For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

  |

  ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13, 2021 ರಂದು ತೆರೆಗೆ ಬರ್ತಿದೆ. ಜೂನಿಯರ್ ಎನ್‌ ಟಿ ಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮೇಲೆ ಎಲ್ಲ ಚಿತ್ರರಂಗದ ಕಣ್ಣಿದೆ.

  'ಬಾಹುಬಲಿ' ಸರಣಿ ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು, ಸ್ವಾತಂತ್ರ್ಯ ವೀರರ ಜೀವನದ ಕಥೆಯನ್ನು ಹೇಳುತ್ತಿದ್ದಾರೆ. ಭಾರಿ ಬಜೆಟ್ ಹಾಗೂ ಅದ್ಧೂರಿ ದೃಶ್ಯ ವೈಭವದೊಂದಿಗೆ ಸಿದ್ಧವಾಗುತ್ತಿರುವ ಸಿನಿಮಾ ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿದೆ.

  RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

  ಆರ್‌ಆರ್‌ಆರ್ ಸಿನಿಮಾದ ಎದುರು ಯಾವ ಚಿತ್ರವೂ ಬರಲ್ಲ ಎನ್ನುತ್ತಿರುವಾಗಲೇ ಅಜಯ್ ದೇವಗನ್ ಚಿತ್ರ ಅದೇ ವಾರ ಬಿಡುಗಡೆಯಾಗುವುದು ತಿಳಿದು ಬಂದಿದೆ.

  ಹೌದು, ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. 1952-62ರವರೆಗೂ ಭಾರತೀಯ ಫುಟ್‌ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಬಯೋಪಿಕ್ ಸಿನಿಮಾ ಆಗಿದ್ದು, ಅಜಯ್ ದೇವಗನ್ ಪುಟ್ ಬಾಲ್ ಕೋಚ್ ಆಗಿ ನಟಿಸಿದ್ದಾರೆ.

  RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!

  ಅಂದ್ಹಾಗೆ, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲೂ ಅಜಯ್ ದೇವಗನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಒಂದು ವೇಳೆ ಈ ಎರಡು ಚಿತ್ರಗಳು ಮುಖಾಮುಖಿ ಆದರೆ ಅಜಯ್ ದೇವಗನ್ ವರ್ಸಸ್ ಅಜಯ್ ದೇವಗನ್ ಎನ್ನಲಾಗಿದೆ.

  ಸದ್ಯಕ್ಕೆ ಎರಡು ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ಬಹುಶಃ ಈ ಎರಡು ಸಿನಿಮಾಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಮುಂದಾಲೋಚನೆಯಿಂದ ಮೈದಾನ್ ಸಿನಿಮಾ ಮುಂದೂಡಬಹುದು.

  ಇದುನ್ನ ನಾವಿಬ್ರು ಮಾಡೋಣ ಅಂತ ನಾನೇ ಐಂದ್ರಿತಾಗೆ ಹೇಳಿದ್ದು | Filmibeat Kannada
  English summary
  SS Rajamouli directional RRR and Ajay Devgn Starrer Maidaan movie set to release on october same week?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X