For Quick Alerts
  ALLOW NOTIFICATIONS  
  For Daily Alerts

  Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಕಾರು ಅಪಘಾತ: FIR ದಾಖಲು

  |

  ಬಾಲಿವುಡ್ ಎವರ್‌ಗ್ರೀನ್ ಬ್ಯೂಟಿ ಮಲೈಕಾ ಅರೋರಾ ಕಾರು ಅಪಘಾತವಾಗಿತ್ತು. ಶನಿವಾರ (ಏಪ್ರಿಲ್ 2) ಮಧ್ಯಾಹ್ನದ ವೇಳೆಗೆ ಪೂನಾದಿಂದ ಹಿಂತಿರುಗುವಾಗ ರಸ್ತೆ ಹೈವೇನಲ್ಲಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ಸಂಬಂಧ ನಟಯನ್ನು ಮುಂಬೈನಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  ಮುಂಬೈ-ಪೂನಾ ಹೈವೇನಲ್ಲಿ ಮಲೈಕಾ ಅರೋರಾ ಕಾರು ಅಪಘಾತ ಸಂಭವಿಸಿತ್ತು. ಈ ವೇಳೆ ಮಲೈಕಾಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ಮಲೈಕಾ ಅರೋರಾ ಪೂನಾದಿಂದ ಹಿಂತಿರುಗುತ್ತಿದ್ದ ವೇಳೆ ಖಾಲಾಪುರ್ ಟೋಲ್ ಪ್ಲಾಜಾ ಬಳಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಲೈಕಾ ಹಣೆಗೆ ಪೆಟ್ಟಾಗಿತ್ತು. ಹೀಗಾಗಿ ಮುಂಬೈನ ಅಪೋಲೊ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.

  ಮಲೈಕಾ ಅರೋರಾ, ಅರ್ಜುನ್ ಕಪೂರ್ ಪ್ರೇಮಿಗಳ ದಿನ ಸ್ಪೆಷಲ್ ಸೆಲೆಬ್ರೆಷನ್!ಮಲೈಕಾ ಅರೋರಾ, ಅರ್ಜುನ್ ಕಪೂರ್ ಪ್ರೇಮಿಗಳ ದಿನ ಸ್ಪೆಷಲ್ ಸೆಲೆಬ್ರೆಷನ್!

  ಮಲೈಕಾ ಅರೋರಾಗೆ ಚಿಕಿತ್ಸೆ

  ಮಲೈಕಾ ಅರೋರಾಗೆ ಚಿಕಿತ್ಸೆ

  ಮಲೈಕಾ ಅರೋರಾ ಕಾರು ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ನಟಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಿದ್ದಾರೆ. ತಲೆ ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದ್ದರಿಂದ ನಟಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಇದರಲ್ಲಿ ಯಾವುದೇ ಸಮಸ್ಯೆ ಇರುವುದು ಕಂಡು ಬಂದಿಲ್ಲ. ಒಂದು ರಾತ್ರಿ ನಟಿ ಮೇಲೆ ನಿಗಾ ಇಟ್ಟಿದ್ದು, ಇಂದು ಬೆಳಗ್ಗೆ ಆಸ್ಪತ್ರೆಯಿಂದ ನಟಿಯನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ.

  ಮಲೈಕಾ ಬಗ್ಗೆ ವೈದ್ಯರು ಹೇಳಿದ್ದೇನು?

  ಮಲೈಕಾ ಬಗ್ಗೆ ವೈದ್ಯರು ಹೇಳಿದ್ದೇನು?

  ಮಲೈಕಾ ಅರೋರಾ ಕಾರು ಅಪಘಾತವಾದ ಸುದ್ದಿ ಹಬ್ಬುತ್ತಿದ್ದಂತೆ ಆಕೆಯ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಆಸ್ಪತ್ರೆ ವೈದ್ಯರು ನಟಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದರು. " ಮಲೈಕಾ ಅರೋರಾ ಮುಂಬೈ ಪೂನಾ ಹೈವೇನಲ್ಲಿ ಅಪಘಾತಕ್ಕೆ ಸಿಲುಕಿದ್ದರು. ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಲೈಕಾ ಅರೋರಾಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ರಾತ್ರಿ ಅವರ ಮೇಲೆ ನಿಗಾ ಇಡಲಾಗಿದ್ದು, ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗುತ್ತೆ" ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದರು.

  FIR ದಾಖಲು, ತನಿಖೆ ಆರಂಭ

  FIR ದಾಖಲು, ತನಿಖೆ ಆರಂಭ

  ಸ್ಥಳೀಯ ಪೊಲೀಸರು ಮಲೈಕಾ ಕಾರು ಅಪಘಾತ ಸಂಬಂಧ FIR ದಾಖಲಿಸಿ, ತನಿಖೆಯನ್ನು ಆರಂಭಿಸಿದ್ದಾರೆ. " ಮುಂಬೈ-ಪೂನಾ ಎಕ್ಸ್‌ಪ್ರೆಸ್ ಹೈವೇಯಿಂದ 38 ಕಿ.ಮಿ ಅಂತರದಲ್ಲಿ ಈ ಅಪಘಾತ ಸಂಭವಿಸಿತ್ತು. ಈ ಪ್ರದೇಶದಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತವೆ. ಮೂರು ವಾಹನಗಳು ಅಪಘಾತದಲ್ಲಿ ಸಿಲುಕಿದ್ದು, ಮೂರು ಕಾರುಗಳು ಕೂಡ ಡ್ಯಾಮೇಜ್ ಆಗಿವೆ. ಮೂರು ವಾಹನದಲ್ಲಿರುವವರನ್ನು ಶೀಘ್ರದಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಆಗಿರುವ ಪೆಟ್ಟುಗಳ ಬಗ್ಗೆ ಮಾಹಿತಿ ಇಲ್ಲ. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ನಮಗೆ ಮಾಹಿತಿ ಸಿಕ್ಕಿದ್ದು, ತನಿಖೆಯನ್ನುಆರಂಭಿಸಿದ್ದೇವೆ." ಎಂದು ಪೊಲೀಸರು ತಿಳಿಸಿದ್ದಾರೆ.

  ಸಹೋದರಿ ಅಮೃತಾ ಹೇಳಿದ್ದೇನು?

  ಸಹೋದರಿ ಅಮೃತಾ ಹೇಳಿದ್ದೇನು?

  ಮಲೈಕಾ ಅರೋರಾ ಅಪಘಾತದ ಬಳಿಕ ಸಹೋದರಿ ಅಮೃತಾ ಅರೋರಾ ಪ್ರತಿಕ್ರಿಯಿಸಿದ್ದಾರೆ. " ಮಲೈಕಾ ಈಗ ಆರಾಮಾಗುತ್ತಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಅವರ ಮೇಲೆ ವೈದ್ಯರು ನಿಗಾ ಇಡಲಿದ್ದಾರೆ." ಎಂದು ಅಮೃತಾ ಅರೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಮೃತಾ ಪ್ರಕಾರ ಮಲೈಕಾ ಅರೋರಾರನ್ನು ಭಾನುವಾರ(ಏಪ್ರಿಲ್ 03) ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

  English summary
  Actress Malaika Arora discharged after suffered car accident FIR Registered. Here is the more details.
  Sunday, April 3, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X