For Quick Alerts
  ALLOW NOTIFICATIONS  
  For Daily Alerts

  "ಯಾಕಿಷ್ಟು ಸಿನಿಮಾ ಮಾಡುತ್ತೀರಿ? ಅಂತಾರೆ.. ಕೆಲಸ ಸಿಕ್ಕರೆ ಯಾರ್ ಮಾಡಲ್ಲ?" ಅಕ್ಷಯ್ ಬೇಸರ!

  |

  ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಟ ಯಾರು ಅಂತ ಕೇಳಿದರೆ, ಮೊದಲು ನೆನಪಿಗೆ ಬರುವ ಹೆಸರೇ ಅಕ್ಷಯ್ ಕುಮಾರ್. ವರ್ಷಕ್ಕೆ ಕಮ್ಮಿ ಅಂದರೂ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತವೆ. ಕಳೆದ ಕೆಲವು ವರ್ಷಗಳಿಂದ ಅಕ್ಷಯ್ ಸಿನಿಮಾಗಳು ಬಾಕ್ಸಾಫೀಸ್ ಗೆದ್ದಿದ್ದೇ ಹೆಚ್ಚು. ಇತ್ತೀಚೆಗೆ ಸಿನಿಮಾಗಳು ಸೋಲುತ್ತಿವೆಯಷ್ಟೇ.

  ಬಾಲಿವುಡ್‌ ಸಿನಿಮಾ ನೆಲಕ್ಕಚ್ಚುತ್ತಿರುವ ಬೆನ್ನಲ್ಲೇ ಅಕ್ಷಯ್ ಕುಮಾರ್ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ಮಾಡುವುದು ಯಾಕೆ? ಅಂತ ಟೀಕೆ ಮಾಡಿದ್ದರು. ಅದಕ್ಕೆ ಅಕ್ಷಯ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ್‌ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. "ಈ ವೇಳೆ ಯಾಕಿಷ್ಟು ಕೆಲಸ ಮಾಡ್ತೀರಿ?" ಅಂತ ಪ್ರಶ್ನೆ ಮಾಡಿದವರಿಗೆ ಅಕ್ಷಯ್ ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಅದರ ಬಗ್ಗೆನೇ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಯಾಕಿಷ್ಟು ಸಿನಿಮಾ ಮಾಡುತ್ತೀರಿ?

  ಯಾಕಿಷ್ಟು ಸಿನಿಮಾ ಮಾಡುತ್ತೀರಿ?

  ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಒಂದು ಕ್ಷಣವೂ ಸುಮ್ಮನೇ ಕೂರುವುದಿಲ್ಲ. ಹಾಗೇ ಸುಮ್ಮನೆ ಕಾಲಹರಣ ಮಾಡುವುದಕ್ಕೆ ಸಮಯವೂ ಇಲ್ಲ. ಅಕ್ಷಯ್ ಕುಮಾರ್ ನಟಿಸಿದ ನಾಲ್ಕರಿಂದ ಐದು ಸಿನಿಮಾಗಳು ಒಂದು ವರ್ಷದೊಳಗೆ ರಿಲೀಸ್ ಆಗುವುದೇ ಕಾರಣ. ಹೀಗಾಗಿ ಅಕ್ಷಯ್ ಕುಮಾರ್‌ಗೆ ಯಾಕಿಷ್ಟು ಕೆಲಸ ಮಾಡುತ್ತೀರಿ? ಎಂದು ಪ್ರಶ್ನೆ ಮಾಡಲಾಗಿತ್ತು. " ಇಲ್ಲಿರುವವರು ಯಾರಾದರೂ ಹೇಳಿ, ನಿಮ್ಮ ಮಕ್ಕಳಿಗೆ ಯಾಕಿಷ್ಟು ಕೆಲಸ ಮಾಡುತ್ತೀರಿ ಎಂದು ಹೇಳುತ್ತೀರಾ? ಯಾಕಿಷ್ಟು ಜೂಜು ಆಡುತ್ತೀರಾ? ಯಾಕಷ್ಟು ಕುಡಿಯುತ್ತೀರಾ? ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಹೆಚ್ಚು ಕೆಲಸ ಮಾಡೋರಿಗೆ ಯಾರು ಪ್ರಶ್ನೆ ಮಾಡುತ್ತಾರೆ? ಎಂದು ಹೇಳಿದ್ದಾರೆ.

  'ವರ್ಷಕ್ಕೆ 4-5 ಸಿನಿಮಾ ಮಾಡುತ್ತೇನೆ'

  'ವರ್ಷಕ್ಕೆ 4-5 ಸಿನಿಮಾ ಮಾಡುತ್ತೇನೆ'

  ಅಕ್ಷಯ್ ಕುಮಾರ್ ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡುವವರಿಗೂ ಅಕ್ಷಯ್ ಕುಮಾರ್ ತಿರುಗೇಟು ನೀಡಿದ್ದಾರೆ. " ನಾನು ಒಂದು ವರ್ಷಕ್ಕೆ ನಾಲ್ಕು ಸಿನಿಮಾ ಮಾಡುತ್ತೇನೆ. ಹೌದು ನಾನು ನಟಿಸಿದ್ದೇನೆ. ನಾನು ಜಾಹೀರಾತಿನಲ್ಲೂ ನಟಿಸಿದ್ದೇನೆ. ನಾನು ಕೆಲಸ ಮಾಡಿದ್ದೇನೆ. ಹಾಗಂತ ನಾನು ಯಾರ ಕೆಲಸವನ್ನು ಕಿತ್ತುಕೊಂಡಿಲ್ಲ." ಎಂದು ಅಕ್ಷಯ್ ಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  'ಬೇಗ ಯಾಕೆ ಮಲಗುತ್ತೀಯಾ ಅಂತಾರೆ'

  'ಬೇಗ ಯಾಕೆ ಮಲಗುತ್ತೀಯಾ ಅಂತಾರೆ'

  ಅಕ್ಷಯ್ ಕುಮಾರ್ ಬಾಲಿವುಡ್‌ನ ಶಿಸ್ತಿನ ಸಿಪಾಯಿ. ಬೆಳಗ್ಗೆ ಬೇಗ ಶೂಟಿಂಗ್ ಶುರು ಮಾಡುತ್ತಾರೆ. ಬೇಗ ಮುಗಿಸಿ ಮನೆ ಸೇರುತ್ತಾರೆ. ಈ ದಿನ ಬಹುತೇಕ ಮಂದಿಗೆ ಗೊತ್ತಿದೆ. ಅದನ್ನೂ ಪ್ರಶ್ಮಿಸುವವರ ವಿರುದ್ಧ ಕಿಡಿಕಾರಿದ್ದಾರೆ. "ಮಾಧ್ಯಮದವರು ಯಾಕೆ ನೀನು ಬೇಗ ಎದ್ದೇಳುತ್ತೀಯಾ? ಕೆಲವರು ನೀನ್ಯಾಕೆ ಬೇಗ ಮಲಗುತ್ತೀಯಾ? ಅಂತ ಕೇಳುತ್ತಾರೆ? ಅಯ್ಯೋ ಫೂಲ್.. ಜನರು ರಾತ್ರಿ ವೇಳೆ ಮಲಗುತ್ತಾರೆ. ನನಗೆ ನಾನೇನು ತಪ್ಪು ಮಾಡುತ್ತಿದ್ದೇನೆ ಅನ್ನೋದು ಅರ್ಥವಾಗುತ್ತಿಲ್ಲ. ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದರೆ, ಯಾರು ಕೆಲಸ ಮಾಡುವುದಿಲ್ಲ ಅಂತಾರೆ. ನಾನು ವರ್ಷಕ್ಕೆ ನಾಲ್ಕು ಸಿನಿಮಾ ಮಾಡುತ್ತೇನೆ. ನಾನು 50 ನೀಡುತ್ತೇನೆ. ಅಗತ್ಯ ಬಿದ್ದರೆ 90 ದಿನ ಕಾಲ್‌ಶೀಟ್ ಕೂಡ ಕೊಡುತ್ತೇನೆ." ಎಂದಿದ್ದಾರೆ ಅಕ್ಷಯ್ ಕುಮಾರ್.

  ಈ ವರ್ಷ 5 ಸಿನಿಮಾ ರಿಲೀಸ್

  ಈ ವರ್ಷ 5 ಸಿನಿಮಾ ರಿಲೀಸ್

  2022ರಲ್ಲಿ ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು ರಿಲೀಸ್ ಆಗಿವೆ. 'ಬಚ್ಚನ್ ಪಾಂಡೆ','ಸಾಮ್ರಾಟ್ ಪ್ರಥ್ವಿರಾಜ್‌, 'ರಕ್ಷಾ ಬಂಧನ್', ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ 'ಕಟ್‌ಪುತ್ಲಿ' ಹಾಗೇ 'ರಾಮ್ ಸೇತು' ಬಿಡುಗಡೆ ಯಾಗಿದೆ. ಹಾಗೇ 'ಸೆಲ್ಫೀ', 'ಕ್ಯಾಪ್‌ಸ್ಯೂಲ್ ಗಿಲ್', 'ಓ ಮೈ ಗಾಢ್ 2', 'ಬಡೆ ಮಿಯ್ಯಾ ಛೋಟೆ ಮೀಯ್ಯಾ' ಸಿನಿಮಾಗಳು ಇನ್ನೂ ಶೂಟಿಂಗ್ ಹಂತದಲ್ಲಿವೆ. ಮುಂದಿನಕ್ಕೆ ಈ ಸಿನಿಮಾಗಳು ರಿಲೀಸ್ ಆಗಲಿವೆ.

  English summary
  Akshay Kumar Says I do Four Films A Year Not Stealing From Anyone, Know More.
  Sunday, November 13, 2022, 22:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X