For Quick Alerts
  ALLOW NOTIFICATIONS  
  For Daily Alerts

  'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ': 'ಕಾಂತಾರ' ನೋಡಿ ವಿಡಿಯೋ ಮಾಡಿದ ಕಂಗನಾ!

  |

  ಇನ್ನು ಹತ್ತು ದಿನಗಳಾದರೆ, ಕರ್ನಾಟಕದಲ್ಲಿ 'ಕಾಂತಾರ' ಸಿನಿಮಾ ರಿಲೀಸ್ ಆಗಿ ಒಂದು ತಿಂಗಳಾಗುತ್ತೆ. ಈ 20 ದಿನಗಳಲ್ಲಿಯೇ 'ಕಾಂತಾರ' ದೇಶಾದ್ಯಂತ ಸದ್ದು ಮಾಡುತ್ತಿದೆ. ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷವನ್ನು ತೆರೆಮೇಲೆ ತಂದಿರೋ ರಿಷಬ್ ಶೆಟ್ಟಿಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ.

  ದೇಶಾದ್ಯಂತ 'ಕಾಂತಾರ' ಸಿನಿಮಾ ನೋಡಿದ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಇಂತಹ ಸಿನಿಮಾವನ್ನು ಹಿಂದೆಂದೂ ನೋಡಿಲ್ಲ ಅಂತಿದ್ದಾರೆ. ಇನ್ನೊಂದು ಕಡೆ ಕನ್ನಡ ಅಷ್ಟೇ ಅಲ್ಲ. ಹಿಂದಿ ಹಾಗೂ ತೆಲುಗಿನಲ್ಲೂ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು (ಅಕ್ಟೋಬರ್ 20) ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗಿದೆ.

  ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!ಉಪ್ಪಿಗೂ 'ಕಾಂತಾರ'ದಂತಹ ಸಿನಿಮಾ ಮಾಡೋ ಆಸೆ: ಶೀಘ್ರದಲ್ಲೇ ರಿಷಬ್ ಜೊತೆ ಚರ್ಚೆ!

  'ಕಾಂತಾರ' ಸದ್ದು ಮಾಡುತ್ತಿದ್ದಂತೆ ಬಾಲಿವುಡ್ ನಟಿ ಸಿನಿಮಾ ನೋಡುವುದಾಗಿ ಹೇಳಿದ್ದರು. ಅದರಂತೆಯೇ ಇಂದು (ಅಕ್ಟೋಬರ್ 20) 'ಕಾಂತಾರ' ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸಿದ್ದಾರೆ. ಬಳಿಕ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಈ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಕಾಂತಾರ'ಎಕ್ಸ್‌ಪ್ಲೋಸಿವ್ ಎಕ್ಸ್‌ಪೀರಿಯನ್ಸ್!

  'ಕಾಂತಾರ'ಎಕ್ಸ್‌ಪ್ಲೋಸಿವ್ ಎಕ್ಸ್‌ಪೀರಿಯನ್ಸ್!

  ಕನ್ನಡ ಸಿನಿಮಾ ನೋಡಿ ಮೆಚ್ಚುಕೊಂಡವರಿಗೆ ಲೆಕ್ಕವಿಲ್ಲ. ಬೇರೆ ಬೇರೆ ಭಾಷೆಯ ಸೆಲೆಬ್ರೆಟಿಗಳು 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಕಂಗನಾಗೂ ಕೂಡ ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಸಿನಿಮಾ ನೋಡಿ ವಿಡಿಯೋ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. "ನಾನು ನನ್ನ ಕುಟುಂಬದ ಜೊತೆ ಒಂದು ಸಿನಿಮಾ ನೋಡಿಕೊಂಡು ಬರುತ್ತಿದ್ದೇನೆ. ಅದುವೇ ಕಾಂತಾರ. ನಾನು ಇನ್ನೂ ನಡುಗುತ್ತಿದ್ದೇನೆ. ಇದೊಂದು ಎಕ್ಸ್‌ಪ್ಲೋಸಿವ್ ಎಕ್ಸ್‌ಪೀರಿಯನ್ಸ್. ರಿಷಬ್ ಶೆಟ್ಟಿ ನಿಮಗೊಂದು ಸಲಾಂ. ರಚನೆ, ನಿರ್ದೇಶನ, ನಟನೆ, ಆಕ್ಷನ್ ಎಲ್ಲವೂ ಅದ್ಭುತ. ನಂಬೋಕೆ ಆಗುತ್ತಿಲ್ಲ." ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ.

