For Quick Alerts
  ALLOW NOTIFICATIONS  
  For Daily Alerts

  2 ತಿಂಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ ಕರಣ್ ಜೋಹರ್

  |

  ಸುಶಾಂತ್ ಸಿಂಗ್ ಆತ್ಮಹತ್ಯೆಯ ಬಳಿಕ ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನೆಪೋಟಿಸಂ ಕಾರಣ ಎಂದು ಅನೇಕರು ಅನೇಕರು ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ನಟಿ ಕಂಗನಾ ರಣಾವತ್ ಬಾಲಿವುಡ್ ಪ್ರಮುಖ ವ್ಯಕ್ತಿಗಳ ವಿರುದ್ಧ ಸಿಡಿದೆದ್ದಿದ್ದಾರೆ.

  Superstar : Upendra ಪರಿವಾರದಿಂದ ಹೊಸ ಹೀರೋ , ಸಿನಿಮಾ ಹೆಸರು ಸೂಪರ್ ಸ್ಟಾರ್ | Filmibeat Kannada

  ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ವಿರುದ್ಧ ವೂ ನೆಪೋಟಿಸಂ ಆರೋಪ ಕೇಳಿ ಬರುತ್ತಿದೆ. ಸ್ಟಾರ್ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾರೆ, ಹೊರಗಡೆಯಿಂದ ಬಂದವರನ್ನು ತುಳಿಯುತ್ತಿದ್ದಾರೆ ಎಂದು ಕರಣ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

  ನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರು

  ನೆಟ್ಟಿಗರು ಕರಣ್ ಜೋಹರ್ ಅವರನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ಕರಣ್ ಜೋಹರ್ ಕೊನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಪೋಸ್ಟ್ ಮಾಡಿದ್ದರು. ಆ ನಂತರ ಸೋಷಿಯಲ್ ಮೀಡಿಯಾ ಕಡೆ ತಲೆಹಾಕಿರಲಿಲ್ಲ.

  ಕೊನೆಯದಾಗಿ ಕರಣ್ "ಕಳೆದ ಒಂದು ವರ್ಷದಿಂದ ನಿನ್ನೊಂದಿಗೆ ಸಂಪಕ್ರದಲ್ಲಿರಲಿಲ್ಲ ನಾನು. ಹಾಗಾಗಿ ನನ್ನನ್ನೆ ನಾನು ದೂಷಿಸಿಕೊಳ್ಳುತ್ತೇನೆ.." ಎಂದು ದೀರ್ಘವಾಗಿ ಪೋಸ್ಟ್ ಹಾಕಿದ್ದರು. ಆ ನಂತರ ಕರಣ್ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬರಲು ಪ್ರಾರಂಭವಾಯಿತು. 2 ತಿಂಗಳಿಂದ ಸೈಲೆಂಟ್ ಆಗಿದ್ದ ಕರಣ್ ಸ್ವಾತಂತ್ರ್ಯ ದಿನಾಚರಣೆ ದಿನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಶುಭ ಹಾರೈಸಿದ್ದಾರೆ.

  ಕರಣ್ ಜೋಹರ್ ನಿರ್ಮಾಣದ ಗುಂಜನ್ ಸಕ್ಸೇನಾ ಸಿನಿಮಾ ರಿಲೀಸ್ ಆದಾಗಲು ಕರಣ್ ಯಾವುದು ಪ್ರೊಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಸಿನಿಮಾದ ಬಗ್ಗೆ ಎಲ್ಲಿಯೂ ಪೋಸ್ಟ್ ಮಾಡಿರಲಿಲ್ಲ. ಅಲ್ಲದೆ ಸಿನಿಮಾದ ಟೀಸರ್ ನಲ್ಲಿಯೂ ಕರಣ್ ಹೆಸರನ್ನು ತೆಗೆದು ಹಾಕಿದ್ದರು. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ.

  English summary
  After 2 months Karan Johar in social media. After Sushant Singh death Karan Johar Karan returns to social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X