ಕೃತಿ ಕರಬಂಧಗೆ ಮಲೇರಿಯಾ: ಮುಖವೇ ಬದಲಾಗಿಬಿಟ್ಟಿದೆ!

ಕೊರೊನಾ ತಾಂಡವವಾಡುತ್ತಿರುವ ಈ ಸಮಯದಲ್ಲಿ ನಟಿ ಕೃತಿ ಕರಬಂಧಗೆ ಮಲೆರಿಯಾ ವಕ್ಕರಿಸಿಕೊಂಡಿದೆ.

ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ, ಹಾಗೂ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಕೃತಿ ಕರಬಂಧ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಮಲೇರಿಯಾ ಇರುವುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃತಿ ಕರಬಂಧಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕೃತಿ ಕರಬಂಧಾ ತಮ್ಮ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, 'ಇದು ನನ್ನ ಮಲೆರಿಯಾ ಪೀಡಿತ ಮುಖ' ಎಂದು ತಮ್ಮನ್ನು ತಾವು ತಮಾಷೆ ಮಾಡಿಕೊಂಡಿದ್ದಾರೆ. ಚಿತ್ರ ನೋಡಿದ ನೆಟ್ಟಿಗರು ನಿಮ್ಮ ಮುಖ ಸಾಕಷ್ಟು ಬದಲಾಗಿದೆ ಎನ್ನುತ್ತಿದ್ದಾರೆ.

'ಚೇತರಿಸಿಕೊಂಡಿದ್ದೇನೆ, ನಾಳೆ ಇನ್ನಷ್ಟು ಚೇತರಿಸಿಕೊಳ್ಳುತ್ತೇನೆ'

'ಚೇತರಿಸಿಕೊಂಡಿದ್ದೇನೆ, ನಾಳೆ ಇನ್ನಷ್ಟು ಚೇತರಿಸಿಕೊಳ್ಳುತ್ತೇನೆ'

ಇಂದು ನಾನು ಸಾಕಷ್ಟು ಚೇತರಿಕೆಯಿಂದಿದ್ದೇನೆ. ನಾಳೆ ಇನ್ನಷ್ಟು ಚೇತರಿಸಿಕೊಳ್ಳಲಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದಿನೇ-ದಿನೇ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಕೃತಿ ಕರಬಂಧ.

2020 ಸಾಕಷ್ಟು ತಾಳ್ಮೆ ಕಲಿಸಿದೆ

2020 ಸಾಕಷ್ಟು ತಾಳ್ಮೆ ಕಲಿಸಿದೆ

ಆಸ್ಪತ್ರೆಯಲ್ಲಿ ಇರಲು ಬೇಸರವಾಗುತ್ತಿದೆ. ಆದರೆ ಪರವಾಗಿಲ್ಲ, ಈ 2020 ನೇ ವರ್ಷ ಸಾಕಷ್ಟು ತಾಳ್ಮೆ ಕಲಿಸಿದೆ. ಆರೋಗ್ಯ ಪೂರ್ಣ ಚೇತರಿಕೆ ಆಗುವವರೆಗೂ ಇಲ್ಲಿಯೇ ಇರುತ್ತೇನೆ. ಕೆಲಸಕ್ಕೆ ಮರಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಕೃತಿ ಕರಬಂಧ.

ಬೋರ್ ಆಗುತ್ತಿದೆ ಮೀಮ್ ಕಳಿಸಿ ಎಂದ ನಟಿ

ಬೋರ್ ಆಗುತ್ತಿದೆ ಮೀಮ್ ಕಳಿಸಿ ಎಂದ ನಟಿ

ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತೇನೆ ಎಂದಿರುವ ನಟಿ ಕೃತಿ, ಆಸ್ಪತ್ರೆಯಲ್ಲಿ ಸಖತ್ ಬೋರಾಗುತ್ತಿದೆ. ತಮಾಷೆಯ ಮೀಮ್‌ಗಳನ್ನು, ಜೋಕ್‌ಗಳನ್ನು ಕಳಿಸಿ ಎಂದು ಮನವಿ ಮಾಡಿದ್ದಾರೆ. ಅಂತೆಯೇ ನೆಟ್ಟಿಗರು ಹಲವಾರು ಮೀಮ್‌ಗಳನ್ನು ಕಮೆಂಟ್ ಮಾಡಿದ್ದಾರೆ.

ಕನ್ನಡದಲ್ಲಿ 10 ಸಿನಿಮಾಗಳಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ 10 ಸಿನಿಮಾಗಳಲ್ಲಿ ನಟಿಸಿದ್ದಾರೆ

ನಟಿ ಕೃತಿ ಕರಬಂಧ ಅವರು ಉಪೇಂದ್ರ, ಯಶ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಸೇರಿ ಹಲವು ನಟರೊಂದಿಗೆ ಕನ್ನಡದಲ್ಲಿ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿಯಲ್ಲೂ ನಟಿಸಿರುವ ಕೃತಿ, ಇತ್ತೀಚೆಗೆ ಒಟಿಟಿಗಳಿಗಾಗಿ ವೆಬ್ ಸರಣಿಯಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Actress Kriti Kharabanda Diagnosed with Malaria. She posted a photo of herself, netizen saying face changed a bit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X