For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ 'ಪ್ರಭಾಸ್'ಗಾಗಿ ಶಾರೂಖ್ ಚಿತ್ರ ರಿಜೆಕ್ಟ್ ಮಾಡಿದ ಆಲಿಯಾ ಭಟ್.!

  By Suneel
  |

  ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 'ರಯೀಸ್' ಚಿತ್ರದ ನಂತರ ಆನಂದ್ ಎಲ್ ರೈ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಿರಂತರ ಸುದ್ದಿಯಾಗುತ್ತಿದೆ. ಅದಕ್ಕೆ ಕಾರಣ ಚಿತ್ರದ ಹೀರೋಯಿನ್ ಗಳು.

  ಶಾರುಖ್ ಖಾನ್ ಮತ್ತು ಆನಂದ್ ಎಲ್ ರೈ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಡ್ವಾರ್ಫ್' ಚಿತ್ರಕ್ಕೆ ಇಬ್ಬರು ನಟಿಯರಿದ್ದು, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ದೀಪಿಕಾ ಪಡುಕೋಣೆ ತಮ್ಮ ಬಿಜಿ ಶೆಡ್ಯೂಲ್ ನಿಂದ ಶಾರುಖ್ ಜೊತೆ ಈ ಚಿತ್ರದಲ್ಲಿ ನಟಿಸಲು 'ನೋ' ಎಂದಿದ್ದರು.[ಶಾರುಖ್ ಖಾನ್ ಸಿನಿಮಾ ರಿಜೆಕ್ಟ್ ಮಾಡಿದ ದೀಪಿಕಾ!]

  ಅಂದಹಾಗೆ ಇತ್ತೀಚೆಗೆ ಶಾರುಖ್ ಖಾನ್ 'ಡ್ವಾರ್ಫ್' ಚಿತ್ರದಲ್ಲಿ ನಟಿಸಲು ನಟಿ ಆಲಿಯಾ ಭಟ್ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ. ಆಲಿಯಾ ಭಟ್, ಶಾರುಖ್ ರವರ ಚಿತ್ರ ರಿಜೆಕ್ಟ್ ಮಾಡುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದ ಚಿತ್ರತಂಡಕ್ಕೆ ಶಾಕಿಂಗ್ ಉತ್ತರ ನೀಡಿದರಂತೆ. ಮುಂದೆ ಓದಿರಿ..

  ಆಲಿಯಾಗೆ 'ನೋ' ಎನ್ನಲು ಮನಸ್ಸಿರಲಿಲ್ಲವಂತೆ

  ಆಲಿಯಾಗೆ 'ನೋ' ಎನ್ನಲು ಮನಸ್ಸಿರಲಿಲ್ಲವಂತೆ

  ಡೆಕ್ಕನ್ ಕ್ರಾನಿಕಲ್ ಹೇಳಿರುವಂತೆ, "ಆಲಿಯಾ ಭಟ್ ರವರಿಗೆ ಶಾರುಖ್ ಖಾನ್ ಚಿತ್ರದಲ್ಲಿ ನಟಿಸುವ ಅವಕಾಶಕ್ಕೆ 'ನೋ' ಎನ್ನಲು ಮನಸ್ಸಿರಲಿಲ್ಲವಂತೆ. ಕಾರಣ ಆಲಿಯಾ ಭಟ್ ಈಗಾಗಲೇ ಗೌರಿ ಶಿಂದೆ ನಿರ್ದೇಶನದ 'ಡಿಯರ್ ಜಿಂದಗಿ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ್ದರು". ಮತ್ತೆ ಆಲಿಯಾ ಭಟ್ ಉತ್ತರ ಏನು?...

  ಕರಣ್ ಜೋಹರ್ ಸಹಾಯ ಪಡೆದ ಆಲಿಯಾ

  ಕರಣ್ ಜೋಹರ್ ಸಹಾಯ ಪಡೆದ ಆಲಿಯಾ

  ಆಲಿಯಾ ಭಟ್, ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಸಹಾಯ ಪಡೆದು ನಟಿ ರೇಷ್ಮ ಶೆಟ್ಟಿ ಜೊತೆಯಲ್ಲಿ ಶಾರುಖ್ ಖಾನ್ ರನ್ನು ಅವರ ಮನ್ನತ್ ಬಂಗಲೆಯಲ್ಲಿ ಭೇಟಿ ಮಾಡಿದರಂತೆ.

  ಶಾರುಖ್ ಚಿತ್ರಕ್ಕೆ ಒಪ್ಪಿಕೊಂಡಿಲ್ಲ. ಕಾರಣ..

  ಶಾರುಖ್ ಚಿತ್ರಕ್ಕೆ ಒಪ್ಪಿಕೊಂಡಿಲ್ಲ. ಕಾರಣ..

  ಡೆಕ್ಕನ್ ಕ್ರಾನಿಕಲ್ ವರದಿ ಪ್ರಕಾರ, "ಆಲಿಯಾ ಭಟ್, 'ಡ್ವಾರ್ಫ್' ಚಿತ್ರದಲ್ಲಿ ನಟಿಸಲು ದಿನಾಂಕ ಸಮಸ್ಯೆ ಇರುವುದನ್ನು ಕ್ಯಾಲೆಂಡರ್ ಸಹಿತ ಶಾರುಖ್ ಖಾನ್ ರವರಿಗೆ ತೋರಿಸಿದರಂತೆ". ಈ ಕಾರಣದಿಂದ ಆಲಿಯಾ ಭಟ್ 'ಡ್ವಾರ್ಫ್' ಚಿತ್ರದಲ್ಲಿ ನಟಿಸಲು ಸಹಿ ಹಾಕಿಲ್ಲವಂತೆ.

  ಶಾರುಖ್ ರಲ್ಲಿ ರಿಕ್ವೆಸ್ಟ್ ಮಾಡಿದ ಆಲಿಯಾ

  ಶಾರುಖ್ ರಲ್ಲಿ ರಿಕ್ವೆಸ್ಟ್ ಮಾಡಿದ ಆಲಿಯಾ

  "ನನಗೆ ಸರಿಹೊಂದುವ ಡೇಟ್ ನೀಡಿ.. ಇಲ್ಲಿದಿದ್ದರೇ, ಈ ಪ್ರಾಜೆಕ್ಟ್ ನಿಂದ ಎಕ್ಸ್ ಕ್ಯೂಸ್ ನೀಡಿ' ಎಂದು ಆಲಿಯಾ ಭಟ್ ಶಾರುಖ್ ರಲ್ಲಿ ಕೇಳಿಕೊಂಡರಂತೆ.

  ಶಾರುಖ್ ಪ್ರತಿಕ್ರಿಯೆ?

  ಶಾರುಖ್ ಪ್ರತಿಕ್ರಿಯೆ?

  ಆಲಿಯಾ ಭಟ್ 'ಡ್ವಾರ್ಫ್' ಚಿತ್ರದಲ್ಲಿ ನಟಿಸಲು ಆಗದಿರುವುದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ ಕಾರಣ ಶಾರುಖ್ ಖಾನ್ ರವರು ಸಂತೋಷವಾಗಿಯೇ ಪರವಾಗಿಲ್ಲ... ಇಟ್ ಈಸ್ ಓಕೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಆಲಿಯಾ ಭಟ್ ಗೆ ಪ್ರಭಾಸ್ ಜೊತೆ ನಟಿಸುವಾಸೆ

  ಆಲಿಯಾ ಭಟ್ ಗೆ ಪ್ರಭಾಸ್ ಜೊತೆ ನಟಿಸುವಾಸೆ

  ಆಲಿಯಾ ಭಟ್ 'ಡ್ವಾರ್ಫ್' ಚಿತ್ರದಲ್ಲಿ ನಟಿಸುವ ಅವಕಾಶಕ್ಕೆ 'ನೋ' ಎನ್ನಲು ಮೇಲೆ ತಿಳಿಸಿದ ಕಾರಣ ಮಾತ್ರವಲ್ಲದೇ, ಇನ್ನೊಂದು ಆಯಾಮದಲ್ಲಿ ನಟಿ 'ಬಾಹುಬಲಿ' ಪ್ರಭಾಸ್ ಜೊತೆ ನಟಿಸುವ ಆಕಾಂಕ್ಷಿಯಾಗಿರುವುದು ಎಂದು ಸುದ್ದಿ ಹರಿದಾಡುತ್ತಿದೆ.

  ಪ್ರಭಾಸ್ ಜೊತೆ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ..

  ಪ್ರಭಾಸ್ ಜೊತೆ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ..

  ಇತ್ತೀಚೆಗಷ್ಟೆ ಆಲಿಯಾ ಭಟ್ 'ಬಾಹುಬಲಿ' ಚಿತ್ರದಲ್ಲಿನ ನೆಚ್ಚಿನ ನಟ ಯಾರು ಎಂಬುದಕ್ಕೆ ಪ್ರಭಾಸ್ ಎಂದು ಹೇಳಿ, " ನನಗೇನಾದರೂ ಪ್ರಭಾಸ್ ಜೊತೆ ಅಭಿನಯಿಸಲು ಅವಕಾಶ ಬಂದರೇ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದ್ದರು.[ಪ್ರಭಾಸ್ ಬಗ್ಗೆ ಆಲಿಯಾ ಭಟ್ ಗೆ ಶುರುವಾಗಿದೆ ಕನಸು!]

  ಪ್ರಭಾಸ್ ಚಿತ್ರಕ್ಕೆ ನಟಿಯರಿಗಾಗಿ ಹುಡುಕಾಟ

  ಪ್ರಭಾಸ್ ಚಿತ್ರಕ್ಕೆ ನಟಿಯರಿಗಾಗಿ ಹುಡುಕಾಟ

  ವಿಶೇಷ ಅಂದ್ರೆ ಇದೇ ವೇಳೆ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರಕ್ಕಾಗಿ ಬಾಲಿವುಡ್ ಮತ್ತು ಟಾಲಿವುಡ್ ನಟಿಯರ ಹುಡುಕಾಟದಲ್ಲಿ ಚಿತ್ರತಂಡ ಬಿಜಿಯಾಗಿದೆ.

  English summary
  Alia Bhatt rejects Shahrukh Khan’s next film with Aanand L Rai, but she is dying to work with Baahubali Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X