For Quick Alerts
  ALLOW NOTIFICATIONS  
  For Daily Alerts

  ಅನುಮತಿ ಇಲ್ಲದೆ ಚಿತ್ರ ಬಳಕೆ: ಡೇಟಿಂಗ್ ಆಪ್ ವಿರುದ್ಧ ದೂರು ನೀಡಿದ ನಟಿ

  |

  ಅನುಮತಿ ಇಲ್ಲದೆ ತಮ್ಮ ಚಿತ್ರವನ್ನು ಬಳಸಿದ ಡೇಟಿಂಗ್ ಆಪ್ ವಿರುದ್ಧ ನಟಿ, ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ದೂರು ನೀಡಿದ್ದಾರೆ.

  ಬಂಗಾಳಿ ಸಿನಿಮಾ ನಟಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಸಂಸದೆ ಸಹ ಆಗಿರುವ ನುಸ್ರತ್ ಜಹಾನ್ ಅವರ ಚಿತ್ರವನ್ನು ಡೇಟಿಂಗ್ ಆಪ್ ಒಂದು ಬಳಸಿದೆ. ತಮ್ಮ ಅನುಮತಿ ಇಲ್ಲದೆ ಚಿತ್ರ ಬಳಸಿರುವುದಕ್ಕೆ ನುಸ್ರತ್ ಜಹಾನ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಫ್ಯಾನ್ಸಿ ವಿಡಿಯೋ ಎಂಬ ಡೇಟಿಂಗ್ ಆಪ್ ಒಂದು ನುಸ್ರತ್ ಜಹಾನ್ ಅವರ ಚಿತ್ರವನ್ನು ತನ್ನ ಜಾಹೀರಾತಿನಲ್ಲಿ ಬಳಿಸಿಕೊಂಡಿದೆ. 'ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕೂತು ಗೆಳೆಯರನ್ನು ಮಾಡಿಕೊಂಡಿ' ಎಂಬ ಟ್ಯಾಗ್‌ಲೈನ್ ಹಾಕಿ ನುಸ್ರತ್ ಜಹಾನ್ ಅವರ ಚಿತ್ರವನ್ನು ಜಾಹೀರಾತಿನಲ್ಲಿ ಹಾಕಲಾಗಿದೆ.

  RCB ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ Duniya Vijay | Filmibeat Kannada

  ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ನಟಿ ನುಸ್ರತ್ ಜಹಾನ್, 'ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅನುಮತಿ ಇಲ್ಲದೆ ಚಿತ್ರ ಬಳಿಸಿಕೊಂಡಿರುವವರ ವಿರುದ್ಧ ಕೊಲ್ಕತ್ತ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದೇನೆ. ಇದನ್ನು ಕಾನೂನಾತ್ಮಕವಾಗಿ ಎದುರಿಸಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  English summary
  Actress and TMC MP Nusrat Jahan gave complaint against a dating app for using her photo without conset.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X