For Quick Alerts
  ALLOW NOTIFICATIONS  
  For Daily Alerts

  ಆಮಿರ್ ಖಾನ್ ಬಳಿಕ ಹೃತಿಕ್ ವಿರುದ್ಧ ನೆಟ್ಟಿಗರ ಕೆಂಗಣ್ಣು: 'ವಿಕ್ರಂ ವೇದ' ಬಾಯ್‌ಕಾಟ್ ಮಾಡ್ಬೇಕಂತೆ!

  |

  ಸಿನಿಮಾ ಮಂದಿಗೆ ಸೋಶಿಯಲ್ ಮೀಡಿಯಾ ವರನೂ ಹೌದು. ಶಾಪನೂ ಹೌದು. ಸಿನಿಮಾ ಪ್ರಚಾರಕ್ಕೆ ಇದೇ ಸೋಶಿಯಲ್ ಮೀಡಿಯಾ ಹಲವು ಬಾರಿ ನೆರವಾಗಿದೆ. ಅದೇ ರೀತಿ ಸಿನಿಮಾ ಸೋಲುವುದಕ್ಕೂ ಇದೇ ಸೋಶಿಯಲ್ ಮೀಡಿಯಾ ಕಾರಣ. ಅದಕ್ಕೆ ಉತ್ತಮ ಉದಾಹರಣೆನೇ ಆಮಿರ್ ಖಾನ್ ಅವರ 'ಲಾಲ್ ಸಿಂಗ್ ಚಡ್ಡ' ಸಿನಿಮಾ.

  ಆಮಿರ್ ಖಾನ್ ಸಿನಿಮಾ ಇಷ್ಟ ಪಟ್ಟು ನಿರ್ಮಿಸಿ, ನಟಿಸಿದ್ದ ಸಿನಿಮಾ 'ಲಾಲ್ ಸಿಂಗ್ ಚಡ್ಡ'. ಬಿಡುಗಡೆಗೆ ಕೆಲವು ದಿನಗಳಿಂದ ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಅಭಿಯಾನ ನಡೆಯುತ್ತಿತ್ತು. 'ಲಾಲ್ ಸಿಂಗ್ ಚಡ್ಡ' ಸೋಲುವುದಕ್ಕೆ ಈ ಬಾಯ್‌ಕಾಟ್ ಅಭಿಯಾನ ಕೂಡ ಒಂದು ಕಾರಣ. ಈಗ ಮತ್ತೊಂದು ಸಿನಿಮಾ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ.

  'ಕೆಜಿಎಫ್ 3' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ? ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು?'ಕೆಜಿಎಫ್ 3' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ? ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು?

  ಬಾಕ್ಸಾಫೀಸ್‌ನಲ್ಲಿ ಆಮಿರ್ ಖಾನ್ ಸಿನಿಮಾ ಸೋಲಿನ ಸುಳಿಗೆ ಸಿಲುಕುತ್ತಿದ್ದಂತೆ, ಮತ್ತೊಂದು ಬಾಲಿವುಡ್ ಸಿನಿಮಾವನ್ನು ಬಾಯ್‌ಕಾಟ್ ಮಾಡ್ಬೇಕು ಅನ್ನೋ ಅಭಿಯಾನ ಶುರುವಾಗಿದೆ. ಅದು ಮತ್ಯಾವುದೂ ಅಲ್ಲ ಹೃತಿಕ್ ರೋಷನ್ ಅಭಿನಯದ 'ವಿಕ್ರಂ ವೇದ' ಅಷ್ಟಕ್ಕೂ ಈ ಸಿನಿಮಾ ಬಾಯ್‌ಕಾಟ್ ಮಾಡ್ಬೇಕು ಅಂತಿರೋದ್ಯಾಕೆ? ತಿಳಿಯೋಕೆ ಮುಂದೆ ಓದಿ.

  'ವಿಕ್ರಂ ವೇದ' ಬಾಯ್‌ಕಾಟ್

  'ವಿಕ್ರಂ ವೇದ' ಬಾಯ್‌ಕಾಟ್

  'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಿಡುಗಡೆಗೂ ಮುನ್ನ ಬಾಯ್‌ಕಾಟ್ ಅಭಿಯಾನ ಶುರುವಾಗಿತ್ತು. ಸ್ವತ: ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಸಿನಿಮಾವನ್ನು ಬಾಯ್‌ಕಾಟ್ ಮಾಡದೆ ಇರುವಂತೆ ಮನವಿ ಮಾಡಿಕೊಂಡಿದ್ದರು. ಆದರೂ, ಏನೂ ಪ್ರಯೋಜನ ಆಗಿಲಿಲ್ಲ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಟೇಕಾಫ್‌ ಆಗಲೇ ಇಲ್ಲ. ಈಗ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಸರದಿ. ಟ್ವಿಟರ್‌ನಲ್ಲಿ 'ಬಾಯ್‌ಕಾಟ್ ವಿಕ್ರಂವೇದ' ಅಭಿಯಾನ ಶುರುವಾಗಿದೆ.

  'ಲಾಲ್‌ ಸಿಂಗ್ ಚಡ್ಡ' ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡರೂ ಸಾಕಾಗಲ್ಲ!'ಲಾಲ್‌ ಸಿಂಗ್ ಚಡ್ಡ' ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡರೂ ಸಾಕಾಗಲ್ಲ!

  'ಲಾಲ್ ಸಿಂಗ್ ಚಡ್ಡ' ನೋಡಿದ್ದೇ ತಪ್ಪಾಯ್ತಾ?

  'ಲಾಲ್ ಸಿಂಗ್ ಚಡ್ಡ' ನೋಡಿದ್ದೇ ತಪ್ಪಾಯ್ತಾ?

  ಟ್ವಿಟರ್‌ನಲ್ಲಿ ಹೃತಿಕ್ ರೋಷನ್ ಸಿನಿಮಾ 'ವಿಕ್ರಂ ವೇದ' ಬಾಯ್‌ಕಾಟ್ ಮಾಡ್ಬೇಕು ಅಂತ ಟ್ರೆಂಡ್ ಮಾಡಲಾಗುತ್ತಿದೆ. ಅಸಲಿಗೆ ನೆಟ್ಟಿಗರಿಗೆ ಹೃತಿಕ್ ರೋಷನ್ ಮೇಲೆ ಯಾಕೆ ದ್ವೇಷ? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳೋದೇ ಸಹಜ. ನಿನ್ನೆ (ಆಗಸ್ಟ್ 13) ಹೃತಿಕ್ ರೋಷನ್ 'ಲಾಲ್‌ ಸಿಂಗ್ ಚಡ್ಡ' ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿ ಬರುವಾಗ, ಕ್ಯಾಮರಾಗಳ ಕಣ್ಣಿಗೂ ಬಿದ್ದಿದ್ದರು. ಬಳಿಕ "ಈಗ ತಾನೇ ಲಾಲ್ ಸಿಂಗ್ ಚಡ್ಡ ಸಿನಿಮಾವನ್ನು ನೋಡಿದೆ. ಈ ಸಿನಿಮಾದಿಂದ ನನ್ನ ಹೃದಯ ತುಂಬಿ ಬಂತು. ಪ್ಲಸ್ ಮತ್ತು ಮೈನಸ್ ಅನ್ನು ಪಕ್ಕಕ್ಕಿಟ್ಟರೆ, ಈ ಸಿನಿಮಾ ಅತ್ಯತ್ಭುತ. ಇಂತಹ ರತ್ನವನ್ನು ಮಿಸ್ ಮಾಡಿಕೊಳ್ಳಬೇಡಿ. ಈಗಲೇ ಹೋಗಿ ನೋಡಿ. ಇದು ಸುಂದರವಾಗಿದೆ." ಎಂದು ಟ್ವೀಟ್ ಮಾಡಿದ್ದರು. ಹೃತಿಕ್ ಸಿನಿಮಾ ನೋಡಿದ್ದನ್ನೇ ಮುಂದಿಟ್ಟಿಕೊಂಡು ನೆಟ್ಟಿಗರು ರೀ-ಟ್ವೀಟ್ ಮಾಡಿ ಬಾಯ್‌ಕಾಟ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ.

  ರಿಮೇಕ್ ಸಿನಿಮಾ ಯಾಕೆ ನೋಡ್ಬೇಕು?

  ರಿಮೇಕ್ ಸಿನಿಮಾ ಯಾಕೆ ನೋಡ್ಬೇಕು?

  'ವಿಕ್ರಂ ವೇದ' ಸಿನಿಮಾ ತಮಿಳಿನ ರಿಮೇಕ್ ಅನ್ನೋದು ಗೊತ್ತೇ ಇದೆ. ವಿಜಯ್ ಸೇತುಪತಿ ಹಾಗೂ ಆರ್. ಮಾಧವನ್ ಅಭಿನಯದ 'ವಿಕ್ರಂ ವೇದ' ಸಿನಿಮಾದ ರಿಮೇಕ್. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ಈ ಸಿನಿಮಾದ ಶೂಟಿಂಗ್ ಮುಗಿದಿದೆ. ಇನ್ನೇನು ಬಿಡುಗಡೆ ಸಜ್ಜಾಗುತ್ತಿದೆ. ಇದೇ ವೇಳೆ ರಿಮೇಕ್ ಸಿನಿಮಾ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದಾರೆ. "ಈಗಾಗಲೇ ಒರಿಜಿನಲ್ 'ವಿಕ್ರಂ ವೇದ' ಹಿಂದಿ ಡಬ್ಬಿಂಗ್ ವರ್ಷನ್ ಲಭ್ಯವಿದೆ. ಮತ್ಯಾಕೆ ಸಿನಿಮಾ ನೋಡಬೇಕು" ಅಂತ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಲಿಂಕ್ ಕೂಡ ಶೇರ್ ಮಾಡಿದ್ದಾರೆ.

  'ವಿಕ್ರಂ ವೇದ' ಬಿಡುಗಡೆ ಯಾವಾಗ?

  'ವಿಕ್ರಂ ವೇದ' ಬಿಡುಗಡೆ ಯಾವಾಗ?

  ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ಅಭಿನಯದ 'ವಿಕ್ರಂ ವೇದ' ಸಿನಿಮಾದಲ್ಲಿ ರಾಧಿಕಾ ಆಪ್ಟೆ ಕೂಡ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಕಂಪ್ಲೀಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 30ರಂದು ವಿಶ್ವದಾದ್ಯಂತ 'ವಿಕ್ರಂ ವೇದ' ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಇನ್ನೇನು ಪ್ರಮೋಷನ್ ಶುರು ಮಾಡಬೇಕು ಅನ್ನುವಾಗಲೇ 'ವಿಕ್ರಂ ವೇದ' ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

  English summary
  After Aamir Khan Laal Singh Chaddha Boycott Trend For Hrithik Roshan Vikram Vedha On Twitter, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X