For Quick Alerts
  ALLOW NOTIFICATIONS  
  For Daily Alerts

  'ಬಿಂದಾಸ್' ಬೆಡಗಿ ಹನ್ಸಿಕಾ ಡೆಸ್ಟಿನೇಷನ್ ವೆಡ್ಡಿಂಗ್: ವರ ಯಾರು? ಮದುವೆ ಯಾವಾಗ, ಎಲ್ಲಿ? ಇಲ್ಲಿದೆ ಡಿಟೈಲ್ಸ್!

  |

  ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಫಿಕ್ಸ್ ಆಗಿದೆ ಎನ್ನುವ ವರದಿಯಾಗಿದೆ. ಮುಂಬೈನಲ್ಲಿ ಹುಟ್ಟಿಬೆಳೆದ ಹಾಲು ಗಲ್ಲದ ಚೆಲುವೆ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮುಂದೆ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸಿದರು. ಲವ್‌ ಅಫೇರ್‌ಗಳಿಂದಲೂ ಸುದ್ದಿಯಾಗಿದ್ದ ಬೆಡಗಿ ಈಗ ಮದುವೆಗೆ ಸಿದ್ಧರಾಗಿದ್ದಾರೆ.

  ಹೃತಿಕ್ ರೋಷನ್, ಪ್ರೀತಿ ಜಿಂಟಾ ನಟನೆಯ 'ಕೋಯಿ ಮಿಲ್‌ ಗಯಾ' ಚಿತ್ರದಲ್ಲಿ ಬಾಲನಟಿಯಾಗಿ ಹನ್ಸಿಕಾ ಕಮಾಲ್ ಮಾಡಿದ್ದರು. ಅಲ್ಲು ಅರ್ಜುನ್ ನಟನೆಯ 'ದೇಶಮುದುರು' ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಹನ್ಸಿಕಾ ಬಣ್ಣ ಹಚ್ಚಿದ್ದರು. ಮುಂದೆ ಸಾಲು ಸಾಲು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಕನ್ನಡದ 'ಬಿಂದಾಸ್' ಚಿತ್ರದಲ್ಲೂ ನಟಿಸಿದ್ದರು. ಮಾದಕ ಮೈಮಾಟದಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದರು. ಸದ್ಯ ಮುಂಬೈ ಚೆಲುವೆ ಕೈ ತುಂಬಾ ಸಿನಿಮಾಗಳಿವೆ. ಆದರೂ ಮದುವೆಗೆ ಮನಸ್ಸು ಮಾಡಿದ್ದಾರೆ. ಈಗಾಗಲೇ ಮದುವೆಗೆ ಜೈಪುರದ ಪ್ಯಾಲೇಸ್ ಬುಕ್‌ ಆಗಿದೆ.

  ರಾಜಕೀಯ ಮುಖಂಡನ ಮಗನೊಂದಿಗೆ ಹನ್ಸಿಕಾ ಮೋಟ್ವಾನಿ ನಿಶ್ಚಿತಾರ್ಥ: ಬಿಂದಾಸ್ ಹುಡುಗಿ ಕಥೆಯೇನು?ರಾಜಕೀಯ ಮುಖಂಡನ ಮಗನೊಂದಿಗೆ ಹನ್ಸಿಕಾ ಮೋಟ್ವಾನಿ ನಿಶ್ಚಿತಾರ್ಥ: ಬಿಂದಾಸ್ ಹುಡುಗಿ ಕಥೆಯೇನು?

  ಹಿಂದಿ ಕಿರುತೆರೆಯಲ್ಲಿ ಬಾಲ ನಟಿಯಾಗಿ ನಟಿಸೋಕೆ ಶುರು ಮಾಡಿದ ಚೆಲುವೆ ಮುಂದೆ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ನಂತರ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಹನ್ಸಿಕಾ ಮೋಟ್ವಾನಿ ಸಿನಿಮಾಗಳಲ್ಲಿ ಗ್ಲಾಮರ್ ಬೊಂಬೆಯಾಗಿ ಮಿಂಚಿದ್ದೇ ಹೆಚ್ಚು.

  ಜೈಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್

  ಜೈಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್

  ನಟಿ ಹನ್ಸಿಕಾ ಮೋಟ್ವಾನಿ ಮದುವೆ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಸೆಲೆಬ್ರೆಟಿಗಳ ಡೆಸ್ಟಿನೇಷನ್‌ ವೆಡ್ಡಿಂಗ್ ಕಾಮನ್. ಡಿಸೆಂಬರ್‌ನಲ್ಲಿ ಹನ್ಸಿಕಾ ಮದುವೆ ನಡೆಯಲಿದ್ದು, ಈಗಾಗಲೇ ಜೈಪುರದ ಮುಂಡೋಟ ಪ್ಯಾಲೇಸ್‌ನ ಬುಕ್ ಮಾಡಿದ್ದಾರಂತೆ. ಹಾಗಾಗಿಯೇ ಈ ಮದುವೆ ಸುದ್ದಿ ರಿವೀಲ್ ಆಗಿದೆ. 450 ವರ್ಷದ ಈ ಹಳೇ ಪ್ಯಾಲೇಸ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಕಲ್ಯಾಣೋತ್ಸವ ನಡೆಯಲಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೆಲೆಬ್ರೆಟಿಗಳು ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ.

