»   » ನಿರ್ದೇಶನಕ್ಕಿಳಿದ ಅಮಿತಾಬ್ ಬಚ್ಚನ್ ಮೊಮ್ಮಗ

ನಿರ್ದೇಶನಕ್ಕಿಳಿದ ಅಮಿತಾಬ್ ಬಚ್ಚನ್ ಮೊಮ್ಮಗ

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಂತರ ಮಗ ಅಭಿಷೇಕ್ ಬಚ್ಚನ್ ಬಿ ಟೌನ್ ಇಂಡಸ್ಟ್ರಿಯಲ್ಲಿ ಯಶಸ್ಸು ಕಂಡರು. ಜಯಾ ಬಚ್ಚನ್ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರೂ, ಬಿಗ್ ಬಿ, ಅಭಿಷೇಕ್ ಹಾಗೂ ಸೊಸೆ ಐಶ್ವರ್ಯ ರೈ ಬಚ್ಚನ್ ಬಾಲಿವುಡ್ ನಲ್ಲಿ ಮುಂದುವರೆದಿದ್ದಾರೆ.

ಇದೀಗ, ಬಚ್ಚನ್ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಅಮಿತಾಬ್ ಬಚ್ಚನ್ ಮೊಮ್ಮಗ ಈಗ ನಿರ್ದೇಶನಕ್ಕಿಳಿಯುವ ಮೂಲಕ ಬಚ್ಚನ್ ಫ್ಯಾಮಿಲಿಯ ಮೂರನೇ ತಲೆಮಾರು ಸಿನಿ ವೃತ್ತಿ ಆರಂಭಿಸಿದೆ.

ದಕ್ಷಿಣ ಭಾರತದ ದೊಡ್ಡ ಚಿತ್ರಕ್ಕಾಗಿ ಅಮಿತಾಬ್ ಗೆಟಪ್ ನೋಡಿ

ಹೌದು, ಅಮಿತಾಬ್ ಮತ್ತು ಜಯಾ ಬಚ್ಚನ್ ಮಗಳು ಶ್ವೇತಾ ನಂದ ಚಿತ್ರರಂಗದಿಂದ ದೂರವೇ ಇದ್ದಾರೆ. ಇವರ ಮಗ ಅಗಸ್ತ್ಯ ನಂದ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟು ತಾತನ ಜೊತೆ ಬಣ್ಣದ ಲೋಕಕ್ಕೆ ಪರಿಚಯವಾಗಲು ಸಜ್ಜಾಗುತ್ತಿದ್ದಾರೆ.

amitabh bachchan grandson agastya nanda entry to bollywood

ಶ್ವೇತಾ ನಂದ ಮತ್ತು ನಿಖಿಲ್ ನಂದ ಅವರ 17 ವರ್ಷದ ಮಗ ಅಗಸ್ತ್ಯ ನಂದ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದಾರಂತೆ. ಅಗಸ್ತ್ಯ ನಂದ ಅವರ ಕಿರುಚಿತ್ರವನ್ನ ಅಮಿತಾಬ್ ಮತ್ತು ಜಯಾ ನೋಡಿದ್ದು, ಇವನೊಬ್ಬ ಉತ್ತಮ ನಿರ್ದೇಶನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರಂತೆ. ಕೇವಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾತ್ರವಲ್ಲದೇ, ಸಂಗೀತ ನಿರ್ದೇಶನ ಕೂಡ ಅಗಸ್ತ್ಯ ಮಾಡುತ್ತಾರಂತೆ.

ಅಮಿತಾಬ್ ಬಚ್ಚನ್ ನಂತರ ಕಿಚ್ಚ ಸುದೀಪ್.!

amitabh bachchan grandson agastya nanda entry to bollywood

ಸದ್ಯ, ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಅಗಸ್ತ್ಯ ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಸಿನಿಮಾಗೂ ನಿರ್ದೇಶನ ಮಾಡುವ ಸಾಧ್ಯತೆ ಇದೆಯಂತೆ. ಒಟ್ನಲ್ಲಿ, ಬಚ್ಚನ್ ಕುಟುಂಬದಿಂದ ಮತ್ತೊಂದು ಕುಡಿ ಸಿನಿ ಜಗತ್ತಿಗೆ ಬರಲು ಸಜ್ಜಾಗಿರುವುದು ಬಿಗ್-ಬಿ ಅಭಿಮಾನಿಗಳಿಗೆ ಸಂತಸ ನೀಡಿದೆ.

English summary
Reports are doing the rounds that Amitabh Bachchan's grandson Agastya Nanda is all set to debut in Bollywood and the news has excited a lot of people. Agastya Nanda is Shweta Nanda and Nikhil Nanda’s 17 year old son.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X