»   » ಐಶ್ವರ್ಯ ರೈ, ಸೋನಂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೀಗೆ..

ಐಶ್ವರ್ಯ ರೈ, ಸೋನಂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೀಗೆ..

Posted By:
Subscribe to Filmibeat Kannada

ಪ್ರತಿಷ್ಠಿತ ಕಾನ್ ಚಿತ್ರೋತ್ಸವಕ್ಕೆ ದಶಕದಿಂದ ಭಾರತದ ಜನಪ್ರಿಯ ತಾರೆ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಭಾಗವಹಿಸುತ್ತಾ ಬಂದಿದ್ದಾರೆ. ಈಗ ಮತ್ತೊಮ್ಮೆ ರೆಡ್ ಕಾರ್ಪೆಟ್ ನಲ್ಲಿ ನಡೆಯಲು ಸಜ್ಜಾಗಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಪ್ರತಿಯೊಬ್ಬರು ತಮ್ಮ ಡ್ರೆಸ್ಸಿಂಗ್ ಬಗ್ಗೆ ತುಂಬಾ ಗಮನ ಹರಿಸುತ್ತಾರೆ. ಅದರಲ್ಲೂ ಒಂದು ಮಗುವಿನ ತಾಯಿಯಾಗಿರುವ ಐಶ್ವರ್ಯ ತನ್ನ ಬಳಕುವ ಮೈಮಾಟ ಮತ್ತು ಆಕರ್ಷಕ ಉಡುಗೆಯಿಂದ ಮತ್ತಷ್ಟು ಚೆಲುವೆಯಾಗಿ ಕಂಡು ನೋಡುಗರನ್ನು ಬೆರಗಾಗಿಸಲು ಸಜ್ಜಾಗಿದ್ದಾರೆ.

ಐಶ್ವರ್ಯಾ ಇದುವರೆಗೆ ಹದಿಮೂರು ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ. ಭಾನುವಾರ (ಮೇ 17) ನಡೆಯಲಿರುವ 'ರೆಡ್ ಕಾರ್ಪೆಟ್ ವಾಕ್' ನಲ್ಲಿ ಭಾಗವಹಿಸಲು ಐಶ್ವರ್ಯ ಮಗಳು ಆರಾಧ್ಯ ಜೊತೆ ಈಗಾಗಲೇ ಫ್ರಾನ್ಸ್ ದೇಶಕ್ಕೆ ಇಳಿದಿದ್ದಾರೆ.

2012ರ ಕಾನ್ ಚಿತ್ರೋತ್ಸವದಲ್ಲಿ " ಐಶ್ ದಪ್ಪಗಾಗಿದ್ದಾಳೆ " ಎಂದು ಬ್ರೇಕಿಂಗ್ ನ್ಯೂಸ್ ಆಗಿತ್ತು. ಈಗ ಐಶ್ವರ್ಯ ತನ್ನ ಬಳಕುವ ಮೈಮಾಟವನ್ನು ಮರಳಿ ಪಡೆದಿದ್ದಾರೆ.

ಬಾಲಿವುಡ್ ಚಿತ್ರೋದ್ಯಮದ ಮತ್ತೊಬ್ಬ ಚೆಲುವೆ ಸೋನಂ ಕಪೂರ್ ಕೂಡಾ ರೆಡ್ ಕಾರ್ಪೆಟ್ ವಾಕ್ ನಲ್ಲಿ ಭಾಗವಹಿಸಲು ಫ್ರಾನ್ಸ್ ನಲ್ಲಿದ್ದಾರೆ.

ಸೋನಂ ಮತ್ತು ಐಶ್ವರ್ಯ ಫ್ರಾನ್ಸ್ ದೇಶಕ್ಕೆ ತೆರಳಲು ವಿಮಾನನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೀಗೆ..

ಐಶ್ವರ್ಯ ಮಗಳ ಜೊತೆ

ಕಾನ್ ಚಿತ್ರೋದ್ಯಮದಲ್ಲಿ ಭಾಗವಹಿಸಲು ಐಶ್ವರ್ಯಾ ಮಗಳು ಆರಾಧ್ಯ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಹೀಗೆ..

ಸೋನಂ ಕಪೂರ್

ನಟಿ ಸೋನಂ ಕಪೂರ್ L'Oreal ಕಂಪೆನಿಯ ಪರವಾಗಿ ಕಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಐಶ್ವರ್ಯ

ಐಶ್ವರ್ಯ ರೈ ಬಚ್ಚನ್ ರೆಡ್ ಕಾರ್ಪೆಟ್ ವಾಕ್ ಭಾನುವಾರದಂದು (ಮೇ 17) ನಡೆಯಲಿದೆ.

ಇದು ಹದಿನಾಲ್ಕನೇ ಕಾನ್ ವಾಕ್

ಐಶ್ವರ್ಯಾಗೆ ಇದು ಹದಿನಾಲ್ಕನೇ ರೆಡ್ ಕಾರ್ಪೆಟ್ ವಾಕ್. ಮದುವೆಯಾದ ನಂತರ ಐಶ್ವರ್ಯ ಈ ಕಾರ್ಯಕ್ರಮದಲ್ಲಿ ಐದು ಬಾರಿ ಭಾಗವಹಿಸಿದ್ದಾರೆ.

ಸೋನಂಗೆ ಇದು ಐದನೇ ಬಾರಿ

ಸೋನಂ ಕಪೂರ್ 2010ರಿಂದ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ವಾಕ್ ನಲ್ಲಿ ಭಾಗವಹಿಸುತ್ತಿದ್ದಾರೆ.

English summary
Pictures of Aishwarya Rai Bachchan and Sonam Kapoor spotted in the airport to attend red carpet of the Cannes Film Festival 2015.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X