For Quick Alerts
  ALLOW NOTIFICATIONS  
  For Daily Alerts

  ಚಿನ್ನದ ಮಾಸ್ಕ್ ಧರಿಸಿ ಮಾದಕ ಲುಕ್‌ ಕೊಟ್ಟ ನಟಿ ಶ್ರುತಿ ಹಾಸನ್

  |

  ಕೊರೊನಾ ಕಾಲದಲ್ಲಿ ಮಾಸ್ಕ್‌ಗಳಿಲ್ಲದ ಮುಖಗಳನ್ನು ನೋಡಲು ಸಿಗುವುದೇ ಅಪರೂಪ. ಕೊರೊನಾ ಬರದಂತೆ ತಡೆಯಲು ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರಕ್ಕೇ ಪ್ರಥಮ ಆದ್ಯತೆ.

  ಈ ಮಾಸ್ಕ್‌ಗಳಲ್ಲೂ ಹಲವು ವಿಧಗಳು ಬಂದಿವೆ. ನಿಯಮದ ಪ್ರಕಾರ ಎನ್‌-95 ಬಳಸುವುದು ಉತ್ತಮ. ಹಲವರು ಕಡಿಮೆ ಬೆಲೆಯ ಸರ್ಜಿಕಲ್ ಮಾಸ್ಕ್ ಸಹ ಬಳಸುತ್ತಿದ್ದಾರೆ. ಉಳ್ಳವರು ಚಿನ್ನದ ಮಾಸ್ಕ್ ಸಹ ಬಳಸುತ್ತಿದ್ದಾರೆ!

  ಗಂಟೆಗೆ 1 ಲಕ್ಷ ರೂ ಕೊಡಿ: ಪ್ರಮುಖ ಚಿತ್ರದಲ್ಲಿ ನಟಿಸಲು ಶ್ರುತಿ ಹಾಸನ್ ಭಾರಿ ಡಿಮ್ಯಾಂಡ್ಗಂಟೆಗೆ 1 ಲಕ್ಷ ರೂ ಕೊಡಿ: ಪ್ರಮುಖ ಚಿತ್ರದಲ್ಲಿ ನಟಿಸಲು ಶ್ರುತಿ ಹಾಸನ್ ಭಾರಿ ಡಿಮ್ಯಾಂಡ್

  ಹೌದು, ಒಡಿಸ್ಸಾದಲ್ಲಿ ಒಬ್ಬ, ಗುಜರಾತ್‌ ನಲ್ಲಿ ಒಬ್ಬ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಬ್ಬ ಹೀಗೆ ದೇಶದ ಹಲವೆಡೆ ಉಳ್ಳವರು ಚಿನ್ನದ ಮಾಸ್ಕ್‌ಗಳನ್ನು ತಯಾರಿಸಿ ಧರಿಸಿದ್ದಾರೆ. ಅವರ ಸಾಲಿಗೆ ನಟಿ ಶ್ರುತಿ ಹಾಸನ್ ಸಹ ಸೇರಬಹುದಾಗಿದೆ. ಶ್ರುತಿ ಹಾಸನ್ ಚಿನ್ನವನ್ನು ಮಾಸ್ಕ್‌ ರೀತಿಯಲ್ಲಿ ಧರಿಸಿದ್ದಾರೆ.

  ನಿಯತಕಾಲಿಕೆ ಮುಖಪುಟಕ್ಕೆ ಫೋಸು

  ನಿಯತಕಾಲಿಕೆ ಮುಖಪುಟಕ್ಕೆ ಫೋಸು

  ಶ್ರುತಿ ಹಾಸನ್ ಕೆಲವು ದಿನಗಳ ಹಿಂದಷ್ಟೆ ಖ್ಯಾತ ನಿಯತಕಾಲಿಕೆ 'ಫಿಲಂಫೇರ್‌'ನ ಮುಖಪುಟಕ್ಕೆ ಫೋಸು ನೀಡಿದ್ದಾರೆ. ಮುಖಪುಟದ ಚಿತ್ರದಲ್ಲಿ ಚಿನ್ನವನ್ನು ಮುಖದ ಮಾಸ್ಕ್‌ ನಂತೆ ಧರಿಸಿ ಫೋಸು ನೀಡಿದ್ದಾರೆ ಶ್ರುತಿ.

  ಚಿನ್ನವನ್ನು ಮಾಸ್ಕ್ ರೀತಿ ಧರಿಸಿದ್ದಾರೆ ಶ್ರುತಿ

  ಚಿನ್ನವನ್ನು ಮಾಸ್ಕ್ ರೀತಿ ಧರಿಸಿದ್ದಾರೆ ಶ್ರುತಿ

  ಶ್ರುತಿ ಚಿನ್ನದ ಮಾಸ್ಕ್ ಧರಿಸಿಲ್ಲವಾದರೂ, ಬೈತಲೆಗೆ ಧರಿಸಲಾಗುವ ಅಂದವಾದ ಆಭರಣವನ್ನೇ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಧರಿಸಿದ್ದಾರೆ. ಅದು ಚಿನ್ನದ ಮಾಸ್ಕ್‌ ನಂತೆ ಕಾಣುತ್ತಿದೆ. ಇದನ್ನು ಹೊರತಾಗಿ ಸಾಕಷ್ಟು ಚಿನ್ನದ ಆಭರಣಗಳನ್ನು ಧರಿಸಿ ಮಾದಕ ಫೋಸ್ ನೀಡಿದ್ದಾರೆ ಶ್ರುತಿ.

  ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್ಸಂಜಯ್ ದತ್ ಎದುರು ನಿಂತಾಗ ಗಡಗಡ ನಡುಗಿದ್ದರಂತೆ ಶ್ರುತಿ ಹಾಸನ್

  ಸ್ವಜನಪಕ್ಷಪಾತದ ಬಗ್ಗೆ ಮಾತು

  ಸ್ವಜನಪಕ್ಷಪಾತದ ಬಗ್ಗೆ ಮಾತು

  ಇನ್ನು ಶ್ರುತಿ ಹಸನ್ ಕೆಲವು ದಿನಗಳ ಹಿಂದಷ್ಟೆ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದು, 'ನನ್ನ ಹೆಸರಿನ ಹಿಂದೆ ಹಸನ್ ಹೆಸರಿರುವ ಕಾರಣ ನನಗೆ ಅವಕಾಶ ಬೇಗ ಸಿಕ್ಕಿತು' ಎಂದು ಹೇಳಿದ್ದಾರೆ. ಅವಕಾಶ ಬೇಗ ಸಿಗಬಹುದು ಆದರೆ ಪ್ರತಿಭೆ ಇದ್ದರಷ್ಟೆ ಉಳಿಯಲು ಸಾಧ್ಯ ಎಂದಿದ್ದಾರೆ ಅವರು.

  ಯಾರಾ ಸಿನಿಮಾ ಬಿಡುಗಡೆ ಆಗಿದೆ

  ಯಾರಾ ಸಿನಿಮಾ ಬಿಡುಗಡೆ ಆಗಿದೆ

  ಶ್ರುತಿ ನಟಿಸಿರುವ ಹಿಂದಿಯ 'ಯಾರಾ' ಸಿನಿಮಾ ಒಟಿಟಿಯಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ. ತೆಲುಗಿನಲ್ಲಿ 'ಕ್ರ್ಯಾಕ್' ಹೆಸರಿನ ಸಿನಿಮಾದಲ್ಲಿ ನಟ ರವಿತೇಜ ಜೊತೆಗೆ ನಟಿಸುತ್ತಿದ್ದಾರೆ ಶ್ರುತಿ ಹಾಸನ್.

  English summary
  Actress Shruthi Haasan wears gold as face mask and did photo shoot. Her photo printed in Film fare magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X