For Quick Alerts
  ALLOW NOTIFICATIONS  
  For Daily Alerts

  ಇಂದು ಅಲಿಯಾ ಭಟ್-ರಣಬೀರ್ ಕಪೂರ್ ನಿಶ್ಚಿತಾರ್ಥ? ಜೈಪುರದಲ್ಲಿ ನಡೆಯುತ್ತಿದೆ ಸಮಾರಂಭ

  |

  ಬಾಲಿವುಡ್ ನ ಜೋಡಿ ಹಕ್ಕಿಗಳು ಅಂತನೆ ಕರೆಸಿಕೊಳ್ಳುತ್ತಿದ್ದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇಬ್ಬರು ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸದಿದ್ದರೂ, ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರ ಪ್ರೀತಿಯ ವಿಚಾರ ಆಗಾಗ ಸುದ್ದಿಯಾಗುತಲೇ ಇರುತ್ತೆ. ಆದರೂ ಈ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.

  ಇದೀಗ ಸದ್ದಿಲ್ಲದೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇಬ್ಬರ ನಿಶ್ಚಿತಾರ್ಥ ಸಮಾರಂಭ ಜೈಪುರ್ ದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿದ್ದಾರೆ.

  ಕೊನೆಗೂ ಪ್ರೀತಿ ವಿಚಾರ ಬಿಚ್ಚಿಟ್ಟ ನಟ ರಣ್ಬೀರ್ ಕಪೂರ್

  ಅಂದಹಾಗೆ ಈಗಾಗಲೇ ರಣಬೀರ್ ಮತ್ತು ಅಲಿಯಾ ಕುಟುಂಬ ಜೈಪುರ್ ಗೆ ತೆರಳಿದ್ದಾರೆ. ಜೈಪುರದಲ್ಲಿರುವ ಇಡೀ ಕುಟುಂಬ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  ಜೈಪುರದಲ್ಲಿ ನಡೆಯುತ್ತಿದೆ ನಿಶ್ಚಿತಾರ್ಥ ಸಮಾರಂಭ

  ಜೈಪುರದಲ್ಲಿ ನಡೆಯುತ್ತಿದೆ ನಿಶ್ಚಿತಾರ್ಥ ಸಮಾರಂಭ

  ಬಾಲಿವುಡ್ ಮೂಲಗಳ ಪ್ರಕಾರ ಎಲ್ಲರೂ ಜೈಪುರದ ರಣಥಂಬೋರ್ ಅಮನ್ ಹೋಟೆಲ್ ನಲ್ಲಿ ತಂಗಿದ್ದು, ಅಲ್ಲೇ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಎಲ್ಲರೂ ಜೈಪುರಗೆ ತೆರಳಿದ್ದು, ನೋಡಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಅಲಿಯಾ ಮತ್ತು ರಣಬೀರ್ ನಿಶ್ಚಿತಾರ್ಥಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

  ಅಲಿಯಾಗೆ ಉಂಗುರ ತೊಡಿಸಲಿದ್ದಾರೆ ರಣಬೀರ್

  ಅಲಿಯಾಗೆ ಉಂಗುರ ತೊಡಿಸಲಿದ್ದಾರೆ ರಣಬೀರ್

  ಗಪ್ಯವಾಗಿ ನಡೆಯುವ ಎಂಗೇಜ್ ಮೆಂಟ್ ಸಮಾರಂಭದಲ್ಲಿ ರಣಬೀರ್ ಬಹುಕಾಲದ ಗೆಳತಿ ಅಲಿಯಾಗೆ ರಿಂಗ್ ತೊಡಿಸುವ ಮೂಲಕ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಅಲಿಯಾ ಮತ್ತು ರಣಬೀರ್ ನಿಶ್ಚಿತಾರ್ಥ ನೆರವೇರಲಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.

  ದೀಪಿಕಾ ಮತ್ತು ರಣ್ವೀರ್ ಸಿಂಗ್ ಭಾಗಿ

  ದೀಪಿಕಾ ಮತ್ತು ರಣ್ವೀರ್ ಸಿಂಗ್ ಭಾಗಿ

  ಅಲಿಯಾ ಮತ್ತು ರಣಬೀರ್ ಕುಟುಂಬದ ಜೈಪುರ ಏರ್ ಪೋರ್ಟ್ ನಲ್ಲಿ ಕ್ಯಾಮರಾಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ವಿಶೇಷ ಎಂದರೆ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕೂಡ ಜೈಪುರ್ ಗೆ ತೆರಳಿದ್ದು, ರಣಬೀರ್ ಮತ್ತು ಅಲಿಯಾ ನಿಶ್ಚಿತಾರ್ಥದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

  ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದ ರಣಬೀರ್ ಕಪೂರ್

  ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದ ರಣಬೀರ್ ಕಪೂರ್

  ಈ ಬಗ್ಗೆ ಕುಟುಂಬದವರು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಅಲಿಯಾ ಮತ್ತು ರಣಬೀರ್ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಆದರೆ ಇಬ್ಬರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇತ್ತೀಚಿಗಷ್ಟೆ ರಣಬೀರ್ ಕಪೂರ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಲಿಯಾ ನನ್ನ ಗರ್ಲ್ ಫ್ರೆಂಡ್ ಎಂದು ಹೇಳುವ ಮೂಲಕ ಪ್ರೀತಿಯನ್ನು ಒಪ್ಪಿಕೊಂಡಿದ್ದರು.

  English summary
  Bollywood Actor Alia Bhatt and Ranbir Kapoor likely getting engaged today in Jaipur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X