For Quick Alerts
  ALLOW NOTIFICATIONS  
  For Daily Alerts

  ರಿಷಿ ಕಪೂರ್‌ರನ್ನು ನೋಡಲು ಅಮಿತಾಬ್ ಒಮ್ಮೆಯೂ ಆಸ್ಪತ್ರೆಗೆ ಹೋಗಲಿಲ್ಲ: ಕಾರಣ ಇದು

  |

  ಗುರುವಾರ ಅಗಲಿದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಕುರಿತು ಅತಿ ಹೆಚ್ಚಿನ ಒಡನಾಟ ಒಟ್ಟಿಕೊಂಡವರಲ್ಲಿ ಅಮಿತಾಬ್ ಬಚ್ಚನ್ ಒಬ್ಬರು. ಇಬ್ಬರೂ ಕೊನೆಯದಾಗಿ ಜತೆಯಾಗಿ '102 ನಾಟ್ ಔಟ್' ಚಿತ್ರದಲ್ಲಿ ನಟಿಸಿದ್ದರು. ಜೀವನದ ಹುಮ್ಮಸ್ಸು ಕಳೆದುಕೊಂಡ ವೃದ್ಧನಿಗೆ ಅತೀವ ಜೀವನೋತ್ಸಾಹವಿರುವ ಅಪ್ಪನ ಪಾತ್ರದಲ್ಲಿ ಅಮಿತಾಬ್ ನಟಿಸಿದ್ದರು.

  ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

  ರಿಷಿ ಕಪೂರ್ ಸಾವಿನ ಬಳಿ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ಬಳಿಕ ಅದನ್ನು ಅಳಿಸಿ ಹಾಕಿದ್ದರು. ಮತ್ತೆ ಟ್ವೀಟ್ ಮಾಡಿ ಅದನ್ನೂ ಅಳಿಸಿ ಹಾಕಿದ್ದರು. ತೀವ್ರ ದುಃಖದಲ್ಲಿರುವ ಅಮಿತಾಬ್, ರಿಷಿ ಕಪೂರ್ ಕುರಿತು ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಅನಿಸಿತ್ತು. ರಿಷಿ ಕಪೂರ್ ಅವರ ಅಂತ್ಯಕ್ರಿಯೆಗೆ ಬಿಗ್ ಬಿ ಹಾಜರಾಗಿರಲಿಲ್ಲ. ಅವರ ಬದಲು ಮಗ ಅಭಿಷೇಕ್ ಬಚ್ಚನ್ ಪಾಲ್ಗೊಂಡಿದ್ದರು.

  ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

  ಈ ಆಘಾತದಿಂದ ಹೊರಬರಲು ಸಮಯ ತೆಗೆದುಕೊಂಡ ಅಮಿತಾಬ್, ರಿಷಿ ಕಪೂರ್ ಅವರ ಸರ್ಗಮ್ ಚಿತ್ರದ ಕ್ಯಾರಿಕೇಚರ್ ಬಳಸಿಕೊಂಡು ಸುದೀರ್ಘ ಬರಹ ಬರೆದಿದ್ದಾರೆ. ಮುಂದೆ ಓದಿ...

  ಮನೆಯಲ್ಲಿ ಮೊದಲು ನೋಡಿದ್ದು

  ಮನೆಯಲ್ಲಿ ಮೊದಲು ನೋಡಿದ್ದು

  'ನಾನು ಅವರನ್ನು ಅವರ ಮನೆ ದಿಯೋನಾರ್ ಕಾಟೇಜ್‌ನಲ್ಲಿ ನೋಡಿದ್ದೆ. ಯಂಗ್ ಎನರ್ಜೆಟಿಕ್, ಬಬ್ಲಿ, ಕಣ್ಣುಗಳಲ್ಲಿತುಂಟತನದ ಚಿಂಟು. ರಾಜಿ ಅವರ (ರಾಜ್ ಕಪೂರ್) ಮನೆಗೆ ಸಂಜೆ ವೇಳೆ ಆಹ್ವಾನ ಪಡೆಯುವ ಅಪರೂಪದ ಗಳಿಗೆಯ ಸೌಭಾಗ್ಯ ನನ್ನದಾಗಿತ್ತು. ಅದರ ಬಳಿಕ ಅವರನ್ನು ಹಲವು ಬಾರಿ ನೋಡಿದ್ದೆ. ಆರ್ ಕೆ ಸ್ಟುಡಿಯೋದಲ್ಲಿ ಬಾಬ್ಬಿ ಸಿನಿಮಾ ಮಾಡಲು ಅವರಿಗೆ ನಟನೆಯ ತರಬೇತಿ ನೀಡಲಾಗುತ್ತಿತ್ತು' ಎಂದು ಆ ಸ್ಥಳ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

  ಅಜ್ಜನನ್ನೇ ಹೋಲುವ ನಡಿಗೆ

  ಅಜ್ಜನನ್ನೇ ಹೋಲುವ ನಡಿಗೆ

  ಅವರು ಆತ್ಮವಿಶ್ವಾಸ ಮತ್ತು ದೃಢತೆಯಿಂದ ನಡೆದಿದ್ದರು. ಆ ಶೈಲಿ ಅವರ ಅಜ್ಜ, ಲೆಜೆಂಡ್ ಪೃಥ್ವಿ ರಾಜ್ ಕಪೂರ್ ಅವರಂತೆಯೇ ಇತ್ತು. ಅವರ ಹಿಂದಿನ ಒಂದು ಸಿನಿಮಾದಲ್ಲಿ ಆ ನಡಿಗೆಯನ್ನು ನಾನು ಗಮನಿಸಿದ್ದೆ. ಆ ನಡಿಗೆಯನ್ನು ನಾನು ಮತ್ತೆ ಯಾರಲ್ಲೂ ಕಾಣಲಿಲ್ಲ.

  ಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದುಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದು

  ಪ್ರತಿ ಪದವೂ ಅದ್ಭುತ

  ಪ್ರತಿ ಪದವೂ ಅದ್ಭುತ

  ನಾನು ಅನೇಕ ಸಿನಿಮಾಗಳನ್ನು ಒಟ್ಟಾಗಿ ಮಾಡಿದ್ದೇವೆ. ಅವರು ತಮ್ಮ ಸಂಭಾಷಣೆಯ ಒಂದು ಸಾಲು ಹೇಳಿದಾಗ ಅದರ ಪ್ರತಿ ಪದವನ್ನೂ ನಂಬುವಂತಿರುತ್ತಿತ್ತು. ಅವರಂತೆಯೇ ಹಾಡುಗಳಿಗೆ ಪರ್ಫೆಕ್ಟ್ ಆಗಿ ತುಟಿ ಚಲನೆ ಮಾಡುವ ಮತ್ತೊಬ್ಬರನ್ನು ನಾನು ನೋಡಿಲ್ಲ.

  ಎಲ್ಲಿದ್ದರೂ ನಗು ಎಬ್ಬಿಸುತ್ತಿದ್ದರು

  ಎಲ್ಲಿದ್ದರೂ ನಗು ಎಬ್ಬಿಸುತ್ತಿದ್ದರು

  ಸೆಟ್‌ನಲ್ಲಿ ಅವರದು ತುಂಟತನದ ಮನೋಭಾವ. ಅತ್ಯಂತ ದುಃಖದ ಸನ್ನಿವೇಶದಲ್ಲಿಯೂ ಅವರು ಹಾಸ್ಯದ ಕಿಡಿಯನ್ನು ಹುಡುಕುತ್ತಿದ್ದರು. ನಮಗೆ ನಗು ತಡೆಯಲಾಗುತ್ತಿರಲಿಲ್ಲ. ಸೆಟ್‌ನಲ್ಲಿ ಮಾತ್ರವಲ್ಲ, ಯಾವುದೇ ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಪರಿಸ್ಥಿತಿಯನ್ನು ತಿಳಿಯಾಗಿರುವ ವಿಷಯಗಳನ್ನು ಕಂಡುಕೊಳ್ಳುತ್ತಿದ್ದರು.

  ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!

  ಮತ್ತೆ ಬರುತ್ತೇನೆ ಎನ್ನುತ್ತಿದ್ದರು

  ಮತ್ತೆ ಬರುತ್ತೇನೆ ಎನ್ನುತ್ತಿದ್ದರು

  ಅವರ ಡಯಾಗ್ನೊಸಿಸ್ ಸಮಯದಲ್ಲಿ ಮತ್ತು ಅವರ ಶಸ್ತ್ರಚಿಕಿತ್ಸೆಯ ವೇಳೆ ಅವರು ಎಂದಿಗೂ ತಮ್ಮ ಪರಿಸ್ಥಿತಿಯ ಬಗ್ಗೆ ಬೇಸರಪಟ್ಟುಕೊಂಡವರಲ್ಲ. 'ನಿಮ್ಮನ್ನು ಮತ್ತೆ ನೋಡುತ್ತೇನೆ. ಇದೇನಿಲ್ಲ ಮಾಮೂಲಿ ಆಸ್ಪತ್ರೆಯ ಭೇಟಿ. ಶೀಘ್ರವೇ ವಾಪಸ್ ಬರುತ್ತೇನೆ' ಎನ್ನುತ್ತಿದ್ದರು.

  ಅಪ್ಪನ ಜೀನ್‌ನಿಂದ ಬಂದಿದ್ದು

  ಅಪ್ಪನ ಜೀನ್‌ನಿಂದ ಬಂದಿದ್ದು

  ಬದುಕನ್ನು ಸಂಭ್ರಮಿಸುವ ಶಕ್ತಿಯನ್ನು ಅವರು ಹೊಂದಿದ್ದರು. ಅದು ಅವರ ತಂದೆ, ಲೆಜೆಂಡ್, ಅಲ್ಟಿಮೇಟ್ ಶೋಮ್ಯಾನ್ ರಾಜ್ ಕಪೂರ್ ಅವರಿಂದ ಬಳುವಳಿಯಾಗಿ ಬಂದಿದ್ದು.

  ಆಸ್ಪತ್ರೆಗೆ ಹೋಗಲೇ ಇಲ್ಲ

  ಆಸ್ಪತ್ರೆಗೆ ಹೋಗಲೇ ಇಲ್ಲ

  ನಾನು ಆಸ್ಪತ್ರೆಯಲ್ಲಿ ಅವರನ್ನು ಎಂದಿಗೂ ಭೇಟಿಯಾಗಲಿಲ್ಲ. ಅವರ ಗುಂಡು ಗುಂಡಾದ ಮುಖದಲ್ಲಿನ ನಗುವಿನಲ್ಲ ನೋವನ್ನು ನೋಡಲು ನಾನು ಎಂದಿಗೂ ಬಯಸಲಿಲ್ಲ. ಆದರೆ ನನಗಂತೂ ಒಂದು ಸಂಗತಿ ಖಚಿತವಾಗಿ ಗೊತ್ತು. ಅವರು ಶಾಂತವಾದ ನಗುವಿನೊಂದಿಗೇ ಹೊರಟಿರುತ್ತಾರೆ.

  English summary
  Bollywood actor Amitabh Bachchan wrote an emotional post on Rishi Kapoor and said i never visited him in hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X