»   » ಬಿದಿಗೆ ಚಂದ್ರಮನಂತಾದ ತಾರೆ ಐಶ್ವರ್ಯಾ ರೈ

ಬಿದಿಗೆ ಚಂದ್ರಮನಂತಾದ ತಾರೆ ಐಶ್ವರ್ಯಾ ರೈ

Posted By:
Subscribe to Filmibeat Kannada

ಬಾಲಿವುಡ್ ತಾರೆ ಐಶ್ವರ್ಯಾ ರೈ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ಧಡೂತಿ ದೇಹದ ತೂಕವನ್ನು ಇಳಿಸಿಕೊಂಡು ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಬಳುಕುವ ಬಳ್ಳಿಯಂತಿದ್ದ ತಾರೆ ಕುಂಬಳಕಾಯಿಯಂತಾಗಿ ಈಗ ಮತ್ತೆ ನವಿಲುಕೋಸಿನಂತೆ ನಳನಳಿಸುತ್ತಿದ್ದಾರೆ.

ಬಾಣಂತನದ ಸಿಹಿ ದಿನಗಳನ್ನು ಕಳೆದು ಮತ್ತೆ ಕ್ಯಾಮೆರಾಗೆ ತಮ್ಮ ಮುಖಾರವಿಂದ ತೋರಿರುವ ಅವರು ಈಗ ಬಿದಿಗೆ ಚಂದ್ರಮನಂತೆ ಗೋಚರಿಸುತ್ತಿದ್ದಾರೆ. ಚಿನ್ನಾಭರಣ ತಯಾರಿಕಾ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅವರ ಲೇಟಸ್ಟ್ ಫೋಟೋ ಎಲ್ಲರ ಕಣ್ಣು ಕುಕ್ಕುತ್ತಿದೆ.


ಇದು ಫೋಟೋ ಗಿಮ್ಮಿಕ್ಕೇ ಅಥವಾ ನಿಜವಾಗಿಯೂ ಅವರು ತೆಳ್ಳಗಾಗಿದ್ದಾರೆ ಎಂಬುದು ಐಶ್ವರ್ಯಾ ರೈ ಮಾಧ್ಯಮಗಳ ಮುಂದೆ ಬಂದಾಗಲಷ್ಟೇ ಸತ್ಯ ಗೊತ್ತಾಗಬಹುದು. ಅಲ್ಲಿಯವರೆಗೂ ಈ ಬಳುಕುವ ಬಳ್ಳಿಯಂತಿರುವ ತೆಳ್ಳಗಿನ ಐಶ್ವರ್ಯಾರನ್ನು ನಂಬಬಹುದು.

ಹೆಣ್ಣುಮಗುವಿನ ತಾಯಿಯಾದ ಬಳಿಕ ಐಶ್ವರ್ಯಾ ರೈ ಐದೇ ತಿಂಗಳಲ್ಲಿ ಸಿಕ್ಕಾಪಟ್ಟೆ ದಪ್ಪಗಾಗಿದ್ದರು. ಈ ಬಗ್ಗೆ ಆಕೆಯ ಅಭಿಮಾನಿಗಳು ತೀವ್ರವಾಗಿ ಭ್ರಮನಿರಸನಕ್ಕೆ ಒಳಗಾಗಿದ್ದರು. ಅಯ್ಯೋ ನಮ್ಮ ನೆಚ್ಚಿನ ತಾರೆಗೆ ಹೀಗಾಗೋಯ್ತಲ್ಲಾ ಎಂಬ ಅಳುಕು ಅವರದು.

ಈಗ ಮತ್ತೆ ತಮ್ಮ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. ದಕ್ಷಿಣ ಭಾರತದ ಜನಪ್ರಿಯ ಚಿನ್ನಾಭರಣ ಸಂಸ್ಥೆಯ ಜಾಹೀರಾತು ಇದಾಗಿದ್ದು, ಎರಡು ವಾರಗಳ ಕಾಲ ಶ್ರಮಿಸಿ ಈ ಜಾಹೀರಾತನ್ನು ಚಿತ್ರೀಕರಿಸಲಾಗಿದೆಯಂತೆ.

ಆರು ತಿಂಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಇದೇ ರೀತಿಯ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಅದಾಗಿ ಒಂದು ವರ್ಷದ ಬಳಿಕ ಮತ್ತೆ ಜಾಹೀರಾತಿಗಾಗಿ ಬಣ್ಣ ಹಚ್ಚಿದ್ದಾರೆ. ಹಿಂದಿಗಿಂತಲೂ ಇಂದೇನೇ ಐಶ್ವರ್ಯಾ ರೈ ಚೆಂದವೂ ಎಂಬಂತೆ ಜಾಹೀರಾತು ಮೂಡಿಬಂದಿದೆ ಎಂದಿದ್ದಾರೆ ಆಕೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಕಿರಣ್ ಡಿಯೋಹಾನ್ಸ್. (ಏಜೆನ್ಸೀಸ್)

English summary
Aishwarya Rai Bachchan is back with a bang! Recently, Aishwarya shot a print ad for a jewellery brand. By seeing Aishwarya's recent picture one can easily say that the diva has lost oodles of weight and is looking stunningly hot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada