»   » 5 ಕೋಟಿ ದೇಣಿಗೆ: ಪ್ರಾಯಶ್ಚಿತದೊಂದಿಗೆ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆ

5 ಕೋಟಿ ದೇಣಿಗೆ: ಪ್ರಾಯಶ್ಚಿತದೊಂದಿಗೆ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆ

Posted By: ಸೋನು ಗೌಡ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಖ್ಯಾತ ನಟ ಕಮ್ ನಿರ್ದೇಶಕ ಕರಣ್ ಜೋಹರ್ ನಿರ್ದೇಶನ ಮಾಡಿದ್ದ ಬಹು ತಾರಾಗಣ ಇರೋ, ಬಹು ನಿರೀಕ್ಷಿತ ಸಿನಿಮಾ 'ಏ ದಿಲ್ ಹೈ ಮುಷ್ಕಿಲ್' ಚಿತ್ರಕ್ಕಿದ್ದ ಕಂಟಕ ದೂರವಾಗಿದೆ.

  ಇನ್ನೇನು ನಿಶ್ಚಿಂತೆಯಿಂದ ಅಂದುಕೊಂಡಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಅಂದರೆ ಇದೇ ತಿಂಗಳು 28 ರಂದು, ಟ್ರೈಯಾಂಗಲ್ ಲವ್ ಸ್ಟೋರಿ ಸಿನಿಮಾ, ಎಲ್ಲಾ ಕಡೆ ಅದ್ಧೂರಿಯಾಗಿ ತೆರೆ ಕಾಣಲಿದೆ.

  ಈ ಮೊದಲು ಮಹಾರಾಷ್ಟ್ರದಾದ್ಯಂತ ಯಾವುದೇ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಬಿಡೋದಿಲ್ಲ ಎನ್ನುವ ಮೂಲಕ, ಮಹಾರಾಷ್ಟ್ರದ ನವನಿರ್ಮಾಣ್ ಸೇನಾ ಸಮಿತಿಯ ಮುಖ್ಯಸ್ಥ ರಾಜ್ ಠಾಕ್ರೆ ಚಿತ್ರಕ್ಕೆ ಕಂಟಕವಾಗಿ ಪರಿಣಮಿಸಿದ್ದರು.['ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ]

  ಆದರೆ ಮಹತ್ವದ ಸಭೆಯ ನಂತರ ಚಿತ್ರಕ್ಕಿದ್ದ ಎಲ್ಲಾ ಕಂಟಕಗಳು ದೂರವಾಗಿದ್ದು, ಮುಂದಿನ ಶುಕ್ರವಾರ ಈ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ. ಸಭೆಯಲ್ಲಿ ನಡೆದ ತೀರ್ಮಾನಗಳ ಬಗ್ಗೆ ತಿಳಿಯಲು ಮುಂದೆ ಓದಿ.....

  ನಿರ್ಮಾಪಕ/ನಿರ್ದೇಶಕರ ಸ್ಪಷ್ಟನೆ

  ಇನ್ನು ಮುಂದೆ ಮಾಡುವ ಯಾವುದೇ ಸಿನಿಮಾಗಳಲ್ಲಿ ಕೂಡ ಪಾಕ್ ನಟ ಅಥವಾ ನಟಿಯರಿಗೆ ಅವಕಾಶ ಕೊಡಬಾರದು ಎಂಬ ಶರತ್ತು ಮತ್ತು ಸ್ಪಷ್ಟನೆಯೊಂದಿಗೆ, 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಬಿಡುಗಡೆಗೆ ಅವಕಾಶ ಕೊಡಲಾಗಿದೆ.[ರಣಬೀರ್ ಕಪೂರ್ ಗೆ 'ಅಪ್ಪ' ಅಂತ ಕರೆದ ಆರಾಧ್ಯ ಬಚ್ಚನ್]

  ಮಹಾರಾಷ್ಟ್ರ ಸಿಎಂ ಜೊತೆ ಚಿತ್ರತಂಡದ ಸಭೆ

  ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಚಿತ್ರದ ನಿರ್ಮಾಪಕರು ಮತ್ತು MNS ಮುಖ್ಯಸ್ಥ-ಕಾರ್ಯಕರ್ತರ ನಡುವೆ ನಿನ್ನೆ (ಅಕ್ಟೋಬರ್ 22) ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ MNS ಮುಖ್ಯಸ್ಥ ರಾಜ್ ಠಾಕ್ರೆ, 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ನಿರ್ದೇಶಕ ಕರಣ್ ಜೋಹರ್, ಬಾಲಿವುಡ್ ನಿರ್ಮಾಪಕರ ಸಂಘದ ಅಧ್ಯಕ್ಷ ಮುಖೇಶ್ ಭಟ್, ಚಿತ್ರದ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಮತ್ತಿತ್ತರರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

  ಮೂರು ಮುಖ್ಯವಾದ ನಿರ್ಣಯಗಳು

  ಈ ಮಹತ್ವದ ಸಭೆಯಲ್ಲಿ ಪ್ರಮುಖವಾಗಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. 1. ಪಾಕ್ ಕಲಾವಿದರಿಗೆ ಇನ್ನುಮುಂದೆ ಯಾವುದೇ ಸಿನಿಮಾಗಳಲ್ಲಿ ಅವಕಾಶ ಕೊಡದೇ ಇರುವುದು. 2. ಸಿನಿಮಾ ಆರಂಭವಾಗುವ ಮುನ್ನ ಭಾರತೀಯ ಸೇನೆಗೆ ಗೌರವ ಸಲ್ಲಿಸುವುದು. 3. ಭಾರತೀಯ ಸೇನೆಗೆ ದೇಣಿಗೆ ನೀಡುವುದು ಎಂದು ತೀರ್ಮಾನ ತೆಗದುಕೊಳ್ಳಲಾಯಿತು.

  ಸೇನಾ ನಿಧಿಗೆ ದೇಣಿಗೆ ಎಷ್ಟು?

  ಪಾಕ್ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಸೇನಾ ದೇಣಿಗೆ ಅಂತ ಸುಮಾರು 5 ಕೋಟಿ ರೂಪಾಯಿ ನೀಡಬೇಕು. ಜೊತೆಗೆ ಇನ್ನು ಮುಂದೆ ಯಾವುದೇ ಪಾಕ್ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡೋದಿಲ್ಲ ಅಂತ ಲಿಖಿತ ರೂಪದಲ್ಲಿ ಹೇಳಿಕೆ ನೀಡಬೇಕು ಎಂದು MNS ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದ್ದಾರೆ. ಅಂತೂ ಅವರ ಹೋರಾಟಕ್ಕೆ ಸಿಕ್ಕ ಜಯಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

  ದೀಪಾವಳಿಗೆ ಬಿಗಿ ಭದ್ರತೆಯಲ್ಲಿ ಬಿಡುಗಡೆ

  ಗೃಹ ಸಚಿವ ರಾಜನಾಥ್ ಸಿಂಗ್ ಅವರು ದೇವೇಂದ್ರ ಫಡ್ನವೀಸ್ ಅವರ ಜೊತೆ ಮಾತು-ಕತೆ ನಡೆಸಿ, ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.

  English summary
  Karan Johar directorial Hindi moive 'Ae Dil Hai Mushkil' starring Pakistani actor Fawad Khan, Maharashtra Chief Minister Devendra Fadnavis buckled under pressure. Fadnavis mediated talks Saturday between MNS president Raj Thackeray and Johar after the producers gave in to the MNS demand not to cast Pakistan artistes in future and to pay Rs 5 crore as ‘prayashchit’ (penance) to the Army welfare fund.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more