For Quick Alerts
  ALLOW NOTIFICATIONS  
  For Daily Alerts

  ಬಾಳಸಂಗಾತಿ ಜೊತೆ ಸನ್ನಿ ಲಿಯೋನ್ ದೀಪಾವಳಿ

  By Rajendra
  |

  ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಇತ್ತೀಚೆಗಷ್ಟೇ ಅವರು ಮುಂಬೈನಲ್ಲಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ಈ ಮನೆಯಲ್ಲಿ ತನ್ನ ಬಾಳಸಂಗಾತಿ ಜೊತೆ ದೀಪಾವಳಿ ಆಚರಿಸಿಕೊಂಡಿದ್ದಾರೆ.

  ಸನ್ನಿ ಲಿಯೋನ್ ದೀಪಾವಳಿ ಹಬ್ಬ ಆಚರಿಸುತ್ತಿರುವುದು ಇದೇ ಮೊದಲು. ಈ ಬಗ್ಗೆ ಸಹಜವಾಗಿಯೇ ಸನ್ನಿಗೆ ಮಹದಾನಂದವಾಗಿದೆ. "ಆದಷ್ಟು ಬೇಗ ಇದು ನಮ್ಮ ಮನೆ ಎಂಬ ಭಾವನೆ ಬರಲು ಸಾಮಾನು ಸರಂಜಾಮುಗಳಿಗಾಗಿ ನಾನು ನನ್ನ ಗಂಡ ಮುಂಬೈ ಎಲ್ಲಾ ಸುತ್ತಾಡಿದ್ದಾಗಿ ಸನ್ನಿ ತಿಳಿಸಿದ್ದಾರೆ.

  ಈ ಮನೆಗೆ ಬಂದಾಗ ಮೊಟ್ಟ ಮೊದಲ ಬಾರಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಹಬ್ಬಕ್ಕೆ ಬಾಲಿವುಡ್ ತಾರೆ ಪೂಜಾ ಬೇಡಿ ಹಾಗೂ ಇತರೆ ಗೆಳೆಯರನ್ನು ಆಹ್ವಾನಿಸಿದ್ದೆವು. ಎಲ್ಲರೂ ಸೇರಿ ದೀಪಾವಳಿ ಆಚರಿಸಿದೆವು. ಆದರೆ ಪಟಾಕಿ ಹೊಡೆದರೋ ಇಲ್ಲವೋ ಎಂಬ ಬಗ್ಗೆ ಮಾತ್ರ ಸನ್ನಿ ಬಾಯ್ಬಿಟ್ಟಿಲ್ಲ.

  ಮುಂಬೈನಲ್ಲಿ ಮನೆ ಹುಡುಕಲು ಸನ್ನಿ ಲಿಯೋನ್ ಹರಸಾಹಸ ಪಟ್ಟ ಸಂಗತಿ ಗೊತ್ತೇ ಇದೆ. ಈಕೆ ನೀಲಿ ತಾರೆ ಎಂಬ ಕಾರಣಕ್ಕೆ ಯಾರೂ ಈಕೆಗೆ ಬಾಡಿಗೆ ಮನೆ ಕೊಡಲು ಮುಂದೆ ಬಂದಿರಲಿಲ್ಲ. ಕಡೆಗೆ ಹೇಗೋ ಏನೋ ಬಾಡಿಗೆ ಮನೆ ಹುಡುಕುವಲ್ಲಿ ಸನ್ನಿ ಲಿಯೋನ್ ಯಶಸ್ವಿಯಾದರು.

  ಒಂದು ಗಾದೆ ಮಾತು ನೆನಪಿರಬೇಕಲ್ಲಾ, ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಅಂಥ. ಹಾಗೆಯೇ ಕೆನಡಾ ಮೂಲದ ಸನ್ನಿ ಲಿಯೋನ್ ಗೂ ದೀಪಾವಳಿಗೂ ಏನು ಸಂಬಂಧ ಎಂಬುದು ಎಲ್ಲರ ತಲೆ ಕೊರೆಯುತ್ತಿರುವ ಪ್ರಶ್ನೆ. ಮುಂದೆ ಯುಗಾದಿಯನ್ನೂ ಆಚರಿಸುತ್ತಾರೋ ಏನೋ. (ಏಜೆನ್ಸೀಸ್)

  English summary
  Canada based Bollywood actress Sunny Leone celebrates the festival of lights with her husband in a new home she’s bought in Mumbai. I am spending my first Diwali in my new home with my husband said the actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X