»   » 'ಮಾಮ್' ನಂತರ 'ಮಿಸ್ಟರ್ ಇಂಡಿಯಾ 2'ನಲ್ಲಿ ಶ್ರೀದೇವಿ

'ಮಾಮ್' ನಂತರ 'ಮಿಸ್ಟರ್ ಇಂಡಿಯಾ 2'ನಲ್ಲಿ ಶ್ರೀದೇವಿ

Posted By:
Subscribe to Filmibeat Kannada

2012ರಲ್ಲಿ 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ರೀದೇವಿ ನಾಲ್ಕು ವರ್ಷಗಳ ನಂತರ ಈಗ 'ಮಾಮ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸಹ 'ಮಾಮ್' ಚಿತ್ರದಲ್ಲೇ ಬ್ಯುಸಿ ಆಗಿರುವ ಶ್ರೀದೇವಿ ರವರು ಈಗಾಗಲೇ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.[ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?]

ಹೌದು, 'ಮಾಮ್' ಚಿತ್ರದ ನಂತರ ನಟಿ ಶ್ರೀದೇವಿ ರವರು ಬಾಲಿವುಡ್ ನ 1987 ರ ಸೂಪರ್ ಹಿಟ್ ಚಿತ್ರ 'ಮಿಸ್ಟರ್ ಇಂಡಿಯಾ'ದ ಭಾಗ ಎರಡರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

After Mom, Sridevi to start work on Mr India 2

'ಮಿಸ್ಟರ್ ಇಂಡಿಯಾ' ಚಿತ್ರ ಶ್ರೀದೇವಿ ಮತ್ತು ಅನಿಲ್ ಕಪೂರ್ ಅಭಿನಯದ 30 ವರ್ಷಗಳ ಹಿಂದಿನ ಚಿತ್ರ. ಈ ಚಿತ್ರದ 'ಐ ಲವ್ಯೂ' ಎಂಬ ಹಾಡು ಬಾಲಿವುಡ್ ಸಿನಿ ಪ್ರಿಯರಲ್ಲಿ ಈಗಲು ಮನೆಮತಾಗಿದೆ. ಈಗ ಮತ್ತೆ ಶ್ರೀದೇವಿ ಮತ್ತು ಅನಿಲ್ ಕಪೂರ್ ತೆರೆ ಮೇಲೆ ಮ್ಯಾಜಿಕ್ ಮಾಡಲು ಬರುತ್ತಿದ್ದು ಇಬ್ಬರ ಹಿಂದಿನ ಪಾತ್ರಗಳೇ ಮುಂದುವರೆಯಲಿವೆಯಂತೆ. ವಿಶೇಷ ಅಂದ್ರೆ ಸೀಕ್ವೆಲ್ ನಲ್ಲಿ ಇನ್ನೊಂದು ಹೊಸ ಜೋಡಿ ಸಹ ಕಾಣಿಸಿಕೊಳ್ಳಲಿದೆಯಂತೆ.[ಟ್ರೈಲರ್: ಭಾವುಕತೆಯಲ್ಲಿ ಸಿಲುಕಿಸುವ ಮಗಳ ರಕ್ಷಣೆಯ 'ಮಾಮ್']

'ಮಿಸ್ಟರ್ ಇಂಡಿಯಾ 2' ಚಿತ್ರ ನಿರ್ಮಾಣಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದೆಯಂತೆ. 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶೇಖರ್ ಕಪೂರ್ ಈ ಚಿತ್ರದ ಸೀಕ್ವೆಲ್ ನಿರ್ದೇಶನ ಮಾಡಲು ನಿರಾಕರಿಸಿದ್ದು ನಿರ್ಮಾಪಕರು ಹೊಸ ಡೈರೆಕ್ಟರ್ ಗೆ ಹುಡುಕಾಟ ನಡೆಸಿದ್ದಾರಂತೆ. ಪ್ರಸ್ತುತ 'ಮಾಮ್' ಚಿತ್ರ ನಿರ್ದೇಶಿಸುತ್ತಿರುವ ರವಿ ಉಡ್ಯಾವಾರ್ ಮತ್ತು ರಾಕೇಶ್ ಓಂಪ್ರಕಾಶ್ ಮೆಹ್ರಾ ರವರು 'ಮಿಸ್ಟರ್ ಇಂಡಿಯಾ 2' ನಿರ್ದೇಶನ ಮಾಡುವ ಸಾಧ್ಯತೆಗಳು ಇವೆ ಎನ್ನುತ್ತಿವೆ ಮೂಲಗಳು.

ಶ್ರೀದೇವಿ ಅಭಿನಯದ 'ಮಾಮ್' ಚಿತ್ರ ಜುಲೈ 7 ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ಪತಿ ಬೋನೆ ಕಪೂರ್ ನಿರ್ಮಾಣ ಮಾಡಿದ್ದಾರೆ.

English summary
After 'Mom' film, Bollywood Actress Sridevi will be start work in 'Mr India 2' the sequel of her and Anil Kapoor starrer 'Mr. India' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada