Don't Miss!
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಶ್ವರ್ಯ ರೈ ಕೈ ಬಿಟ್ಟ ಸಿನಿಮಾಗಳು ದೀಪಿಕಾ, ರಾಣಿ ಮುಖರ್ಜಿ, ವಿದ್ಯಾ ಬಾಲನ್‌ಗೆ ವರ: ಆ ಸಿನಿಮಾಗಳ್ಯಾವುವು?
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ವಯಸ್ಸು 48 ದಾಟಿದರೂ ಐಶ್ವರ್ಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಮಾಜಿ ವಿಶ್ವ ಸುಂದರಿಯ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಐಶ್ವರ್ಯಾ ರೈ ಬಚ್ಚನ್ ಕೆಲವು ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ. ಇವು ಐಶ್ವರ್ಯಾ ವೃತ್ತಿ ಜೀವನದ ಅತೀ ದೊಡ್ಡ ತಪ್ಪು ಎಂದು ಸಾಬೀತಾಗಿದೆ.
Recommended Video
ಐಶ್ವರ್ಯಾ ರೈ ಬಚ್ಚನ್ ಸದ್ಯ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಈ ಮೂಲಕ ಮಾಜಿ ವಿಶ್ವ ಸುಂದರಿಯನ್ನು ಮತ್ತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೋಡಬಹುದಾಗಿದೆ. ಆದರೆ, ಐಶ್ವರ್ಯಾ ರೈ ರಿಜೆಕ್ಟ್ ಮಾಡಿದ ಕೆಲವು ಸಿನಿಮಾಗಳು ಈ ನಟಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬಹುದಾಗಿತ್ತು. ಐಶ್ವರ್ಯಾ ಕೈ ಬಿಟ್ಟ ಸಿನಿಮಾಗಳು ಸೂಪರ್ ಹಿಟ್ ಆದ ಪಟ್ಟಿ ಇಲ್ಲಿದೆ.

ದೀಪಿಕಾ ಪಡುಕೋಣೆ ನಟಿಸಿದ 'ಬಾಜಿರಾವ್ ಮಸ್ತಾನಿ'
ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ಬಾಜಿ ರಾವ್ ಮಸ್ತಾನಿ ಬಾಲಿವುಡ್ ಬಾಕ್ಸಾಫೀಸ್ ಅನ್ನು ಚಿಂದಿ ಉಡಾಯಿಸಿತ್ತು. ಆದರೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ದೀಪಿಕಾ ಬದಲು ಮೊದಲು ಐಶ್ವರ್ಯಾ ರೈ ಬಚ್ಚನ್ ಗೆ ಆಫರ್ ನೀಡಲಾಗಿತ್ತು. ಆದರೆ, ಐಶ್ವರ್ಯಾ ರೈ ಈ ಸಿನಿಮಾವನ್ನು ಕೈ ಬಿಟ್ಟಿದ್ದರು. ಮಸ್ತಾನಿ ಪಾತ್ರಕ್ಕೆ ಐಶ್ವರ್ಯಾ ವಯಸ್ಸು ಕೂಡ ಒಂದು ಕಾರಣವಾಗಿತ್ತು. ರಣ್‌ವೀರ್ ಸಿಂಗ್ ಮುಂದೆ ಐಶ್ ಹಿರಿಯಳಂತೆ ಕಾಣುತ್ತಿದ್ದರು. ಈ ಕಾರಣಕ್ಕೆ ಸಿನಿಮಾದಿಂದ ಹೊರ ಬಂದಿದ್ದರು. ಬಳಿಕ ಈ ಪಾತ್ರ ದೀಪಿಕಾ ಪಡುಕೋಣೆ ಪಾಲಾಯ್ತು.

ಅಕ್ಷಯ್ 'ಭೂಲ್ ಬುಲಯ್ಯ' ರಿಜೆಕ್ಟ್
ಐಶ್ವರ್ಯಾ ರೈ ಕೈ ಬಿಟ್ಟ ಸಿನಿಮಾಗಳಲ್ಲಿ ಭೂಲ್ ಬುಲಯ್ಯ ಕೂಡ ಒಂದು. ಅಕ್ಷಯ್ ಕುಮಾರ್ ನಟಿಸಿದ ಈ ಸಿನಿಮಾ ಕನ್ನಡದ 'ಆಪ್ತಮಿತ್ರ' ರಿಮೇಕ್. ಬಾಲಿವುಡ್‌ನಲ್ಲೂ ಸೂಪರ್ ಹಿಟ್ ಆಗಿದ್ದ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸಬೇಕಿತ್ತು. ಮಂಜುಲಿಕಾ ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ನಟಿಸಬೇಕಿತ್ತು. ಆದರೆ, ಈ ಸಿನಿಮಾದಲ್ಲಿ ನಟಿಸಲು ಐಶ್ ನಿರಾಕರಿಸಿದ್ದರು. ಬಳಿಕ ಈ ಸಿನಿಮಾದ ಪಾತ್ರ ವಿದ್ಯಾ ಬಾಲನ್ ಪಾಲಾಯ್ತು. ವಿದ್ಯಾ ಬಾಲನ್ ವೃತ್ತಿ ಬದುಕಿನ ಅತ್ಯುತ್ತಮ ಸಿನಿಮಾಗಳಲ್ಲೊಂದಾಯ್ತು.

ರಾಣಿ ಮುಖರ್ಜಿ ಬದಲು ಐಶ್ವರ್ಯಾ ರೈ
ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ 'ಕುಚ್ ಕುಚ್ ಹೋತಾ ಹೇ' ಈ ಸಿನಿಮಾದಲ್ಲಿ ಶಾರುಖ್ ಖಾನ್, ಕಾಜೋಲ್, ರಾಣಿ ಮುಖರ್ಜಿ ನಟಿಸಿದ್ದು, ಕರಣ್ ಜೋಹರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದರಲ್ಲಿ ರಾಣಿ ಮುಖರ್ಜಿ ನಿರ್ವಹಿಸಿದ್ದ ಪಾತ್ರಕ್ಕೆ ಮೊದಲು ಐಶ್ವರ್ಯಾ ರೈ ಆಯ್ಕೆಯಾಗಿದ್ದರು. ಆದರೆ, ಕೇವಲ ಮೊದಲಾರ್ಧಕ್ಕೆ ಸೀಮಿತವಾಗಿದ್ದ ಪಾತ್ರವನ್ನು ಐಶ್ ತಿರಸ್ಕರಿಸಿದ್ದರು. ಈ ಸಿನಿಮಾ ಮುಖರ್ಜಿ ಬಾಲಿವುಡ್ ಬದುಕನ್ನೇ ಬದಲಿಸಿತ್ತು.

'ರಾಜಾ ಹಿಂದೂಸ್ತಾನಿ' ರಿಜೆಕ್ಟ್
ಆಮಿರ್ ಖಾನ್ ಹಾಗೂ ಕರೀಶ್ಮಾ ಕಪೂರ್ ನಟಿಸಿದ 'ರಾಜಾ ಹಿಂದೂಸ್ತಾನಿ' ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು. ಕರೀಶ್ಮಾ ಕಪೂರ್ ನಟಿಸಿದ ಪಾತ್ರದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಳ್ಳಬೇಕಿತ್ತು. ಕರೀಶ್ಮಾ ಗಿಂತಲೂ ಐಶ್ ನಟಿಸಿದ್ದರೆ ಮತ್ತಷ್ಟು ಮೆರೆಗು ಸಿಗುತ್ತಿತ್ತೋ ಏನೋ? ಆದರೆ, ಐಶ್ವರ್ಯಾ ನಟಿಸಲು ಒಪ್ಪಲಿಲ್ಲ.

ಮುನ್ನಭಾಯ್ ಚಿತ್ರ ಕೈ ಬಿಟ್ಟ ಐಶ್
ಸಂಜಯ್ ದತ್ ವೃತ್ತಿ ಬದುಕಿಗೆ ಹೊಸ ಮೆರುಗು ಕೊಟ್ಟ ಸಿನಿಮಾ 'ಮುನ್ನಭಾಯ್ ಎಂಬಿಬಿಎಸ್'. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಸಿನಿಮಾ. ಈ ಸಿನಿಮಾದಲ್ಲಿ ನಟಿಸಿದ್ದ ಗ್ರೇಸಿ ಸಿಂಗ್ ಪಾತ್ರದಲ್ಲಿ ಐಶ್ವರ್ಯಾ ರೈ ಗೆ ಅಪ್ರೋಚ್ ಮಾಡಲಾಗಿತ್ತು. ಆದರೆ, ಐಶ್ ಒಪ್ಪಲಿಲ್ಲ.

'ವೀರ್ ಜಾರಾ' ಸಿನಿಮಾದಲ್ಲಿ ಐಶ್
ಶಾರುಖ್ ಖಾನ್, ಪ್ರೀತಿ ಜಿಂಟಾ ಹಾಗೂ ರಾಣಿ ಮುಖರ್ಜಿ ನಟಿಸಿದ್ದ 'ವೀರ್ ಝಾರಾ' ಸಿನಿಮಾದಲ್ಲೂ ಐಶ್ವರ್ಯಾ ರೈ ನಟಿಸಲು ಯಶ್ ರಾಜ್ ಫಿಲಂಸ್ ಆಫರ್ ನೀಡಿತ್ತು. ವಕೀಲೆ ಪಾತ್ರದಲ್ಲಿ ರಾಣಿ ಮುಖರ್ಜಿ ನಟಿಸಿದ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಬೇಕಿತ್ತು. ಆದರೆ, ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಈ ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿತ್ತು.