»   » ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ

ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ

Posted By:
Subscribe to Filmibeat Kannada

ಬಾಲಿವುಡ್ ನಟ ಅಮಿತಾಬ್ ಬಚ್ಚನ್ (75) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರೀಕರಣದ ವೇಳೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಜೋದ್ ಪುರ್ ದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಮಿತಾಬ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ವಿಶ್ರಾಂತಿಯಲ್ಲಿದ್ದಾರೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಿಗ್ ಬಿ ''ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಚಿತ್ರೀಕರಣ ವೇಳೆ ಆಯಾಸವಾಯಿತು. ಅಲ್ಲಿಯೇ ಇದ್ದ ವೈದ್ಯರ ತಂಡ ಪರೀಕ್ಷಿಸಿ ಜೋಧ್ ಪುರ ಆಸ್ಪತ್ರೆಗೆ ದಾಖಲಿಸಿತು. ನಾನು ಸದ್ಯ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ'' ಎಂದು ತಮ್ಮ ಬ್ಲ್ಯಾಗ್ ನಲ್ಲಿ ಬರೆದುಕೊಂಡಿದ್ದಾರೆ.

ನೋವಿನಲ್ಲಿದ್ದರೂ ವಿರುಷ್ಕಾ ರಿಸೆಪ್ಶನ್ನಿಗೆ ಬಂದ ಅಮಿತಾಬ್

Amitabh bachchan hospitalized

''ಏನನ್ನಾದರೂ ಸಾಧನೆ ಮಾಡಬೇಕು ಎಂದಾಗ ಇಂಥಹ ಹೋರಾಟ ನಡೆಯುವ ಅವಶ್ಯಕತೆಯಿದೆ. ಯಾವುದೇ ಹೋರಾಟವಿಲ್ಲದೇ ನೋವಿಲ್ಲದೇ ಕಣ್ಣೀರು ಹಾಗೂ ಬೆವರು ಹನಿಯಿಲ್ಲದೇ ಏನನ್ನೂ ಸಾಧಿಸಲಾಗದು'' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ಏಳು ದಿನಗಳಿಂದ ಅಮಿತಾಬ್ ಬಚ್ಚನ್ ಜೋಧ್ ಪುರದಲ್ಲಿ ನಡೆಯುತ್ತಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಮೀರ್ ಖಾನ್ ನಾಯಕರಾಗಿರುವ ಈ ಚಿತ್ರದಲ್ಲಿ ಅಮಿತಾಬ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

1970 ಮತ್ತು 1980ರ ದಶಕದಲ್ಲಿ ಸ್ಟಂಟ್ ಮಾಡಿದ್ದರ ಪರಿಣಾಮ ಈಗಲೂ ಹಳೆಯ ನೋವು ಕಾಡುತ್ತಿದೆ ಎಂದು ಈ ಹಿಂದೆ ಅಮಿತಾಬ್ ಹೇಳಿಕೊಂಡಿದ್ದರು. ಹೀಗಿದ್ದರೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಬಿಗ್-ಬಿ

English summary
Amitabh Bachchan fell ill during the shooting 0f Vijay Krisha Acharya's period heist drama Thugs of Hindostan in Jodhpur. He has undergone treatment and is stable now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada