»   » ರಣಬೀರ್ ಕಪೂರ್ ಗೆ 'ಅಪ್ಪ' ಅಂತ ಕರೆದ ಆರಾಧ್ಯ ಬಚ್ಚನ್

ರಣಬೀರ್ ಕಪೂರ್ ಗೆ 'ಅಪ್ಪ' ಅಂತ ಕರೆದ ಆರಾಧ್ಯ ಬಚ್ಚನ್

Posted By: ಸೋನು ಗೌಡ
Subscribe to Filmibeat Kannada

ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಚಾಕಲೇಟು ಹೀರೋ ರಣಬೀರ್ ಕಪೂರ್ ಅವರು 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಭಯಂಕರ ಹಸಿಬಿಸಿ ಲುಕ್ ನಲ್ಲಿ ಮಿಂಚಿರೋದು ಎಲ್ಲರಿಗೂ ಗೊತ್ತೇ ಇದೆ.

ಇಷ್ಟು ಮಾತ್ರವಲ್ಲದೇ, ಇತ್ತೀಚೆಗೆ ನಡೆದ ಫೋಟೋ ಶೂಟ್ ಸಂದರ್ಭದಲ್ಲಿ ಐಶ್ ಮುದ್ದಾದ ಮಗಳು ಆರಾಧ್ಯ ರಣಬೀರ್ ಕಪೂರ್ ಅವರನ್ನು ಮಿಸ್ ಆಗಿ 'ಪಾಪಾ' ('ಅಪ್ಪ') ಅಂತ ಬೇರೆ ಕರೆದಿದ್ದಾಳಂತೆ.['ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ]

Aishwarya Reveals Aaradhya Thought Ranbir Kapoor Was Her Father

ಅಷ್ಟಕ್ಕೂ ಆಗಿದ್ದಿಷ್ಟೇ, ಮ್ಯಾಗಜೀನ್ ಫೋಟೋ ಶೂಟ್ ಸಂದರ್ಭದಲ್ಲಿ ರಣಬೀರ್ ಕಪೂರ್, ಥೇಟ್ ಅಭಿಷೇಕ್ ಬಚ್ಚನ್ ತರಾನೇ ಕೋಟ್ ಧರಿಸಿ, ಕ್ಯಾಪ್ ತೊಟ್ಟು ನಿಂತಿದ್ದರಂತೆ. ಆವಾಗ ಆರಾಧ್ಯ ಹಿಂಬದಿಯಿಂದ ಹೋಗಿ 'ಅಪ್ಪಾ' ಅಂತ ತಬ್ಬಿಕೊಂಡಳಂತೆ. ತದನಂತರ ಮುಖ ನೋಡಿ ಅಪ್ಪ ಅಲ್ಲ ಅಂತ ಗೊತ್ತಾದ ಕೂಡಲೇ ಸುಮ್ಮನೆ ಮುಗುಳ್ನಕ್ಕು ಸುಮ್ಮನಾದಳಂತೆ.

ಈ ವಿಚಾರವನ್ನು ಹೇಳಿದ್ದು, ಬೇರಾರು ಅಲ್ಲ, ಖುದ್ದು ಐಶ್ವರ್ಯ ರೈ ಅವರೇ ಹೇಳಿಕೊಂಡಿದ್ದಾರೆ. ಇದೀಗ ಮುದ್ದು ಆರಾಧ್ಯ ರಣಬೀರ್ ಅವರ ಜೊತೆ ತುಂಬಾ ಕ್ಲೋಸ್ ಆಗಿ ಬೆರೆಯುತ್ತಿದ್ದಾಳಂತೆ.[18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?]

Aishwarya Reveals Aaradhya Thought Ranbir Kapoor Was Her Father

ಪಾಕ್ ನಟ ಫವಾದ್ ಖಾನ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಈ ಚಿತ್ರದ ಮೇಲೆ ಭಾರಿ ಕಂಟಕ ಎದುರಾಗಿತ್ತು. ಆದ್ರೆ ಇದೀಗ ಗೃಹ ಸಚಿವರ ಕೃಪ ಕಟಾಕ್ಷದಿಂದ ಸಿನಿಮಾ ಬಿಡುಗಡೆಗಿದ್ದ ವಿಘ್ನ ದೂರವಾಗಿದೆ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]

Aishwarya Reveals Aaradhya Thought Ranbir Kapoor Was Her Father

ಕರಣ್ ಜೋಹರ್ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯ ರೈ, ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಫವಾದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

English summary
Aaradhya Bachchan is one of the most loved star kids of Bollywood. Everything about her becomes news. While shooting for a magazine with Actor Ranbir Kapoor, Actress Aishwarya Rai Bachchan revealed that one day, her daughter thought Ranbir was her dad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada