For Quick Alerts
  ALLOW NOTIFICATIONS  
  For Daily Alerts

  ಅಜಯ್ ದೇವಗನ್ ರು.400 ಕೋಟಿ ಒಪ್ಪಂದ

  By Rajendra
  |

  ಬಾಲಿವುಡ್ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅಜಯ್ ದೇವಗನ್ ಭರ್ಜರಿ ಬೇಟೆ ಇದು. ಸ್ಟಾರ್ ಇಂಡಿಯಾ ಚಾನಲ್ ಜೊತೆಗೆ ಅವರು ರು.400 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರ ಮುಂಬರುವ ಚಿತ್ರಗಳ (2018ರ ತನಕ) ಪ್ರಸಾರ ಹಕ್ಕನ್ನು ಕೇವಲ ಸ್ಟಾರ್ ಇಂಡಿಯಾ ವಾಹಿನಿಗೆ ಮಾತ್ರ ನೀಡಿರುವ ಪತ್ರಗಳಿಗೆ ಸಹಿ ಹಾಕಿದ್ದಾರೆ.

  ಅಂದರೆ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಹತ್ತು ಚಿತ್ರಗಳ ಪ್ರಸಾರ ಹಕ್ಕು ಆ ವಾಹಿನಿಗೆ ಸಿಕ್ಕಿದೆ. ಇದರ ಜೊತೆಗೆ ಅವರ ಹಿಂದಿನ ಚಿತ್ರಗಳಾದ ಗಂಗಾಜಲ್, ಸಿಂಗಂ, ಝಮೀನ್ ಹಾಗೂ ಗೋಲ್ ಮಾಲ್ ಚಿತ್ರದ ಪ್ರಸಾರ ಹಕ್ಕುಗಳು ವಾಹಿನಿ ಕೈಸೇರಿವೆ.

  ಈ ಹಿಂದೆ ನಟ ಸಲ್ಮಾನ್ ಖಾನ್ ಇದೇ ರೀತಿಯ ಡೀಲ್ ಮಾಡಿಕೊಂಡಿದ್ದರು. ಈಗ ಅದೇ ಹಾದಿಯಲ್ಲಿ ಅಜಯ್ ದೇವಗನ್ ಹೆಜ್ಜೆ ಹಾಕಿದ್ದಾರೆ. ಸಲ್ಲು ಬಳಿಕ ಈ ಮಟ್ಟದ ಡೀಲ್ ಗೆ ಸಹಿ ಹಾಕುತ್ತಿರುವ ನಟ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ.

  ಐದು ವರ್ಷಗಳ ಈ ಒಪ್ಪಂದದ ಮೂಲಕ ಸ್ಟಾರ್ ಇಂಡಿಯಾ ವಾಹಿನಿಗೆ ಅಜಯ್ ಅಭಿನಯದ ಹತ್ತು ಚಿತ್ರಗಳ ಪ್ರಸಾರ ಹಕ್ಕು ಸಿಗಲಿದೆ. ಅಜಯ್ ದೇವಗನ್ ಅಭಿನಯದ ಬೋಲ್ ಬಚ್ಚನ್, ಸನ್ ಆಫ್ ಸರ್ದಾರ್ ಹಾಗೂ ಗೋಲ್ ಮಾಲ್ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಇವೆಲ್ಲವೂ ರು.100 ಕೋಟಿ ಗಳಿಕೆಯ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿವೆ.

  ನಿರ್ಮಾಣ ಹಂತದಲ್ಲಿರುವ ಸಜಿದ್ ಖಾನ್ ನಿರ್ದೇಶನದ 'ಹಿಮ್ಮತ್ ವಾಲ' ಚಿತ್ರವೂ ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿದೆ. ಅದೆಲ್ಲಾ ಸರಿ ಡೀಲ್ ಇವರು ಕುದುರಿಸಿಕೊಂಡರೆ ನಿರ್ಮಾಪಕರಿಗೇನು ಸಿಗುತ್ತದೆ? ಎಂದರೆ ಅಜಯ್ ಹೇಳುವುದು, "ವ್ಯಾಪಾರ ಒಪ್ಪಂದ ಎಂದರೆ ಎಲ್ಲವೂ ಕ್ಲಿಯರ್ ಆಗಿರುತ್ತದೆ. ನನ್ನನ್ನು ನಂಬಿದ ನಿರ್ಮಾಪಕನಿಗೆ ಇದುವರೆಗೂ ಲಾಸ್ ಆಗಿಲ್ಲ. ಯಾರಿಗೆ ಎಷ್ಟು ಪಾಲು ಎಂಬುದು ಒಪ್ಪಂದದಲ್ಲಿರುತ್ತದೆ" ಎಂದಿದ್ದಾರೆ ಕಿಮ್ಮತ್ತಿನ ಹಿಮ್ಮತ್ ವಾಲ. (ಏಜೆನ್ಸೀಸ್)

  English summary
  Bollywood actor Ajay Devgn signed up a Rs. 400 crore deal with the general entertainment channel Star India. The deal is that the channel will have the exclusive satellite rights for all the upcoming movies of the actor up to 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X