»   » ಉದ್ಯಮಿ ಕೈಹಿಡಿಯಲಿರುವ ಹೇಮಾ ಮಾಲಿನಿ ಪುತ್ರಿ

ಉದ್ಯಮಿ ಕೈಹಿಡಿಯಲಿರುವ ಹೇಮಾ ಮಾಲಿನಿ ಪುತ್ರಿ

Posted By:
Subscribe to Filmibeat Kannada

ಬಾಲಿವುಡ್ ತಾರಾ ಜೋಡಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಪುತ್ರಿ ಅಹಾನಾ ಡಿಯೋಲ್ ಅವರ ವಿವಾಹ ಫೆಬ್ರವರಿ 2, 2014ರಂದು ನಡೆಯಲಿದೆ. ದೆಹಲಿ ಮೂಲದ ಬಿಜಿನೆಸ್ ಮ್ಯಾನ್ ವೈಭವ್ ವೋರಾ ಅವರ ಕೈಹಿಡಿಯಲಿದ್ದಾರೆ ಅಹಾನಾ.

ನಿಶ್ಚಿತಾರ್ಥಕ್ಕೂ ಮೊದಲು ಕೆಲ ತಿಂಗಳ ಕಾಲ ವೈಭವ್ ಜೊತೆ ಅಹಾನಾ ಡೇಟಿಂಗ್ ಮಾಡಿದ್ದರು. ಅಕ್ಕ ಇಷಾ ಡಿಯೋಲ್ ಮದುವೆ ಸಮಯದಲ್ಲಿ ಅಹಾನಾಗೆ ವೈಭವ್ ಪರಿಚಯವಾಗಿದ್ದ. ಅಲ್ಲಿಂದ ಇಬ್ಬರ ನಡುವೆ ಲವ್ ಶುರುವಾಗಿತ್ತು.

ಇವರಿಬ್ಬರ ನಡುವಿನ ಪ್ರೇಮ ವಿವಾಹ ಗಂಭೀರ ಸ್ವರೂಪಕ್ಕೆ ತಿರುಗಿದಾಗ ಎರಡೂ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೇಮಾ ಮಾಲಿನಿ ಅವರ ಜುಹು ನಿವಾಸದಲ್ಲಿ ಜೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಕೇವಲ ಇಬ್ಬರೂ ಕುಟುಂಬಿಕರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತ್ತು.

ಮುಂಬೈ,ದೆಹಲಿಯಲ್ಲಿ ಆರತಕ್ಷತೆ

ಬಳಿಕ ಮದುವೆಗೆ ಹಲವಾರು ಮುಹೂರ್ತಗಳನ್ನು ನಿಗದಿಪಡಿಸಲಾಗಿತ್ತು. ಕಡೆಗೆ ಫೆಬ್ರವರಿ 2, 2014 ಫೈನಲ್ ಆಗಿದೆ. ಮದುವೆ ಬಳಿಕ ಮುಂಬೈ ಮತ್ತು ದೆಹಲಿಯಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಪ್ರದಾಯದ ಬಗ್ಗೆ ಇನ್ನೂ ಗೊಂದಲ

ಮದುವೆಯನ್ನು ಯಾವ ಸಂಪ್ರದಾಯದಂತೆ ನೆರವೇರಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ.

ಮದುವೆಗೆ ಇನ್ನೂ ಮೂರು ತಿಂಗಳು ಬಾಕಿ

ಮದುವೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದರೂ ಈಗಲೇ ಭರ್ಜರಿ ತಯಾರಿ ನಡೆಯುತ್ತಿದೆ.

ವಸ್ತ್ರ, ಚಿನ್ನಾಭರಣ ಖರೀದಿಯಲ್ಲಿ ಬಿಜಿ

ಹೇಮಾ ಮಾಲಿನಿ ಹಾಗೂ ಅವರ ಮತ್ತೊಬ್ಬ ಪುತ್ರಿ ಇಷಾ ಡಿಯೋಲ್ ಈಗಾಗಲೆ ಮದುವೆಗೆ ಬೇಕಾದ ವಸ್ತ್ರ, ಚಿನ್ನಾಭರಣ ಖರೀದಿಯಲ್ಲಿ ಬಿಜಿಯಾಗಿದ್ದಾರೆ.

ಸದಾ ಬಣ್ಣದ ಜಗತ್ತಿನಿಂದ ದೂರ ಉಳಿದ ಅಹಾನಾ

ಇನ್ನು ಅಹಾನಾ ವಿಚಾರಕ್ಕೆ ಬರುವುದಾದರೆ, ಅಪ್ಪ ಅಮ್ಮ ಬಾಲಿವುಡ್ ಚಿತ್ರರಂಗದಲ್ಲಿದ್ದರೂ ಸದಾ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದಾರೆ.

ಸಾಕಷ್ಟು ಸ್ಟೇಜ್ ಶೋಗಳನ್ನು ಕೊಟ್ಟಿದ್ದಾರೆ

ಭಾರತ ಹಾಗೂ ವಿದೇಶಗಳಲ್ಲಿ ಸಾಕಷ್ಟು ಸ್ಟೇಜ್ ಶೋಗಳನ್ನು ಅಮ್ಮ ಹಾಗೂ ಅಕ್ಕನ ಜೊತೆ ಅಹಾನಾ ನಡೆಸಿಕೊಟ್ಟಿದ್ದಾರೆ.

ಅಕ್ಕ ಇಷಾ ಡಿಯೋಲ್ ಗೆ ಬಣ್ಣದ ಜಗತ್ತಿನ ನಂಟು

ಅಕ್ಕ ಇಷಾ ಡಿಯೋಲ್ ಬಣ್ಣದ ಜಗತ್ತಿಗೆ ಅಡಿಯಿಟ್ಟರೂ ಅಹಾನಾ ಮಾತ್ರ ದೂರ ಇದ್ದರು.

ನಿರ್ದೇಶಕಿ ಆಗಬೇಕೆಂಬ ಕನಸು ನೆರವೇರಲಿಲ್ಲ

ನಟಿಯಾಗುವುದಕ್ಕಿಂತಲೂ ಹೆಚ್ಚಾಗಿ ಅವರಿಗೆ ನಿರ್ದೇಶನ ಮೇಲೆ ಆಸಕ್ತಿ ಇತ್ತು. ಆದರೆ ನಿರ್ದೇಶಕಿ ಆಗಬೇಕೆಂಬ ಕನಸು ನೆರವೇರಲಿಲ್ಲ.

English summary
Hema Malini and Dharmendra's younger daughter Ahana Deol, who got engaged to her boyfriend Vaibhav Vora on June 22 at their Juhu home in a private ceremony this year will be getting married on February 2, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada