For Quick Alerts
  ALLOW NOTIFICATIONS  
  For Daily Alerts

  'ಪ್ಲೇಬಾಯ್' ಮುಖಪುಟ ಅಲಂಕರಿಸಿದ ಶೆರ್ಲಿನ್

  By Rajendra
  |

  ಈಕೆ ಮಾದಕ ತಾರೆ ಅಲ್ಲದಿದ್ದರೂ ತಮ್ಮ ಹಸಿಬಿಸಿ ಫೋಟೋಗಳ ಮೂಲಕ ಆಗಾಗ ಪಡ್ಡೆಗಳ ನಿದ್ದೆಗೆ ಸಂಚಕಾರ ತರುತ್ತಿರುತ್ತಾರೆ. ಅದರಲ್ಲೂ ಹಾಟ್ ಬೆಡಗಿಯರಾದ ಪೂನಂ ಪಾಂಡೆ ಹಾಗೂ ವೀಣಾ ಮಲಿಕ್ ಪ್ರವರ್ಧಮಾನಕ್ಕೆ ಬಂದ ಮೇಲಂತೂ ಈಕೆಯನ್ನೂ ಮೂಸಿ ನೋಡುವವರೇ ಇಲ್ಲದಂತಾಗಿತ್ತು.

  ಈಗ ಇದ್ದಕ್ಕಿದ್ದಂತೆ ಈಕೆ ಮೈಮೇಲೆ ರತಿಮನ್ಮಥರನ್ನು ಆವಾಹಿಸಿಕೊಂಡಂತೆ ಆಡುತ್ತಿದ್ದಾರೆ ಶೆರ್ಲಿನ್ ಚೋಪ್ರಾ. ಅಂತಾರಾಷ್ಟ್ರೀಯ ಪುರುಷರ ನಿಯತಕಾಲಿಕೆ ಪ್ಲೇಬಾಯ್ ಗೆ ಹುಟ್ಟುಡುಗೆಯ ತಮ್ಮ ಡಿಂಗ್ ಡಾಂಗ್ ಫೋಟೋಗಳನ್ನು ನೀಡುವ ಮೂಲಕ ಮತ್ತೊಮ್ಮೆ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ.

  ಇದುವರೆಗೂ ಬಹಳಷ್ಟು ಬಾಲಿವುಡ್ ತಾರೆಗಳು ಪ್ಲೇಬಾಯ್ ಮುಖಪುಟ ಅಲಂಕರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಶೆರ್ಲಿನ್ ವಿಶೇಷ ಎಂದರೆ ಪ್ಲೇಬಾಯ್ ಮುಖಪುಟ ಅಲಂಕರಿಸುತ್ತಿರುವ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವುದು.

  ಪ್ಲೇಬಾಯ್ ನಿಯತಕಾಲಿಕೆಯಲ್ಲಿ ತಮ್ಮ ದೇಹ ಸೌಂದರ್ವವನ್ನು ಪ್ರದರ್ಶಿಸಬೇಕು ಎಂದು ಬಹಳಷ್ಟು ಮಂದಿ ಮಹಿಳೆಯರು ಕನಸು ಕಾಣುತ್ತಲೇ ಇದ್ದಾರೆ. ಆದರೆ ಎಲ್ಲರ ಕನಸು ನೆರವೇರಲ್ಲ. ಬಟ್ಟೆ ಬಿಚ್ಚುವವರನ್ನೆಲ್ಲಾ ಪ್ಲೇಬಾಯ್ ಪ್ರದರ್ಶಿಸುವುದೂ ಇಲ್ಲ.

  ಇದುವರೆಗೂ ತನ್ನನ್ನು ತಾನು ಪ್ಲೇಬಾಯ್ ಗರ್ಲ್ ಎಂದೇ ಶೆರ್ಲಿನ್ ಬಿಂಬಿಸಿಕೊಂಡಿದ್ದರು. ಈಗಾಕೆ ಲಾಸ್ ಏಂಜಲೀಸ್ ನಲ್ಲಿದ್ದು ಪ್ಲೇಬಾಯ್ ಸಂಚಿಕೆಗಾಗಿ ತಮ್ಮ ದೇಹ ಸೌಂದರ್ಯವನ್ನು ಪ್ರದರ್ಶಿಸಲಿದ್ದಾರೆ. ಶೆರ್ಲಿನ್ ಇದುವರೆಗೂ ನೀಡದ ಭಂಗಿಯಲ್ಲಿ ಈ ಬಾರಿಯ ಫೋಟೋ ಇರುತ್ತದಂತೆ.

  ಈ ಹಿಂದೊಮ್ಮೆ ಶೆರ್ಲಿನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮದೇ ಆದ ನಗ್ನ ಫೋಟೋವನ್ನು ತೇಲಿಬಿಟ್ಟಿದ್ದರು. ನನ್ನ ಸಂಗ್ರಹಲ್ಲಿದ್ದ ಫೋಟೋವನ್ನು ಗೆಳೆಯರು ಹಾಗೂ ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿದ್ದೇನೆ ಎಂದಿದ್ದರು ಶೆರ್ಲಿನ್.

  ಅಂದಹಾಗೆ ಈಕೆ ಬಾಲಿವುಡ್ ನಲ್ಲಿ ಅಭಿನಯಿಸಿತ್ತು ಮೂರು ಮತ್ತೊಂದು ಚಿತ್ರದಲ್ಲಿ ಅಷ್ಟೆ. ಆದರೆ ಈಕೆ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಸೌಂಡ್ ಮಾಡಲೇ ಇಲ್ಲ. ಆಗಾಗ ಈ ರೀತಿಯ ಫೋಟೋಗಳನ್ನು ಬಿತ್ತರಿಸುತ್ತಾ ಸುದ್ದಿಗೆ ಗ್ರಾಸವಾಗುತ್ತಿರುತ್ತಾರೆ. (ಏಜೆನ್ಸೀಸ್)

  English summary
  Bollywood actress Sherlyn Chopra is featuring in the international men’s magazine Playboy. Many of Indian actresses tried to get there but didn’t dare to. There are many who are dreaming to become Playboy girls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X