  ಪ್ರೈವೇಟ್ ಫೋಟೋಗಳು ಲೀಕ್ ಆದ್ಮೇಲೆ ಎಲ್ಲರೂ ಹೇಳೋದು ಇದೆ.!ಪ್ರೈವೇಟ್ ಫೋಟೋಗಳು ಲೀಕ್ ಆದ್ಮೇಲೆ ಎಲ್ಲರೂ ಹೇಳೋದು ಇದೆ.!

  ಹನ್ಸಿಕಾ ಕೈಹಿಡಿಯುವ ಹುಡುಗ ಯಾರು?

  ಹನ್ಸಿಕಾ ಕೈಹಿಡಿಯುವ ಹುಡುಗ ಯಾರು?

  ದಕ್ಷಿಣ ಭಾರತದ ರಾಜಕೀಯ ಮುಖಂಡರೊಬ್ಬರ ಮಗನನ್ನು ಹನ್ಸಿಕಾ ಕೈ ಹಿಡಿಯಲಿದ್ದಾರೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಕೂಡ ನಡೆದಿದ್ದು, ಶೀಘ್ರದಲ್ಲೇ ಅದನ್ನು ಬಿಂದಾಸ್ ನಟಿ ರಿವೀಲ್ ಮಾಡಲಿದ್ದಾರೆ. ಹನ್ಸಿಕಾ ಬಾಳ ಸಂಗಾತಿಯಾಗುವ ಹುಡುಗ ಒಬ್ಬ ಉದ್ಯಮಿ ಎಂದು ಹೇಳಲಾಗುತ್ತಿದೆ.

  ನಟ ಸಿಂಬು ಜೊತೆ ಹನ್ಸಿಕಾ ಡೇಟಿಂಗ್

  ನಟ ಸಿಂಬು ಜೊತೆ ಹನ್ಸಿಕಾ ಡೇಟಿಂಗ್

  'ವಾಲು' ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಸಿಂಬು ಹಾಗೂ ಹನ್ಸಿಕಾ ಮೊಟ್ವಾನಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರು ಡೇಟಿಂಗ್ ನಡೆಸಿದ್ದರು. ಆದರೆ ಈ ಬಗ್ಗೆ ಇಬ್ಬರು ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಇಬ್ಬರೂ ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು. ಆದರೆ ನಂತರ ದೂರಾಗಿದ್ದರು. ಬ್ರೇಕಪ್‌ಗೆ ಕಾರಣ ಏನು ಎನ್ನುವುದು ಮಾತ್ರ ತಿಳಿಯಲಿಲ್ಲ. ಇನ್ನು ಪ್ರಭುದೇವಾ ಜೊತೆಗೂ ಚೆಲುವೆಯ ಹೆಸರು ತಳುಕು ಹಾಕಿಕೊಂಡಿತ್ತು.

  ಅಪ್ಪು ಜೊತೆ ಹನ್ಸಿಕಾ 'ಬಿಂದಾಸ್'

  ಅಪ್ಪು ಜೊತೆ ಹನ್ಸಿಕಾ 'ಬಿಂದಾಸ್'

  ಡಿ. ರಾಜೇಂದ್ರ ಬಾಬು ನಿರ್ದೇಶನದ 'ಬಿಂದಾಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಹನ್ಸಿಕಾ ಬಣ್ಣ ಹಚ್ಚಿದ್ದರು. ಈ ಸಿನಿಮಾ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಶಿವು ಜೋಡಿ ಪ್ರೀತಿಯಾಗಿ ಕನ್ನಡ ಸಿನಿರಸಿಕರ ಗಮನ ಸೆಳೆದರು. ಇನ್ನು ಸಾಂಗ್ಸ್‌ನಲ್ಲಿ ಅಪ್ಪು ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿ ರಂಜಿಸಿದರು.

  ಮದುವೆ ನಂತರ ಮತ್ತೆ ನಟಿಸುತ್ತಾರಾ?

  ಮದುವೆ ನಂತರ ಮತ್ತೆ ನಟಿಸುತ್ತಾರಾ?

  ಟಾಲಿವುಡ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರೂ ಹನ್ಸಿಕಾ ಕಾಲಿವುಡ್‌ನಲ್ಲೇ ಸೆಟ್ಲ್ ಆದರು. ತೆಲುಗಿನಲ್ಲಿ ಫೇಡ್‌ಔಟ್ ಆದಮೇಲೆ ತಮಿಳಿನಲ್ಲಿ ಸಕ್ಸಸ್ ಸಿಕ್ಕಿತ್ತು. ಸದ್ಯ 5 ತಮಿಳು ಸಿನಿಮಾಗಳು ಈ ಮಿಲ್ಕಿಬ್ಯೂಟಿ ಕೈಯಲ್ಲಿದೆ. ಡಿಸೆಂಬರ್‌ನಲ್ಲಿ ಮದುವೆ ನಡೆಯುವ ಸಾಧ್ಯತೆಯಿದ್ದು, ಮದುವೆ ನಂತರ ಸಿನಿಮಾಗಳಲ್ಲಿ ನಟಿಸ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.

  English summary
  Actress Hansika Motwani to tie the knot in December preparations are underway. know more.
  Monday, October 17, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X