For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?

  By ಸೋನು ಗೌಡ
  |

  ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಮತ್ತು ರಣಬೀರ್ ಕಪೂರ್ ಅವರು ಇದೇ ಮೊದಲ ಬಾರಿಗೆ 'ಏ ದಿಲ್ ಹೈ ಮುಷ್ಕಿಲ್' ಎಂಬ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಪಕ್ಕಾ ರೋಮ್ಯಾಂಟಿಕ್ ಸಿನಿಮಾದಲ್ಲಿ ನಟಿ ಐಶ್ವರ್ಯ ರೈ ಅವರು ನಟ ರಣಬೀರ್ ಕಪೂರ್ ನಡುವೆ ಲಿಪ್ ಲಾಕ್ ಸೀನ್ ಒಂದಿದ್ದು, ಇದಕ್ಕೆ ಐಶ್ವರ್ಯ ರೈ ಅವರು 'ನೋ' ಎಂದಿದ್ದಾರೆ.

  ಇತ್ತೀಚೆಗೆ ನಟಿ ಐಶ್ವರ್ಯ ರೈ ಅವರು ಹೆಚ್ಚಾಗಿ ಸಾದಾ-ಸೀದಾ ಪಾತ್ರಗಳಲ್ಲಿ ಮಾತ್ರ ತೆರೆಯ ಮೇಲೆ ಮಿಂಚುತ್ತಿರುವುದರಿಂದ ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

  ಐಶ್ ಅವರು ಅಂತಹ ದೃಶ್ಯಗಳಲ್ಲಿ ನಟಿಸಲು ಹಿಂದೆ-ಮುಂದೆ ನೋಡಿದಾಗ ತಲೆ ಕೆಡಿಸಿಕೊಳ್ಳದ ನಿರ್ದೇಶಕ ಕರಣ್ ಜೋಹರ್ ಅವರು ಒಂದೊಳ್ಳೆ ಐಡಿಯಾ ಮಾಡಿದ್ದಾರೆ.[ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್]

  ರೋಮ್ಯಾಂಟಿಕ್ ಚಿತ್ರ ಆಗಿರುವುದರಿಂದ ಅಂತಹ ದೃಶ್ಯ ಇರಲೇಬೇಕು ಎಂದು ಇದೀಗ ನಿರ್ದೇಶಕ ಕರಣ್ ಲಿಪ್ ಲಾಕ್ ಸೀನ್ ಬದಲಾಗಿ ನಟ ರಣಬೀರ್ ಮತ್ತು ನಟಿ ಐಶ್ವರ್ಯ ಅವರು ರೋಮ್ಯಾಂಟಿಕ್ ಆಗಿ ಚಾಕಲೇಟು ತಿನ್ನುವ ದೃಶ್ಯವನ್ನು ಶೂಟ್ ಮಾಡಿದ್ದಾರೆ.[ರಣಬೀರ್ ಜೊತೆಗೆ ಅನುಷ್ಕಾ ಶರ್ಮಾ ಮುತ್ತಿನ ಮಳೆ]

  ಇನ್ನು ಚಿತ್ರದಲ್ಲಿ ಐಶ್-ರಣಬೀರ್ ಮಾತ್ರವಲ್ಲದೇ, ನಟಿ ಅನುಷ್ಕಾ ಶರ್ಮಾ ಮತ್ತು ನಟ ಫವಾದ್ ಖಾನ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸುಮಾರು 3 ವರ್ಷಗಳ ನಂತರ ನಿರ್ದೇಶಕರ ಕ್ಯಾಪ್ ತೊಟ್ಟಿರುವ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಮೂಲಕ ಮತ್ತೊಂದು ಲವ್ ಟ್ರ್ಯಾಕ್ ಗೆ ಮುನ್ನುಡಿ ಬರೆಯಲಿದ್ದಾರೆ.

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಪೋಸ್ಟರ್

  ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಪೋಸ್ಟರ್

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಶೂಟಿಂಗ್ ಸ್ಟಿಲ್ಸ್

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಶೂಟಿಂಗ್ ಸ್ಟಿಲ್ಸ್

  -ಶೂಟಿಂಗ್ ಸ್ಪಾಟ್ ನಲ್ಲಿ ಅನುಷ್ಕಾ

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಶೂಟಿಂಗ್ ಸ್ಟಿಲ್ಸ್

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಶೂಟಿಂಗ್ ಸ್ಟಿಲ್ಸ್

  -'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಪೋಸ್ಟರ್

  -ಶೂಟಿಂಗ್ ಸ್ಪಾಟ್ ನಲ್ಲಿ ಅನುಷ್ಕಾ ರಣಬೀರ್

  English summary
  Bollywood Actress Aishwarya Rai Bachchan and Ranbir Kapoor are working together for the first time in 'Ae Dil Hai Mushkil'. Aishwarya and Ranbir have shot for a steamy scene in the movie. "The scene has been shot in a very aesthetic manner. It has Ash and Ranbir eating chocolate off each other. The movie is directed by Karan Johar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X