For Quick Alerts
  ALLOW NOTIFICATIONS  
  For Daily Alerts

  'ಆ ಪಾತ್ರ ನನ್ನಿಂದ ಮಾಡಲು ಆಗೊಲ್ಲ' ಎಂದು ಬಾಲಿವುಡ್ ಸಿನಿಮಾ ತಿರಸ್ಕರಿಸಿದ್ದ ರಶ್ಮಿಕಾ ಮಂದಣ್ಣ

  |

  ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಹರಿದಾಡಿತ್ತು. ತೆಲುಗಿನ ಹಿಟ್ ಸಿನಿಮಾ ಜೆರ್ಸಿಯ ಹಿಂದಿ ರೀಮೇಕ್‌ನ ಮುಖ್ಯ ಪಾತ್ರದಲ್ಲಿ ರಶ್ಮಿಕಾ ನಟಿಸುವುದು ಖಚಿತವಾಗಿತ್ತು. ಈ ಸಿನಿಮಾಕ್ಕಾಗಿ ರಶ್ಮಿಕಾ ತೆಲುಗು, ತಮಿಳು, ಕನ್ನಡ ಸೇರಿದಂತೆ ದಕ್ಷಿಣದ ಅನೇಕ ಪ್ರಮುಖ ಚಿತ್ರಗಳ ಆಫರ್‌ಗಳನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿತ್ತು.

  ಆದರೆ ಹಿಂದಿ ರೀಮೇಕ್ ಮಾಡುತ್ತಿರುವ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಕಲಾವಿದರು ಹಾಗೂ ತಂತ್ರಜ್ಞರ ಹೆಸರನ್ನು ಬಹಿರಂಗಪಡಿಸಿದ್ದು, ಅದರಲ್ಲಿ ರಶ್ಮಿಕಾ ಅವರ ಹೆಸರು ಇರಲಿಲ್ಲ. ಇದಕ್ಕೆ ಕಾರಣವನ್ನು ರಶ್ಮಿಕಾ ಅವರೇ ನೀಡಿದ್ದಾರೆ. ರಶ್ಮಿಕಾ ಅವರನ್ನು ಚಿತ್ರತಂಡ ಕೈಬಿಟ್ಟಿಲ್ಲ, ಬದಲಾಗಿ ಅವರೇ ಸಿನಿಮಾದಿಂದ ಹೊರನಡೆದಿದ್ದಾರೆ. ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ್ದ ಆ ಪಾತ್ರಕ್ಕೆ ತಮ್ಮಿಂದ ನ್ಯಾಯ ಒದಗಿಸಲು ಕಷ್ಟ ಎಂದು ರಶ್ಮಿಕಾಗೆ ಅನಿಸಿದೆಯಂತೆ. ಇದು ಕಷ್ಟಕರ ಪಾತ್ರ ಎಂದು ಅವರು ಹಿಂದೆ ಸರಿದಿದ್ದಾಗಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  'ಆಚಾರ್ಯ'ದಲ್ಲಿ ರಾಮ್ ಚರಣ್ ಜತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?

  ನ್ಯಾಯ ಸಲ್ಲಿಸಲಾಗದು

  ನ್ಯಾಯ ಸಲ್ಲಿಸಲಾಗದು

  'ಜೆರ್ಸಿಯಂತಹ ಸಿನಿಮಾದಲ್ಲಿ ನಟಿಸುವುದನ್ನು ಕಲ್ಪಿಸಿಕೊಳ್ಳಿ. ಅದಕ್ಕೆ ತಕ್ಕ ನ್ಯಾಯ ಸಲ್ಲಿಸುವುದು ನನಗೆ ಸಾಧ್ಯವಾಗುವುದಿಲ್ಲ' ಎಂದು ರಶ್ಮಿಕಾ ಮಂದಣ್ಣ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರು ಇನ್ನಷ್ಟು ನಟನಾ ಸಾಮರ್ಥ್ಯವುಳ್ಳ ನಟಿಯನ್ನು ಬಳಸಿಕೊಳ್ಳಬೇಕಿತ್ತು ಎಂದು ಅವರು ಹಿಂದಡಿ ಇರಿಸಿದ್ದಾರೆ.

  ಬೇರೆ ಯಾರಾದರೂ ಮಾಡಬಹುದು

  ಬೇರೆ ಯಾರಾದರೂ ಮಾಡಬಹುದು

  'ನನ್ನಿಂದ ಅತ್ಯುತ್ತಮವಾದುದ್ದನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಎನಿಸುವ ಯಾವುದೇ ಸಿನಿಮಾವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಜೆರ್ಸಿ ರೀಮೇಕ್ ಬಹಳ ದೊಡ್ಡದು. ಅದನ್ನು ಬೇರೆ ಯಾರಾದರೂ ಮಾಡಬಹುದು. ಆದರೆ ನಾನು ಸೆಟ್‌ಗೆ ಹೋಗಿ ಎಲ್ಲರಿಗೂ ಕಷ್ಟ ಕೊಡಲು ಬಯಸಿರಲಿಲ್ಲ' ಎಂದು ರಶ್ಮಿಕಾ ತಿಳಿಸಿದ್ದಾರೆ.

  ರಶ್ಮಿಕಾ ಮಂದಣ್ಣ ಕೊಟ್ಟಿದ್ದಾರೆ ಒಳ್ಳೆಯ ಸಿನಿಮಾ ಆಫರ್

  ಸವಾಲಿನ ಪಾತ್ರ ಆಗೊಲ್ಲ

  ಸವಾಲಿನ ಪಾತ್ರ ಆಗೊಲ್ಲ

  ಕನ್ನಡದಲ್ಲಿ ನಟಿಸಿ, ತೆಲುಗಿನಲ್ಲಿ ದೊಡ್ಡ ಸ್ಟಾರ್‌ಗಳ ಜತೆಗೂ ಸೈ ಎನಿಸಿಕೊಂಡ ರಶ್ಮಿಕಾ, ಪಾತ್ರವೊಂದನ್ನು ತಮ್ಮಿಂದ ನಿಭಾಯಿಸಲಾಗುವುದಿಲ್ಲ ಎಂದು ಸೋಲೊಪ್ಪಿಕೊಂಡಿರುವುದು ವಿಶೇಷ. ಹಾಗೆಯೇ ಪಾತ್ರವು ಬಯಸುವ ಎನರ್ಜಿಯನ್ನೂ ಅವರು ಗ್ರಹಿಸಿ ಮುಂಚೆಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

  ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್

  ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್

  ಈ ಚಿತ್ರದ ಫಿಲ್ಮ್ ಮೇಕರ್ ಇನ್ನೂ ಉತ್ತಮ ನಟಿಯನ್ನು ಆಯ್ಕೆ ಮಾಡುವುದು ಸೂಕ್ತ. ಆ ಪಾತ್ರಕ್ಕೆ ಎನರ್ಜಿಯನ್ನು ನೀಡುವಂತಹ ನಟಿ ಬೇಕು ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ಗೌತಮ್ ತಿನ್ನನುರಿ ನಿರ್ದೇಶನದ ಜೆರ್ಸಿ ರೀಮೇಕ್‌ನಲ್ಲಿ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಕ್ರೀಡಾ ಕಥಾಹಂದರದ ಜೆರ್ಸಿ

  ಕ್ರೀಡಾ ಕಥಾಹಂದರದ ಜೆರ್ಸಿ

  2019ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ ಜೆರ್ಸಿ ಕ್ರೀಡಾ ಕಥಾಹಂದರವನ್ನು ಒಳಗೊಂಡಿತ್ತು. ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 30ನೇ ವಯಸ್ಸು ದಾಟಿದ ಬಳಿಕ ಅರ್ಜುನ್ ಎಂಬ ಕ್ರಿಕೆಟಿಗ ಭಾರತ ತಂಡವನ್ನು ಪ್ರತಿನಿಧಿಸುವುದು ಈ ಚಿತ್ರದ ಕಥಾವಸ್ತು.

  English summary
  Actress Rashmika Mandanna on rejecting Hindi remake of Telugu movie Jersey, I can't pull off that role, the makers deserve more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X