  'ನೋ ವೇ ಚಾನ್ಸೇ ಇಲ್ಲ' ಎಂದ ರಿಷಬ್ ಶೆಟ್ಟಿ: 'ಪ್ರಶಾಂತ್ ನೀಲ್ ತರ ಅಲ್ಲ ಬಿಡು ಗುರು' ಎಂದ ನೆಟ್ಟಿಗರು!'ನೋ ವೇ ಚಾನ್ಸೇ ಇಲ್ಲ' ಎಂದ ರಿಷಬ್ ಶೆಟ್ಟಿ: 'ಪ್ರಶಾಂತ್ ನೀಲ್ ತರ ಅಲ್ಲ ಬಿಡು ಗುರು' ಎಂದ ನೆಟ್ಟಿಗರು!

  ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಅದ್ಭುತ

  ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಅದ್ಭುತ

  " ಇದನ್ನು ಸಿನಿಮಾ ಎನ್ನುತ್ತಾರೆ. ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುವುದಂತೂ ಅದ್ಭುತ. ಸಿನಿಮಾ ನೋಡಿಕೊಂಡು ಥಿಯೇಟರ್‌ನಿಂದ ಹೊರ ಹೋಗುತ್ತಿದ್ದ ಸಾಕಷ್ಟು ಜನರನ್ನು ಮಾತಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ. ಅವರು ಹಿಂದೆಂದೂ ಇಂತಹದ್ದೊಂದು ಸಿನಿಮಾವನ್ನು ನೋಡಿಲ್ಲ ಎನ್ನುತ್ತಿದ್ದರು. ಇಂತಹದ್ದೊಂದು ಸಿನಿಮಾ ನೀಡಿದ್ದಕ್ಕೆ ಧನ್ಯವಾದಗಳು. ಇದು ನಿಜಕ್ಕೂ ಅದ್ಭುತ." ಎಂದು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

  'ಒಂದು ವಾರ ಈ ಗುಂಗಿನಿಂದ ಹೊರಬರಲ್ಲ'

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ಬಾಲಿವುಡ್ ನಟಿ ಕಂಗನಾಗೆ ತುಂಬಾನೇ ಇಷ್ಟ ಆಗಿದೆ. ಸಿನಿಮಾ ಥ್ರಿಲ್ ಆಗಿರೋ ಕಂಗಾನಾ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಬಾಲಿವುಡ್ ಸಿನಿಮಾಗಳ ವಿರುದ್ಧ ತಿರುಗಿಬೀಳುವ ನಟಿ ಮತ್ತೊಂದು ದಕ್ಷಿಣ ಭಾರತವನ್ನು ಇಷ್ಟಪಟ್ಟಿದ್ದಾರೆ. ಕಂಗನಾ ಹಂಚಿಕೊಂಡ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಈ ವಿಡಿಯೋ ರಿ-ಟ್ವೀಟ್ ಮಾಡಿದೆ. ಇದೇ ವಿಡಿಯೋದಲ್ಲಿ " ನಾನು ಈ ಸಿನಿಮಾ ನೋಡಿದ ಬಳಿಕ ಇನ್ನೊಂದು ವಾರ ಇದರಿಂದ ಹೊರಬರುವುದಿಲ್ಲ ಅಂತ ಅನಿಸುತ್ತಿದೆ. ವ್ಹಾವ್.." ಎಂದು ಥ್ರಿಲ್ ಆಗಿದ್ದಾರೆ ನಟಿ ಕಂಗನಾ.

  20 ದಿನಗಳಲ್ಲಿ 'ಕಾಂತಾರ' ಗಳಿಸಿದ್ದೆಷ್ಟು?

  20 ದಿನಗಳಲ್ಲಿ 'ಕಾಂತಾರ' ಗಳಿಸಿದ್ದೆಷ್ಟು?

  20 ದಿನಗಳಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಭರ್ಜರಿ ಕಲೆಕ್ಷನ್ ಹೊಸ ದಾಖಲೆಯನ್ನು ಬರೆಯುವ ಹಾಗಿದೆ. ಈಗಾಗಲೇ ಸುಮಾರು 171 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಹೀಗೆ ಮುಂದುವರೆದರೆ 'ಕಾಂತಾರ' ಸಿನಿಮಾ 'ಕೆಜಿಎಫ್ ಚಾಪ್ಟರ್ 1' ದಾಖಲೆಯನ್ನು ಉಡೀಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. 'ಕೆಜಿಎಫ್ 1' ಸುಮಾರು 240 ಕೋಟಿ ರೂ. ಕಲೆಹಾಕಿತ್ತು. ಈ ದಾಖಲೆಯನ್ನು ಮುರಿಯಬಹುದು ಎಂದು ಭವಿಷ್ಯ ನುಡಿಯಲಾಗುತ್ತಿದೆ.

  English summary
  Actress Kangana Ranaut Watched Rishab Shetty Starrer Kantara And Reviewed, Know More.
  Thursday, October 20, 2022, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X