲ ಬಾಲಿವುಡ್ ನಟಿ ಎಂಬ ಖ್ಯಾತಿಯೂ ಐಶ್ವರ್ಯಾ ರೈ ಅವರದ್ದು.

  ಇತ್ತೀಚೆಗೆ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ ಐಶ್ವರ್ಯಾ ರೈ, ಆದರೆ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಐಶ್ವರ್ಯಾಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಈಗಲೂ ಇದೆ.

  ಹೇಮಾಮಾಲಿನಿ, ರೇಖಾ ಅಂಥಹವರ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದ ಬಾಲಿವುಡ್ ನಟಿ ಎಂಬ ಖ್ಯಾತಿಯೂ ಇರುವ ಐಶ್ವರ್ಯಾ ಅವರ ಹೆಸರನ್ನು ಹಲವರು ಹಲವು ವಿಧವಾಗಿ ಬಳಸುತ್ತಾರೆ. ಆಟೋಗಳ ಮೇಲೆ, ಬಸ್ಸುಗಳ ಮೇಲೆ, ಸ್ಥಳೀಯ ಪ್ರಾಡೆಕ್ಟ್‌ನ ಜಾಹೀರಾತುಗಳಲ್ಲಿ, ಬೀಡಿ ಜಾಹಿರಾತುಗಳಲ್ಲಿ ಸಹ ಐಶ್ವರ್ಯಾ ರೈ ಮುಖ ಈಗಲೂ ಕಾಣುತ್ತದೆ.

  ಇತ್ತೀಚೆಗೆ ಐಶ್ವರ್ಯಾ ರೈ ಹೆಸರಲ್ಲಿ ಕೆಲವರು ಆಧಾರ್ ಕಾರ್ಡ್, ನರೇಗಾ ಕಾರ್ಡ್‌ಗಳನ್ನು ಮಾಡಿಸಿದ್ದು ಸುದ್ದಿಯಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟಿ ಐಶ್ವರ್ಯಾ ರೈ ಹೆಸರಿನ ನಕಲಿ ಪಾಸ್‌ಪೋರ್ಟ್ ಅನ್ನೇ ಮಾಡಿಸಿದ್ದಾರೆ ಖದೀಮರು. ಅದೂ ಭಾರತದವರಲ್ಲ ವಿದೇಶಿಗರು.

  ಉತ್ತರ ಪ್ರದೇಶದ ಪೊಲೀಸರು ಇಬ್ಬರು ನೈಜೀರಿಯನ್ ಹಾಗು ಒಬ್ಬ ಘಾನಾದ ಪ್ರಜೆಗಳನ್ನು ಬಂಧಿಸಿದ್ದು ಅವರಿಂದ ನಟಿ ಐಶ್ವರ್ಯಾ ರೈ ಅವರ ನಕಲಿ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ನಾಲ್ಕು ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

  ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾನಲ್ಲಿ ವಾಸವಿದ್ದ ಈ ಮೂವರು ವಿವಿಧ ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿ ಸುಮಾರು 1.81 ಕೋಟಿ ಹಣ ಲಪಟಾಯಿಸಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಭಾರಿ ಮೊತ್ತದ ಹಣದ ಜೊತೆಗೆ ಐಶ್ವರ್ಯಾ ರೈ ಹೆಸರಿನಲ್ಲಿರುವ ನಕಲಿ ಪಾಸ್‌ಪೋರ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟಿ ಐಶ್ವರ್ಯಾ ರೈ 2018 ರಲ್ಲಿ ಬಿಡುಗಡೆ ಆಗಿದ್ದ 'ಫನ್ನೆ ಖಾನ್ ಬಳಿಕ ನಟಿಸಿದ್ದು ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ. ಈ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಯಿತು. 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಶೀಘ್ರವೆ ತೆರೆಗೆ ಬರಲಿದೆ.

  English summary
  Actress Aishwarya Rai's fake passport recovered by three foreigners. And also more than 4 crore worth foreign cash.
  Saturday, December 17, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X