For Quick Alerts
  ALLOW NOTIFICATIONS  
  For Daily Alerts

  ಸೂಪರ್ ವುಮೆನ್‌ ಆಗಿ ಮತ್ತೆ ಸಾಮಾಜಿಕ ಮಾಧ್ಯಮಕ್ಕೆ ಲಗ್ಗೆ ಇಟ್ಟ ನಟಿ ಶಿಲ್ಪಾ ಶೆಟ್ಟಿ

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗಷ್ಟೇ ತಾವು ಸಾಮಾಜಿಕ ಮಾಧ್ಯಮವನ್ನು ಬಳಕೆ ಮಾಡಲ್ಲ. ಅದರಿಂದ ದೂರ ಇರುತ್ತೇನೆ ಎಂದು ಹೇಳಿದ್ದರು. ಅಲ್ಲದೆ ಮತ್ತೆ ಜಾಲತಾಣಕ್ಕೆ ಬರುವುದಾದರೆ ಹೊಸ ಅವತಾರದಲ್ಲೇ ಬರುತ್ತೇನೆ ಎಂದು ಹೇಳಿದ್ದರು. ಈಗ ಹೇಳಿದಂತೆ ಹೊಸ ಅವತಾರದಲ್ಲಿ ಮತ್ತೆ ಸಾಮಾಜಿಕ ಮಾಧ್ಯಮಕ್ಕೆ ಪುನರಾಗಮನ ಮಾಡಿದ್ದಾರೆ.

  ಹೌದು ಕೆಲವು ದಿನಗಳ ಹಿಂದೆ ನಟಿ ಶಿಲ್ಪಾಶೆಟ್ಟಿ ಸೋಶಿಯಲ್ ಮೀಡಿಯಾದಿಂದ ದೂರ ಇದ್ದರು. ಸೋಶಿಯಲ್ ಮೀಡಿಯಾದಿಂದ ದೂರ ಇರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದರು. ಏಕಾತಾನತೆಯಿಂದ ಬೇಜಾರಾಗಿದೆ. ಇಲ್ಲಿ ಎಲ್ಲವೂ ಒಂದೇ ರೀತಿ ಕಾಣುತ್ತದೆ. ಹೀಗಾಗಿ ಈ ಜಾಲತಾಣದಲ್ಲಿ ದೂರ ಇರುವುದಾಗಿ ತಿಳಿಸಿದ್ದು, ಮತ್ತೆ ಬರುವುದಾದರೆ ಹೊಸ ಅವತಾರದಲ್ಲಿ ಬರುವುದಾಗಿ ಹೇಳಿದ್ದರು. ಈಗ ಹೊಸ ಅವತಾತರದಲ್ಲಿ ಮತ್ತೆ ಇನ್‌ಸ್ಟಾಗ್ರಾಂಗೆ ಮರಳಿದ್ದು, ಅಭಿಮಾನಿಗಳು ಶಿಲ್ಪಾಶೆಟ್ಟಿ ಹೊಸ ಅವತಾರ ಕಂಡು ಬೆರಗಾಗಿದ್ದಾರೆ.

  ಇನ್ಸ್‌ಟಾಗ್ರಾಂ, ಟ್ವೀಟರ್‌ ಗೆ ಗುಡ್ ಬೈ ಹೇಳಿದ ನಟಿ ಶಿಲ್ಪಾ ಶೆಟ್ಟಿ, ಕಾರಣ ಏನು ಗೊತ್ತಾ?ಇನ್ಸ್‌ಟಾಗ್ರಾಂ, ಟ್ವೀಟರ್‌ ಗೆ ಗುಡ್ ಬೈ ಹೇಳಿದ ನಟಿ ಶಿಲ್ಪಾ ಶೆಟ್ಟಿ, ಕಾರಣ ಏನು ಗೊತ್ತಾ?

  ಶಿಲ್ಪಾ ಶೆಟ್ಟಿಯ ಮುಂಬರುವ ಚಿತ್ರ 'ನಿಕಮ್ಮ' ಟೀಸರ್‌ ಇಂದು (ಮೇ 17) ರಿಲೀಸ್ ಆಗಿದೆ. ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ ಹೊಸ ಗೆಪಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸೀನ್‌ನಲ್ಲಿ ದೇವಿಯ ದೃಶ್ಯದಲ್ಲಿ ಕಾಣಿಸಿಕೊಂಡರೆ. ಮತ್ತೊಂದರಲ್ಲಿ ಸೂಪರ್‌ ವುಮೆನ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಅವ್ನಿ ಎಂದು ಹೇಳಿದ್ದಾರೆ. ಸದ್ಯ ವಿಭಿನ್ನ ಗೆಟಪ್‌ ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು ಟ್ರೈಲರ್‌ನ ಪೋಸ್ಟರ್‌ ಹಾಗೂ ಟ್ರೈಲರ್ ಲಿಂಕ್‌ ಅನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಶಬ್ಬೀರ್ ಖಾನ್ ನಿರ್ದೇಶನದ 'ನಿಕಮ್ಮ' ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮಾತ್ರವಲ್ಲದೆ ಪ್ರಮುಖ ಪಾತ್ರಗಳಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಕೂಡ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಟ್ರೈಲರ್‌ ನೋಡಿದ ಅಭಿಮಾನಿಗಳು ಶಿಲ್ಪಾ ಶೆಟ್ಟಿಯ ಹೊಸ ಅವತಾರ ಕಂಡು ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿ ಸೂಪರ್ ವುಮೆನ್‌ ಆಗಿ ಕಾಣಿಸಿಕೊಳ್ಳುವ ನಟಿ ಶಿಲ್ಪಾ ಶೆಟ್ಟಿ ನಾಯಕನಿಗೆ ಕಾಟ ಕೂಡುವ ಮೂಲಕ ಜನರಿಗೆ ರಂಜಿಸುತ್ತಿದೆ. ಟ್ರೈಲರ್‌ನಲ್ಲೂ ಕೂಡ ಇದೇ ದೃಶ್ಯಗಳನ್ನು ಹೆಚ್ಚಾಗಿ ತೋರಿಸಿದ್ದು, ಸಿನಿಮಾ ಕಾಮಿಡಿ ಅಂಡ್ ಥ್ರಿಲ್ಲಿಂಗ್ ಆಗಿರಬಹುದು ಎಂದು ಸಿನಿ ಪ್ರೇಕ್ಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

  Actress Shilpa Shetty Is Back On Social Media As A Superwoman

  ಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿಈ ಬಾಲಿವುಡ್ ಸ್ಟಾರ್ ನಟ-ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ

  ಸದ್ಯ ನಟಿ ಶಿಲ್ಪಾ ಶೆಟ್ಟಿ ತಾವು ಹೇಳಿದಂತೆ ಹೊಸ ಅವತಾರದಲ್ಲೇ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಕಾಲಿಡುತ್ತೇನೆ ಎಂದು ಹೇಳಿದ್ದರು. ಅದರಂತೆ ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಗೆಟಪ್‌ ಕಂಡು ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಸಿನಿಮಾ ಜೂನ್ 17 ರಂದು ರಿಲೀಸ್ ಆಗಲಿದ್ದು, ಟ್ರೈಲರ್ ನೋಡಿ ಥ್ರಿಲ್ ಆದ ಪ್ರೇಕ್ಷಕರು ಪೂರ್ತಿ ಸಿನಿಮಾ ನೋಡಲು ಕಾತುರರಾಗಿದ್ದಾರೆ.

  English summary
  Actress Shilpa Shetty Is Back On Social Media As A Superwoman.
  Tuesday, May 17, 2022, 16:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X