For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿಗೆ ತಾಯಿ ಆಗುತ್ತಿದ್ದಾರಾ ನಟಿ ಐಶ್ವರ್ಯ ರೈ?

  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಐಶ್ವರ್ಯ ಮತ್ತೆ ಸುದ್ದಿಯಾಗಿರುವುದು ಸಿನಿಮಾ ವಿಚಾರಕ್ಕಾಗಲಿ ಅಥವಾ ಯಾವುದೋ ಖಾಸಗಿ ಕಾರ್ಯಕ್ರಮದಲ್ಲಾಗಲಿ ಅಲ್ಲ. ಬಚ್ಚನ್ ಸೊಸೆ ಮತ್ತೆ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಈಗ ಬಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ.

  ಹೌದು, ಐಶ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂಬ ಹಾಟ್ ಸುದ್ದಿಯೊಂದು ಹರಿದಾಡುತ್ತಿದೆ. ಅದಕ್ಕೆ ಕಾರಣ ಐಶ್ವರ್ಯ ರೈ ಅವರ ಹೊಸ ಫೋಟೋ. ಆ ಫೋಟೋವನ್ನು ನೋಡಿದ ಅಭಿಮಾನಿಗಳು ಐಶ್ವರ್ಯ ಮತ್ತೆ ತಾಯಿಯಾಗುತ್ತಿದ್ದಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ.

  ಇದಕ್ಕಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ: ಕಾರಣ ಏನು.?

  ಇತ್ತೀಚಿಗಷ್ಟೆ ಐಶ್ ಮತ್ತು ಅಭಿಷೇಕ್ ಇಬ್ಬರು ಹಾಲಿಡೇ ಎಂಜಾಯ್ ಮಾಡಲು ಗೋವಾ ಬೀಚ್ ಗೆ ತೆರಳಿದ್ದರು. ಪತಿ ಅಭಿಷೇಕ್ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಫೋಟೋಗ್ರಫರ್ ಒಬ್ಬರು ಸೆರೆಹಿಡಿದ ಫೋಟೋ ಇದಕ್ಕೆಲ್ಲಾ ಕಾರಣವಾಗಿದ್ದು ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

  ಫೋಟೋದಲ್ಲಿ ಐಶ್ ಗೆ ಸ್ವಲ್ಪ ಹೊಟ್ಟೆ ಕಾಣುತ್ತಿದೆ, ಅದನ್ನು ಗಮನಿಸಿದ ಅಭಿಮಾನಿಗಳು ಐಶ್ವರ್ಯ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ ಅಂತ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಸುರಿಮಳೆ ಸುರಿದ್ದಾರೆ. ಆದ್ರೆ ಈ ಬಗ್ಗೆ ಐಶ್ ಆಗಲಿ ಅಭಿಷೇಕ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಅಂದ್ಹಾಗೆ, ಇದು ಸುಳ್ಳು ಸುದ್ದಿ ಎನ್ನುತ್ತಿವೆ ಐಶ್ವರ್ಯ ರೈ ಆಪ್ತ ಮೂಲಗಳು. ಆ ಫೋಟೋವಿನ ಒಂದು ಆಯಾಮದಿಂದ ಐಶ್ ಹೀಗೆ ಕಾಣುತ್ತಿದ್ದಾರೆ ಅಷ್ಟೆ. ಐಶ್ವರ್ಯ ಗರ್ಭಿಣಿ ಅಲ್ಲ ಎಂದು ಹೇಳುತ್ತಿದ್ದಾರೆ. 2007ರಲ್ಲಿ ಅಭಿಷೇಕ್ ಜೊತೆ ಹಸೆಮಣೆ ಏರಿದ ಐಶ್ವರ್ಯ 2011ರಲ್ಲಿ ಮೊದಲ ಮಗು ಅರಾಧ್ಯಾ ಬಚ್ಚನ್ ಗೆ ಜನ್ಮ ನೀಡಿದ್ರು. ನಂತರ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಐಶ್ ಕೊನೆಯದಾಗಿ 2018ರಲ್ಲಿ ರಿಲೀಸ್ ಆದ 'ಫನ್ನಿ ಖಾನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Aishwarya Rai Bachchan is pregnant with second child? Rumours going on Aishwarya pregnancy after pic from Goa holiday goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X