»   » 'ಮೋದಿ'ಯಂತೆ ಪ್ರಧಾನಿ ಆಗಲಿದ್ದಾರೆ ನಟ ಅಕ್ಷಯ್ ಕುಮಾರ್?

'ಮೋದಿ'ಯಂತೆ ಪ್ರಧಾನಿ ಆಗಲಿದ್ದಾರೆ ನಟ ಅಕ್ಷಯ್ ಕುಮಾರ್?

Posted By:
Subscribe to Filmibeat Kannada

ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೆ 'ಟಾಯ್ಲೆಟ್; ಏಕ್ ಪ್ರೇಮ್ ಕಥಾ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಅಲ್ಲದೇ ಈಗ ತಮ್ಮ ಹೊಸ ಚಿತ್ರ 'ಪದ್ಮನ್' ಸಿನಿಮಾ ಚಿತ್ರೀಕರಣದಲ್ಲೂ ಬಿಸಿ ಆಗಿದ್ದಾರೆ.[ಅಕ್ಷಯ್ ಕುಮಾರ್ 'ಟಾಯ್ಲೆಟ್' ಚಿತ್ರದ ಟ್ರೇಲರ್ ಬಿಡುಗಡೆ]

ಇತ್ತ ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಚಿತ್ರದಲ್ಲಿಯೂ ನಟಿಸುತ್ತಿರುವ ನಟ ಅಕ್ಷಯ್ ಕುಮಾರ್ ಬಗ್ಗೆ ಈಗೊಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ಆ ಇಂಟ್ರೆಸ್ಟಿಂಗ್ ಮ್ಯಾಟರ್ ಏನಂದ್ರೆ ನಟ ಅಕ್ಷಯ್ ಕುಮಾರ್ ರವರು ನರೇಂದ್ರ ಮೋದಿ ರೀತಿ ಪ್ರಧಾನಿ ಆಗಲಿದ್ದಾರಂತೆ. ಮುಂದೆ ಓದಿರಿ.

ಪ್ರಧಾನಿ ಆಗಲಿದ್ದಾರೆ ಅಕ್ಷಯ್ ಕುಮಾರ್

ಅಕ್ಕಿ, ನರೇಂದ್ರ ಮೋದಿ ರೀತಿ ಪ್ರಧಾನಿ ಆಗುತ್ತಿರುವುದು ರಿಯಲ್ ಆಗಿ ಅಲ್ಲ. ಬಾಲಿವುಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ರವರ ಜೀವನ ಆಧರಿತ ಚಿತ್ರವೊಂದು ಮೂಡಿಬರಲಿದ್ದು, ಆ ಚಿತ್ರದಲ್ಲಿ ಅಕ್ಷಯ್ ಕುಮಾರ್, ನರೇಂದ್ರ ಮೋದಿ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಕುತೂಹಲಕಾರಿ ಸುದ್ದಿ ಈಗ ಬಿಟೌನ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೆ ಚಿತ್ರದ ಟೈಟಲ್ ಏನು ಎಂಬುದು ತಿಳಿದಿಲ್ಲ.[ಅಕ್ಷಯ್ ಕುಮಾರ್ ಹೊಸ ಚಿತ್ರಕ್ಕು ಪ್ರಧಾನಿ ಮೋದಿಗೂ ಇದ್ಯಾ ಸಂಬಂಧ ?]

ಮೋದಿ ಪಾತ್ರದಲ್ಲಿ ಅಕ್ಷಯ್: ಬಿಜೆಪಿ ನಾಯಕರ ಸಹಮತ

ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕ ಹಾಗೂ ದೇಶದ ಬಹುಸಂಖ್ಯಾತ ಪ್ರಜೆಗಳ ನೆಚ್ಚಿನ ಜನನಾಯಕ ಆಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಬಯೋಪಿಕ್ ನಲ್ಲಿ ಅಕ್ಷಯ್ ಕುಮಾರ್ ನಟಿಸಲಿರುವ ಬಗ್ಗೆ ಬಿಜೆಪಿಯ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರಂತೆ.

ಮೋದಿ ಪಾತ್ರಕ್ಕೆ ಇವರೇ ಸೂಕ್ತ

ಹಲವು ಸಾಮಾಜಿಕ ಕಳಕಳಿ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಇತರೆ ನಟರಿಗಿಂತ ಹೆಚ್ಚಿನ ಸಕಾರಾತ್ಮಕ ಇಮೇಜ್ ಇವರಿಗಿದೆ. ಆದ್ದರಿಂದ ಮೋದಿ ಪಾತ್ರಕ್ಕೆ ಇವರೇ ಸೂಕ್ತ ಎಂದು ಭಾವಿಸಲಾಗಿದೆಯಂತೆ. ರಾಷ್ಟ್ರ ಪ್ರಶಸ್ತಿ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ಮೋದಿಯವರನ್ನು ಭೇಟಿ ಆಗಿ ತಮ್ಮ ಚಿತ್ರ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಟೈಟಲ್ ಹೇಳಿದಾಗ ಸ್ವತಃ ಮೋದಿ ನಕ್ಕಿದ್ದರು. ಅಲ್ಲದೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಮೋದಿಯವರಿಗೂ ಅಕ್ಷಯ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ.

ಮೋದಿ ಪಾತ್ರಕ್ಕೆ ಈ ಹಿಂದೆ ಕೇಳಿಬಂದಿದ್ದ ನಟರ ಹೆಸರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಜೀವನ ಅಧಾರಿತವಾದ ಚಿತ್ರದಲ್ಲಿ ಅವರ ಪಾತ್ರವನ್ನು ಬಾಲಿವುಡ್ ನಟರಾದ ಪರೇಶ್ ರವಾಲ್ ಮತ್ತು ಅನುಪಮ್ ಖೇರ್ ನಿರ್ವಹಿಸಲಿದ್ದಾರೆ ಎಂದು ಈ ಹಿಂದೆ ಸುದ್ದಿ ಹರಿದಾಡಿತ್ತು ಎಂದು ಮೂಲಗಳಿಂದ ತಿಳಿದಿದೆ. ಅಲ್ಲದೇ ಈ ಚಿತ್ರ ಮೂರು ವರ್ಷಗಳ ಹಿಂದೆಯೇ ಸೆಟ್ಟೇರಬೇಕಿತ್ತಂತೆ.

ಸಿಬಿಎಫ್‌ಸಿ ಅಧ್ಯಕ್ಷ ಹೇಳಿದೇನು ಗೊತ್ತಾ?

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರಾದ ಪಹ್ಲಜ್ ನಿಹಲಾನಿ ರವರು, "ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಲು ಅಕ್ಷಯ್ ಕುಮಾರ್ ಹೊರತು ಪಡಿಸಿ ಇತರೆ ಯಾರು ಸೂಕ್ತರಲ್ಲ' ಎಂದು ಡಿಎನ್‌ಎ ಗೆ ಹೇಳಿದ್ದಾರೆ. ಪಹ್ಲಜ್ ನಿಹಲಾನಿ ಇತ್ತೀಚೆಗೆ ಅಕ್ಷಯ್ ಕುಮಾರ್ ರವರ 'ಟಾಯ್ಲೆಟ್; ಏಕ್ ಪ್ರೇಮ್ ಕಥಾ' ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಈ ಚಿತ್ರವನ್ನು ತೆರಿಗೆಯಿಂದ ಮುಕ್ತಗೊಳಿಸಬೇಕು ಎಂದಿದ್ದರು.

ಗಾಳಿ ಸುದ್ದಿ ಇರಬಹುದಾ..

ಇದು ರೂಮರ್ಸ್ ಇರಬಹುದಾ.. ಅಥವಾ ನಿಜವೇ ಗೊತ್ತಿಲ್ಲ. ಆದರೆ ಸಿಬಿಎಫ್‌ಸಿ ಅಧ್ಯಕ್ಷ ಡಿಎನ್‌ಎ ಗೆ ನೀಡಿರುವ ಹೇಳಿಕೆ ಗಮನಿಸಿದರೆ ನರೇಂದ್ರ ಮೋದಿ ಕುರಿತ ಸಿನಿಮಾ ಮೂಡಿಬರುವ ಎಲ್ಲಾ ಭರವಸೆಗಳು ಇವೆ. ಆದರೂ ಕಾದುನೋಡಬೇಕಿದೆ.

ಮನಮೋಹನ್ ಸಿಂಗ್ ಕುರಿತ ಚಿತ್ರ

ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ರಾಜಕೀಯ ನಾಯಕರ ಜೀವನ ಆಧಾರಿತ ಚಿತ್ರಗಳು ಸೆಟ್ಟೇರುತ್ತಿವೆ. ಬಾಲಿವುಡ್ ನಲ್ಲಿ ಈಗಾಗಲೇ ಮನಮೋಹನ್ ಸಿಂಗ್ ಕುರಿತ ಚಿತ್ರ ' ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಹೆಸರಿನಲ್ಲಿ ಮೂಡಿಬರುತ್ತಿದೆ.

English summary
According to Grapevine, Bollywood Actor Akshay Kumar to play PM Narendra Modi in their biopic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada