»   » ಟ್ರೈಲರ್: ಭಾವುಕತೆಯಲ್ಲಿ ಸಿಲುಕಿಸುವ ಮಗಳ ರಕ್ಷಣೆಯ 'ಮಾಮ್'

ಟ್ರೈಲರ್: ಭಾವುಕತೆಯಲ್ಲಿ ಸಿಲುಕಿಸುವ ಮಗಳ ರಕ್ಷಣೆಯ 'ಮಾಮ್'

Posted By:
Subscribe to Filmibeat Kannada

ಬಾಲಿವುಡ್ ಅಂಗಳದಲ್ಲಿ ಕೇವಲ ಫಸ್ಟ್ ಲುಕ್ ನಿಂದಲೇ ಕುತೂಹಲ ಹೆಚ್ಚಿಸಿದ್ದ ಶ್ರೀದೇವಿ ಅಭಿನಯದ 'ಮಾಮ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.[ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?]

'ಮಾಮ್' ಚಿತ್ರದ ಮೊದಲ ಲುಕ್ ಬಿಡುಗಡೆ ಆದ ಮೊದಲ ದಿನದಿಂದಲೂ ಬಾಲಿವುಡ್ ಸಿನಿಪ್ರಿಯರನ್ನು ಕಾಡುತ್ತಿದ್ದ ಚಿತ್ರ. ಈಗ ಟ್ರೈಲರ್ ನಲ್ಲಿನ ಹಲವು ಸಸ್ಪೆನ್ಸ್ ಮತ್ತು ಸೆಂಟಿಮೆಂಟ್ ದೃಶ್ಯಗಳಿಂದ ಸಿನಿಮಾ ನೋಡುವ ಕಾತುರತೆಯನ್ನು ಮತ್ತಷ್ಟು ಹೆಚ್ಚಾಗಿಸಿದೆ. ಮೊನ್ನೆಯಷ್ಟೆ ಬಿಡುಗಡೆ ಆಗಿರುವ 'ಮಾಮ್' ಟ್ರೈಲರ್ 18 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

Watch Sridevi Starrer 'Mom' Trailer

ಟ್ರೈಲರ್ ನಲ್ಲಿ ಶ್ರೀದೇವಿ ಯವರು ಮಗಳ ರಕ್ಷಣೆಗಾಗಿ ಹೆಣಗಾಡುವ ತಾಯಿಯಾಗಿ ತಮ್ಮ ಸಂಭಾಷಣೆಯಿಂದ ನೋಡುಗರನ್ನು ಭಾವುಕತೆಯಲ್ಲಿ ಸಿಲುಕಿಸಿದ್ದಾರೆ. ಈ ಚಿತ್ರ ಅವರ 300 ನೇ ಸಿನಿಮಾ ಆಗಿದ್ದು, ತಾಯಿ ಪಾತ್ರದಲ್ಲೂ ಸಖತ್ ಯಂಗ್ ಆಗಿಯೇ ಕಾಣುತ್ತಾರೆ. ಇನ್ನೂ ನವಾಜುದ್ದೀನ್ ಸಿದ್ದಿಕಿ ರವರು ದಯಾ ಶಂಕರ್ ಕಪೂರ್ ಎಂಬ ಪಾತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.[3 ಭಾಷೆಗಳಿಗೆ ಡಬ್ ಆಗಲಿದೆ ಶ್ರೀದೇವಿ ಅಭಿನಯದ 'ಮಾಮ್']

Watch Sridevi Starrer 'Mom' Trailer

ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗೂ ಡಬ್ ಆಗಲಿರುವ 'ಮಾಮ್' ಚಿತ್ರಕ್ಕೆ ರವಿ ಉಡ್ಯಾವಾರ್ ಆಕ್ಷನ್ ಕಟ್ ಹೇಳಿದ್ದು, ಬೋನೆ ಕಪೂರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. 'ಮಾಮ್' ಜುಲೈ 7 ರಂದು ತೆರೆಕಾಣಲಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Bollywood Actress Sridevi Starrer Hindi Movie 'Mom' Trailer Released. This Movie Directed by Ravi Udyawar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada