For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಆಲಿಯಾ ಭಟ್

  |

  ಬಾಲಿವುಡ್ ನಟಿ ಆಲಿಯಾ ಭಟ್ ಇಂದು ಹಬ್ಬದ ಸಂಭ್ರಮದಲ್ಲಿದ್ದಾರೆ. ಬ್ಯಾಟ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಿ ಟೌನ್ ನ ಟಾಪ್ ನಟಿಯಾಗಿ ಮೆರೆಯುತ್ತಿರುವ ಅಲಿಯಾ 26ನೇ ವರ್ಷದ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಮುಂಬೈನ ನಿವಾಸದಲ್ಲಿ ಆಲಿಯಾ ಹುಟ್ಟುಹುಬ್ಬದ ಆಚರಣೆ ತುಂಬಾ ಜೋರಾಗಿಯೇ ನಡೆದಿದೆ.

  ಕುಟುಂಬದವರು ಮತ್ತು ಸ್ನೇಹಿತರ ಜೊತೆ ಮಧ್ಯರಾತ್ರಿಯೇ ಹುಟ್ಟು ಹಬ್ಬ ಆಚರಿಸಿಕೊಂಡ ಆಲಿಯಾ ತಮ್ಮ ಸ್ನೇಹಿತರ ಜೊತೆ ಮಸ್ತ್ ಮಜಾ ಮಾಡಿದ್ದಾರೆ. ಈ ಪಾರ್ಟಿಯ ಒಂದಿಷ್ಟು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಂದ್ಹಾಗೆ, ಅಲಿಯಾ ಹುಟ್ಟಹಬ್ಬಕ್ಕೆ ಭಾಗಿಯಾದ ವಿಶೇಷ ಅತಿಥಿ ಅಂದರೆ, ರಣಬೀರ್ ಕಪೂರ್. ಅಲಿಯಾಳ ರೂಮರ್ ಬಾಯ್ ಫ್ರೆಂಡ್ ರಣಬೀರ್ ತಮ್ಮ ಚಿತ್ರದ ಚಿತ್ರೀಕರಣ ಮುಗಿಸಿ ಅಲಿಯಾ ಅವರನ್ನು ಮನೆವರೆಗೂ ಡ್ರಾಪ್ ಮಾಡಿ ನಂತರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.

  ಇನ್ನು, ನಿರ್ಮಾಪಕ ಕರಣ್ ಜೋಹರ್, 'ಸ್ಟೂಡೆಂಟ್ ಆಫ್ ದಿ ಇಯರ್' ಖ್ಯಾತಿಯ ನಟ ಆದಿತ್ಯಾ, ಆಕಾಂಕ್ಷ ರಂಜನ್ ಸೇರಿದಂತೆ ಅನೇಕ ಬಾಲಿವುಡ್ ಮಂದಿ ಆಲಿಯಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ.

  ಆಲಿಯಾ ಭಟ್ ತಾಯಿಯ ಮೇಲೆ ಅತ್ಯಾಚಾರ ಪ್ರಯತ್ನ ಆಗಿತ್ತಂತೆ.!

  ಇನ್ನೂ, ಈ ಭಾರಿಯ ಹುಟ್ಟುಹಬ್ಬ ಆಲಿಯಾ ಪಾಲಿಗೆ ತುಂಬಾನೆ ಸ್ಪೆಷಲ್ ಆಗಿದೆ. ಯಾಕೆಂದರೆ, ಈ ವರ್ಷ ಅಲಿಯಾ ಬಳಿ ಸಾಕಷ್ಟು ದೊಡ್ಡ ದೊಡ್ಡ ಸಿನಿಮಾಗಳಿವೆ. ಈಗಾಗಲೇ 'ಕಳಂಕ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಆಲಿಯಾ ಭಟ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಜೊತೆಗೆ ರಣಬೀರ್ ಜೊತೆ 'ಬ್ರಹ್ಮಾತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ , ಟಾಲಿವುಡ್ ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದ ನಾಯಕಿಯಾಗಿ ಕೂಡ ಆಯ್ಕೆ ಆಗಿದ್ದಾರೆ.

  English summary
  Bollywood actress Alia Bhatt celebrate her birthday with romar boyfriend Ranbir Kapoor, Karan Johar, actor Aditya and others bollywood actors are visit Alia Birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X