»   » ಶೀಘ್ರದಲ್ಲೇ ತಾರೆ ಐಶ್ವರ್ಯ ರೈ ಸೆಕೆಂಡ್ ಇನ್ನಿಂಗ್ಸ್

ಶೀಘ್ರದಲ್ಲೇ ತಾರೆ ಐಶ್ವರ್ಯ ರೈ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada
ಬಾಲಿವುಡ್ ತಾರೆ ಐಶ್ವರ್ಯ ರೈ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಶೀಘ್ರದಲ್ಲೇ ಐಶ್ವರ್ಯ ಬಾಲಿವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಮ್ಮನಾದ ಬಳಿಕ ಐಶೂ ಚಿತ್ರರಂಗದಿಂದ ದೂರ ಸರಿದಿದ್ದರು. ಅವರು ಮತ್ತೆ ಬಣ್ಣ ಹಚ್ಚುತ್ತಾರೋ ಇಲ್ಲವೋ ಎಂಬ ಅನುಮಾನ ಆಕೆಯ ಅಭಿಮಾನಿಗಳನ್ನು ಕಾಡುತ್ತಿತ್ತು.

ಐಶ್ವರ್ಯ ಏಳು ತಿಂಗಳ ಮಗಳು ಆರಾಧ್ಯ ಈಗ ಬೆಳೆದಿದ್ದಾಳೆ. ಐಶ್ವರ್ಯ ರೈ ಕೂಡ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಈಗ ಒಂದೊಂದೇ ಚಿತ್ರಕತೆಗಳನ್ನು ಕೈಗೆತ್ತಿಕೊಂಡು ಯಾವುದಕ್ಕೆ ಸಹಿ ಹಾಕಬೇಕು ಎಂಬ ಚಿಂತನೆಯಲ್ಲಿದ್ದಾರೆ. ತಮಗೊಪ್ಪುವ ಸೂಕ್ತ ಕತೆ ಸಿಕ್ಕಿದರೆ ಕೂಡಲೆ ಸಹಿ ಹಾಕಲಿದ್ದಾರಂತೆ.

ಶೀಘ್ರದಲ್ಲೇ ನಿರ್ಮಾಪಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಯಾವ ಚಿತ್ರ ಆಯ್ಕೆ ಮಾಡಿಕೊಳ್ಳಬೆಕು ಎಂಬ ಬಗ್ಗೆ ಚರ್ಚಿಸುವ ಸಮಾಚಾರವೂ ಇದೆ. ಅಮ್ಮನಾದ ಬಳಿಕ ಐಶೂ ದೇಹದಲ್ಲಿ ಭಾರಿ ಬದಲಾವಣೆಗಳು ಆಗಿದ್ದವು. ಈಗ ಆಕೆ ಕಸರತ್ತಿಗೆ ಶರಣಾಗಿದ್ದು ದೇಹವನ್ನು ಮತ್ತೆ ಬಳುಕುವ ಬಳ್ಳಿಯಂತೆ ಬಳುಕಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ತಮ್ಮ ದೇಹದ ತೂಕದ ಬಗ್ಗೆ ಕಾಮೆಂಟ್‌ಗಳು ಕೇಳಿಬಂದಾಗಲೂ ಐಶ್ವರ್ಯ ರೈ ತಲೆಕೆಡಿಸಿಕೊಂಡಿರಲಿಲ್ಲ. ತಾಯ್ತನದ ಆನಂದವನ್ನು ಸಂತಸವಾಗಿ ಕಳೆದರು. ತನ್ನ ಮಗಳ ಆರೈಕೆಯನ್ನು ಸ್ವತಃ ಐಶ್ವರ್ಯ ರೈ ಅವರೇ ನೋಡಿಕೊಳ್ಳುತ್ತಿದ್ದಾರಂತೆ. ಇದಕ್ಕಾಗಿ ಯಾರ ಸಹಾಯವನ್ನೂ ಆಕೆ ಪಡೆಯುತ್ತಿಲ್ಲವಂತೆ.

ಮಗುವಾದ ಬಳಿಕ ಐಶ್ವರ್ಯ ರೈ ಡಿಮ್ಯಾಂಡ್ ಕಡಿಮೆ ಆಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅವರ ಮುಂದಿನ ಪ್ರಾಜೆಕ್ಟ್‌ಗಾಗಿ ನಿರ್ಮಾಪಕರು ಕಾಲ್ ಶೀಟ್‌ ಹಿಡಿದು ಅವರ ಮನೆಗೆ ಅಲೆಯುತ್ತಿರುವ ಸುದ್ದಿಯೂ ಇದೆ.

ಈಗ ಐಶ್ವರ್ಯ ರೈ ವೈವಿಧ್ಯಮಯ ಪಾತ್ರಗಳನ್ನು ಬಯಸುತ್ತಿದ್ದಾರೆ. ತಮ್ಮ ವಯಸ್ಸಿಗೆ ಒಪ್ಪುವ, ಜನಪ್ರಿಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕೆಂಬ ಆಸೆಯನ್ನು ಆಕೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಐಶ್ವರ್ಯ ರೈ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗುತ್ತಿರುವುದು ಶಾರುಖ್ ಖಾನ್ ಜೊತೆಗಿನ ಚಿತ್ರದೊಂದಿಗೆ ಎನ್ನಲಾಗಿದೆ.

ಬಂದ ಎಲ್ಲಾ ಆಫರ್‌ಗಳನ್ನು ಒಪ್ಪಿಕೊಳ್ಳದೆ ಒಂದಷ್ಟು ಸಮಯವನ್ನು ತನ್ನ ಮಗಳ ಜೊತೆ ಕಳೆಯುವಂತೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಐಶ್ವರ್ಯ ರೈ ಪುನರಾಗಮನದಿಂದ ಬಾಲಿವುಡ್‌ನಲ್ಲಿ ಮತ್ತೆ ಹೊಸ ಶಕೆ ಆರಂಭವಾಗುವ ನಿರೀಕ್ಷೆಗಳಿವೆ.

ಮದುವೆ ಬಳಿಕ ಸಾಕಷ್ಟು ಸಿನಿಮಾ ತಾರೆಗಳು ಪುನಃ ಬಣ್ಣ ಹಚ್ಚಿಕೊಂಡಿದ್ದರು. ಕನ್ನಡದಲ್ಲಿ ಪ್ರಿಯಾಂಕಾ ಉಪೇಂದ್ರ, ಬಾಲಿವುಡ್‌ನಲ್ಲಿ ಮನಿಷಾ ಕೋಯಿರಾಲ, ಇತ್ತೀಚೆಗೆ ಮದುವೆಯಾದ ಸ್ನೇಹಾ, ದಕ್ಷಿಣದ ತಾರೆ ಮೀನಾ...ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಅವರೆಲ್ಲಾ ನಿರೀಕ್ಷಿಸಿದ ಮಟ್ಟದಲ್ಲಿ ಮತ್ತೆ ಪ್ರೇಕ್ಷಕರನ್ನು ತಲುಪಲಿಲ್ಲ ಎಂಬುದು ಅಷ್ಟೇ ಸತ್ಯ. ಆದರೆ ಐಶೂ ವಿಚಾರದಲ್ಲಿ ಏನಾಗುತ್ತದೋ ಏನೋ ಕಾದು ನೋಡೋಣ. (ಏಜೆನ್ಸೀಸ್)

English summary
Aishwarya Rai would be back soon to entertain her fans. The latest update is that the beautiful lady is reading scripts and would give her nod very soon to a movie which thrills her. She will very soon meet film makers to discuss the projects.
Please Wait while comments are loading...