»   » ವಿಕ್ಕಿ ಡೊನರ್ ನಟಿ ಯಾಮಿಗೆ ಅಪಘಾತ

ವಿಕ್ಕಿ ಡೊನರ್ ನಟಿ ಯಾಮಿಗೆ ಅಪಘಾತ

Posted By:
Subscribe to Filmibeat Kannada
ಬಾಲಿವುಡ್ ಅಂಗಳಕ್ಕೆ ವಿಕ್ಕಿ ಡೊನರ್ ಚಿತ್ರದ ಮೂಲಕ ಕಾಲಿರಿಸಿದ್ದ ಯಾಮಿ ಗೌತಮ್ ಗೆ ಅಪಘಾತಕ್ಕೀಡಾಗಿದ್ದಾರೆ. ತಮಿಳು ಚಿತ್ರವೊಂದರ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಉಲ್ಲಾಸದಿಂದ ಉತ್ಸಾಹದಿಂದ ಕುಣಿಯುತ್ತಿದ್ದ ನಟಿ ಯಾಮಿ ಕಾಲಿಗೆ ಬೈಕ್ ಬಡಿದು ಪೆಟ್ಟು ಬಿದ್ದಿದೆ.

ಪಿಟಿಐ ಮೂಲಗಳ ಪ್ರಕಾರ, ತೀವ್ರ ಪೆಟ್ಟು ತಿಂದ ಯಾಮಿ ಅವರನ್ನು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು.ಆದರೆ, ಶೂಟಿಂಗ್ ಅರ್ಧಕ್ಕೆ ಇಲ್ಲುವ ಸೂಚನೆ ಸಿಕ್ಕಿದ್ದನ್ನು ಗಮನಿಸಿದ ಯಾಮಿ, 'ನನಗೆ ಹೆಚ್ಚು ಪರಿಣಾಮಕಾರಿ ಮೆಡಿಸನ್ ಕೊಟ್ಟುಬಿಡಿ ಇನ್ನೆರಡು ಗಂಟೆಯಲ್ಲಿ ನಾನು ಶೂಟಿಂಗ್ ಸ್ಥಳಕ್ಕೆ ಹೋಗಬೇಕು ಎಂದು ಡಾಕ್ಟರ್ ಹತ್ತಿರ ಕೇಳಿಕೊಂಡರಂತೆ. ಯಾಮಿಯ ಈ ನಡೆಯಿಂದ ಇಡೀ ಚಿತ್ರತಂಡ ಪ್ರಶಂಸೆಗೆ ಪಾತ್ರವಾಗಿದೆಯಂತೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಯಾಮಿ ನಂತರ ಬಾಲಿವುಡ್ ಗೆ ಜಿಗಿದಿದ್ದರು. ಇತ್ತೀಚೆಗೆ ಬಾಲಿವುಡ್ ನಲ್ಲಿ ತುಂಬಾ ಚರ್ಚೆಗೆ ಈಡಾದ ವಿಕ್ಕಿ ಡೊನರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ಮೂಲತಃ ಕಿರುತೆರೆಯಿಂದ ಜನಪ್ರಿಯತೆ ಗಳಿಸಿದ 28 ವರ್ಷದ ಯಾಮಿ, ಯೆ ಪ್ಯಾರ್ ನ ಹೋಗಾ ಕಮ್ ಹಾಗೂ ಚಾಂದ್ ಕೆ ಪಾರ್ ಚಲೋ ಧಾರಾವಾಹಿಗಳ ಮೂಲಕ ಮನೆ ಮಂದಿಗೆ ಚಿರಪರಿಚಿತರು.

ಐಎಎಸ್ ಆಧಿಕಾರಿಯಾಗುವಾಸೆ: ಚಿಕ್ಕಂದಿನಿಂದಲೆ ಓದಿನಲ್ಲಿ ಮುಂದಿದ್ದ ಯಾಮಿಗೆ ಚಿತ್ರರಂಗಕ್ಕಿಂತ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ಇತ್ತು. ಈಗಲೂ ಇದೆ. ಕಾನೂನು ಪದವಿ ಪಡೆದು ಐಎಎಸ್ ಅಧಿಕಾರಿಯಾಗಬೇಕು ಎಂಬುದು ಆಕೆಯ ಆಸೆಯಾಗಿತ್ತು. ಯಾಮಿ ತಂದೆ ಜೀ ನ್ಯೂಸ್ ಚಾನೆಲ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಮುಂಬೈಗೆ ಕಾಲಿಟ್ಟ ಬಳಿಕ ಯಾಮಿ ಚಾಂದ್ ಕೆ ಪರ್ ಚಲೋ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ಅದರೆ, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ಯೇ ಪ್ಯಾರ್ ನ ಹೋಗಾ ಕಮ್ ಧಾರಾವಾಹಿ ಮೂಲಕ ಆಕೆಗೆ ಜನಪ್ರಿಯತೆ ಗಳಿಸಿದರು. ಆಅಯುಷ್ಮಾನ್ ಖುರಾನಾ ಜೊತೆ ವಿಕ್ಕಿ ಡೋನರ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದಾಗ ಎಲ್ಲರಂತೆ ಯಾಮಿ ಕೂಡಾ ಖುಷಿ ಪಟ್ಟಿದ್ದರು. ಆದರೆ, 'ಚಿತ್ರದಲ್ಲಿ ನಾಯಕ ವೀರ್ಯ ದಾನ ಮಾಡುತ್ತಾನೆ. ಚಿತ್ರ ಸಾಂಪ್ರದಾಯಸ್ಥ ಕುಟುಂಬದಲ್ಲಿ ಚರ್ಚಿತವಾಗುತ್ತದೆ. ನಾಯಕಿಯಾಗಿ ನನ್ನ ಪಾತ್ರ ಏನಿರುತ್ತೆ ಎಂಬ ಪ್ರಶ್ನೆಯೊಂದಿಗೆ ಯಾಮಿ ತಮ್ಮ ಮನೆಗೆ ಸಿನಿಮಾ ಚಿತ್ರಕತೆ ಪ್ರತಿ ತೆಗೆದುಕೊಂಡು ಹೋಗಿದ್ದಾರೆ.

ಅಪ್ಪ-ಅಮ್ಮ ಇಬ್ಬರು ಚಿತ್ರದ ಕಥೆ ಓದಿ ಇಷ್ಟಪಟ್ಟ ಮೇಲೆ ಯಾಮಿ ಚಿತ್ರಕ್ಕೆ ಸಹಿ ಹಾಕಿದ್ದರು. ನಂತರ ಚಿತ್ರ ಜನಪ್ರಿಯತೆ ಗಳಿಸಿದ್ದಲ್ಲದೆ ಯಾಮಿ ಅಭಿನಯಕ್ಕೂ ಎಲ್ಲರೂ ಫುಲ್ ಮಾರ್ಕ್ಸ್ ನೀಡಿದ್ದರು. ಚಲನಚಿತ್ರವಲ್ಲದೆ ಜಾಹೀರಾತು ಪ್ರಪಂಚದಲ್ಲೂ ಕಾಣಿಸಿಕೊಂಡಿರುವ ಯಾಮಿಗೆ ವಿವಿಧ ಭಾಷೆಗಳಲ್ಲಿ ಅಭಿನಯಿಸುವುದು ಖುಷಿಕೊಟ್ಟಿದೆಯಂತೆ.

English summary
The Vicky Donor girl Yami Gautam met with a bike accident while shooting for a song sequence for a Tamil movie in Hyderabad. Yami, who rose to prominence with her debut film Vicky Donor, has sustained leg injuries.
Please Wait while comments are loading...