»   » ವೆಲ್ ಕಮ್ ಬ್ಯಾಕ್ ಅಮಿತಾಬ್ -ರೇಖಾ

ವೆಲ್ ಕಮ್ ಬ್ಯಾಕ್ ಅಮಿತಾಬ್ -ರೇಖಾ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುಮಾರು 2 ದಶಕಗಳ ಹಿಂದೆ ಹಿಂದಿಚಿತ್ರರಂಗ ಕ್ರೇಜ್ ಹುಟ್ಟಿಸಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಚಿರಸುಂದರಿ ರೇಖಾ ಮತ್ತೆ ಆನ್ ಸ್ಕ್ರೀನ್ ಒಂದಾಗ್ತಾರಂತೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.

ಇದಕ್ಕೆ ಪೂರಕವಾಗಿ ಅಮಿತಾಬ್ ಬಚ್ಚನ್ ಜತೆ ಕೃಷ್ಣ ಸುಂದರಿ ರೇಖಾ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂಬ ಚಿತ್ರಇಂಟರ್ನೆಟ್ ನಲ್ಲಿ ಹರಿದಾಡಿತ್ತು. ಆದರೆ, ಈ ಅಮರ ಜೋಡಿಗೆ ಆನ್ ಸ್ಕ್ರೀನ್ ವೆಲ್ ಕಮ್ ಬ್ಯಾಕ್ ಹೇಳಲು ಅನೀಸ್ ಬಾಜ್ಮಿ ಸಿದ್ಧರಾಗಿದ್ದಾರೆ.

ವೆಲ್ ಕಮ್ ಬ್ಯಾಕ್ ಎಂಬ ಚಿತ್ರ ತೆಗೆದು ಯಶಸ್ವಿಯಾಗಿದ್ದ ಅನೀಸ್ ಬಾಜ್ಮಿ ಈಗ ವೆಲ್ ಕಮ್ ಬ್ಯಾಕ್ ಚಿತ್ರ ತೆರೆಗೆ ತರಲು ಸಿದ್ಧರಾಗುತ್ತಿದ್ದಾರೆ. 1981 ರಲ್ಲಿ ಬಿಡುಗಡೆಯಾದ ಸಿಲ್ ಸಿಲಾ ಚಿತ್ರದಲ್ಲಿ ಅಮಿತಾಬ್-ರೇಖಾ ಜೋಡಿ ಕಾಣಿಸಿಕೊಂಡಿತ್ತು. ಈಗ ಸುಮಾರು ಎರಡು ದಶಕಗಳ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Amitabh Bachchan And Rekha To Work Together In Welcome Back

2007ರಲ್ಲಿ ಬಿಡುಗಡೆಯಾದ ವೆಲ್ ಕಮ್ ಚಿತ್ರದ ಸೀಕ್ವೆಲ್ ಚಿತ್ರವನ್ನು ನಿರ್ಮಿಸಲು ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ಹಾಗೂ ನಿರ್ದೇಶಕ ಅನೀಸ್ ಬಾಜ್ಮಿ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಬಚ್ಚನ್ ಹಾಗೂ ರೇಖಾ ನಟಿಸಬೇಕೆಂಬುದು ಚಿತ್ರತಂಡದ ಬಯಕೆ, ಚಿತ್ರತಂಡ ಈಗಾಗಲೇ ಅಮಿತಾಭ್ ಬಚ್ಚನ್ ರನ್ನು ಭೇಟಿ ಮಾಡಿ, ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ.

ವೆಲ್ ಕಮ್ ಸೀಕ್ವೆಲ್ ನಲ್ಲಿ ದಿ. ಶ್ರೇಷ್ಠ ನಟ ಫಿರೋಜ್ ಖಾನ್ ನಟಿಸಿದ್ದ ಡಾನ್ ಪಾತ್ರದಲ್ಲಿ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರೇಖಾ ಚಿತ್ರವನ್ನು ಒಪ್ಪಿಕೊಂಡ ಪಕ್ಷದಲ್ಲಿ ಶ್ರೀಮಂತ ಮಹಿಳೆ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನೀಸ್ ಬಾಜ್ಮೀ, ಅಮಿತಾಬ್ ಹಾಗೂ ರೇಖಾ ಅವರನ್ನು ಮತ್ತೊಮ್ಮೆ ಒಟ್ಟಿಗೆ ನಟಿಸುವಂತೆ ಮಾಡಲು ಯತ್ನಿಸುತ್ತಿದ್ದೇವೆ. ಅಮಿತಾಬ್ ಏನೋ ಒಪ್ಪಿಗೆ ಸೂಚಿಸಿದ್ದಾರೆ. ನಾನು ರೇಖಾರವರ ಅಭಿಮಾನಿ. ಇದೊಂದು ಹಾಸ್ಯಮಯ ಚಿತ್ರವಾಗಿರುವುದರಿಂದ ಈ ಚಿತ್ರಕ್ಕೆ ರೇಖಾ ಒಪ್ಪುವ ನಿರೀಕ್ಷೆ ಇದೆ. ಆದರೆ, ಇನ್ನೂ ರೇಖಾ ಜೊತೆ ಮಾತಾಡಿಬೇಕು ಎಂದು ಬಾಜ್ಮಿ ಹೇಳಿದ್ದಾರೆ.

ಈ ಹಿಂದೆ ಅಮಿತಾಬ್ ಹಾಗೂ ರೇಖಾ ದೋ ಅಂಜಾನೆ, ಮುಖಾದ್ದರ್ ಕಾ ಸಿಕಂದರ್, ಮಿ.ನಟ್ವರ್ ಲಾಲ್, ಸುಹಾಗ್, ಸಿಲ್ ಸಿಲ್ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು.

ಜಾನ್ ಅಬ್ರಹಾಂ ಹಾಗೂ ಶ್ರುತಿ ಹಾಸನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮೊದಲ ಅವತರಣಿಕೆಯಲ್ಲಿ ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ನಟಿಸಿದ್ದರು. ನಾನಾ ಪಾಟೇಕರ್ ಹಾಗೂ ಅನಿಲ್ ಕಪೂರ್ ಅವರು ಎಂದಿನಂತೆ ಉದಯ ಕುಮಾರ್ ಶೆಟ್ಟಿ ಹಾಗೂ ಮಜ್ನು ಭಾಯಿ ಪಾತ್ರದಲ್ಲಿ ಮತ್ತೊಮ್ಮೆ ರಂಜಿಸಲಿದ್ದಾರೆ.

ಅಂದಹಾಗೆ ಅಕ್ಟೋಬರ್ 10, 1954ರಲ್ಲಿ ತಮಿಳು ಚಿತ್ರರಂಗದ ಜೆಮಿನಿ ಗಣೇಶನ್ ಮತ್ತು ತೆಲುಗು ಚಿತ್ರರಂಗದ ಪುಷ್ಪವಲ್ಲಿ ದಂಪತಿಗೆ ಹುಟ್ಟಿದ ಕೂಸು ಈಗ ಹಿಂದಿ ಚಿತ್ರರಂಗದ ಎವರ್ ಗ್ರೀನ್ ಚೆಲುವೆ ಎನಿಸಿರುವ ರೇಖಾ. ಹ್ಯಾಪಿ ಬರ್ಥಡೇ ರೇಖಾ

English summary
Amitabh Bachchan And Rekha To Work Together In Welcome Back If reports are to be believed, bollywood's most prolific on-screen couple, Amitabh Bachchan and Rekha, may reunite for a movie. The film we are talking about is Anees Bazmee's Welcome Back which is a sequel to the superhit Welcome
Please Wait while comments are loading...